Viral Video: ವಿಶ್ವ ಆದಿವಾಸಿ ದಿನಾಚರಣೆಯಂದು ಮಮತಾ ಬ್ಯಾನರ್ಜಿ ‘ಕುಣಿಯೋಣ ಬಾರಾ’..!
ಪಶ್ಚಿಮ ಬಂಗಾಳದ ಜಾರ್‌ಗ್ರಾಮ್‌ನಲ್ಲಿ ವಿಶ್ವ ಬುಡಕಟ್ಟು ದಿನಾಚರಣೆ ಆಯೋಜಿಸಲಾಗಿತ್ತು.
ಜಾರ್‌ಗ್ರಾಮ್: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಅನೇಕ ಕಾರ್ಯಕ್ರಮಗಳಲ್ಲಿ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ. ಅವರ ಡ್ಯಾನ್ಸ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದೀಗ ಮತ್ತೊಂದು ಅಂತಹದ್ದೇ ವಿಡಿಯೋ ಸಖತ್ ಸೌಂಡ್ ಮಾಡುತ್ತಿದೆ. ಪಶ್ಚಿಮ ಬಂಗಾಳದ ಜಾರ್‌ಗ್ರಾಮ್‌ನಲ್ಲಿ ಆಯೋಜಿಸಿದ್ದ ವಿಶ್ವ ಬುಡಕಟ್ಟು ದಿನಾಚರಣೆ(World Tribal Day)ಯ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಅವರು ಕಲಾವಿದರೊಂದಿಗೆ ಹೆಜ್ಜೆ ಹಾಕಿದ್ದಾರೆ. ಬ್ಯಾನರ್ಜಿ ಅವರು ನೃತ್ಯಗಾರರೊಂದಿಗೆ ಸಖತ್ ಆಗಿ ಸ್ಟೆಪ್ಸ್ ಹಾಕಿ ಗಮನ ಸೆಳೆದಿದ್ದಾರೆ.
ಮಮತಾ ಬ್ಯಾನರ್ಜಿ(Mamata Banerjee) ಬಿಳಿ ಸೀರೆಯ ಮೇಲೆ ಸಾಂಕೇತಿಕ ಬುಡಕಟ್ಟು ಉಡುಪನ್ನು ಧರಿಸಿದ್ದರು. ಬಳಿಕ ವೇದಿಕೆ ಮೇಲೆ ಬುಡಕಟ್ಟು ಸಂಗೀತಕ್ಕೆ ನೃತ್ಯ ಮಾಡಿದರು. ಇದಲ್ಲದೆ ಸ್ವತಃ ಅವರೇ ಡ್ರಮ್ ಬಾರಿಸುವ ಮೂಲಕ ಸಂಭ್ರಮಿಸಿದ್ದಾರೆ. ಈ ವೇಳೆ ನೆರೆದಿದ್ದ ಪ್ರೇಕ್ಷಕರು ಬ್ಯಾನರ್ಜಿಯವರ ನೃತ್ಯವನ್ನು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Free Ration : ಕೋವಿಡ್ ಸಮಯದಲ್ಲಿ 80 ಕೋಟಿ ಭಾರತೀಯರಿಗೆ 'ಉಚಿತ ಪಡಿತರ' : ಪ್ರಧಾನಿ ಮೋದಿ
Tribal People)ಭೂಮಿಯ ಹಕ್ಕುಗಳನ್ನು ರಕ್ಷಿಸಲು ದೇಶವು ಕಾನೂನು ತರಬೇಕು’ ಎಂದು ಹೇಳಿದರು. ಇದೇ ವೇಳೆ ಬ್ಯಾನರ್ಜಿ ಬುಡಕಟ್ಟು ಸಮುದಾಯದ ಪ್ರಮುಖ ವ್ಯಕ್ತಿಗಳನ್ನು ಗೌರವಿಸಿದರು. 3ನೇ ಬಾರಿ ಮುಖ್ಯಮಂತ್ರಿಯಾದ ಬಳಿಕ ಜಂಗಲಮಹಲ್‌ಗೆ ಬ್ಯಾನರ್ಜಿಯವರ ಮೊದಲ ಭೇಟಿ ಇದಾಗಿತ್ತು. ‘ಇಂದು ವಿಶ್ವ ಬುಡಕಟ್ಟು ದಿನ. ಇಂದು ಕ್ವಿಟ್ ಇಂಡಿಯಾ ಚಳುವಳಿಯನ್ನು ಸಹ ಆರಂಭಿಸಲಾಯಿತು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆದಿವಾಸಿ ಸಹೋದರ ಸಹೋದರಿಯರ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಅವರಿಗೆ ನಾನು ತಲೆಬಾಗುತ್ತೇನೆ’ ಅಂತಾ ಸಿಎಂ ಬ್ಯಾನರ್ಜಿ ಇದೇ ವೇಳೆ ಹೇಳಿದರು.
‘ನಾವು ಕಳೆದ 3 ವರ್ಷಗಳಿಂದ ‘ಆದಿವಾಸಿ ದಿವಸ್’ ಆಚರಿಸುತ್ತಿದ್ದೇವೆ. ನಾವು 2017ರಲ್ಲಿ ಜಾರ್‌ಗ್ರಾಮ(Jhargram)ವನ್ನು ಹೊಸ ಜಿಲ್ಲೆಯನ್ನಾಗಿ ಮಾಡಿದ್ದೇವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿಶ್ವವಿದ್ಯಾಲಯ, 4 ಕಾಲೇಜುಗಳು ಮತ್ತು ಕ್ರೀಡಾ ಸಂಕೀರ್ಣವನ್ನು ಈ ಜಿಲ್ಲೆಗೆ ಒದಗಿಸಲಾಗಿದೆ. ನಾವು ಬುಡಕಟ್ಟು ಭಾಷೆಗಳನ್ನು ಗೌರವಿಸುತ್ತೇವೆ. ಸಂತಾಲಿ ಭಾಷೆಯನ್ನು ಅಧ್ಯಯನ ಮಾಡುವ ಏಕೈಕ ರಾಜ್ಯ ಪಶ್ಚಿಮ ಬಂಗಾಳ’ ಅಂತಾ ಹೇಳಿದರು.
ಇದನ್ನೂ ಓದಿ: PM Kisan ಯೋಜನೆಯ 9ನೇ ಕಂತಿನ ಹಣ ಈ ದಿನ ರೈತರ ಖಾತೆಗೆ : ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ ಪ್ರಧಾನಿ ಮೋದಿ
ಬ್ಯಾನರ್ಜಿ ಅವರು ಜಾರ್‌ಗ್ರಾಮ್‌ಗೆ ಹೋಗುವ ಮುನ್ನ ಹೌರಾ ಜಿಲ್ಲೆಯ ಉದಯನಾರಾಯಣಪುರದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದಾರೆ ಎಂದು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ