Tumkur Lokasabha Election Result 20204 :ವಲಸೆ ಹಕ್ಕಿಗೆ ನೆಲೆ ನೀಡಿದ ತುಮಕೂರು ಜನ : ಇತಿಹಾಸವನ್ನೇ ಉಲ್ಟಾ ಮಾಡಿ ಗೆದ್ದ ಸೋಮಣ್ಣ

Tumkur Lokasabha Election Result 2024 :  ಹೊರಗಿನವರು ಅನ್ನೋ ಕೂಗಿನ ನಡುವೆಯೂ ಸೋಮಣ್ಣ ಭರ್ಜರಿ ಗೆಲುವನ್ನೇ  ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಸೋಮಣ್ಣಗೆ ತುಮಕೂರು ರಾಜಕೀಯ ಪುನರ್ಜನ್ಮ ನೀಡಿದೆ.

Written by - Ranjitha R K | Last Updated : Jun 4, 2024, 06:10 PM IST
  • ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹೇಗಿದೆ ಲೆಕ್ಕಾಚಾರ
  • ಈ ಕ್ಷೇತ್ರದಲ್ಲಿ ಗೆಲ್ಲುವವರು ಯಾರು
  • ಗೆದ್ದು ಬರುತ್ತಾರಾ ಸೋಮಣ್ಣ
Tumkur Lokasabha Election Result 20204 :ವಲಸೆ ಹಕ್ಕಿಗೆ ನೆಲೆ ನೀಡಿದ ತುಮಕೂರು ಜನ : ಇತಿಹಾಸವನ್ನೇ ಉಲ್ಟಾ ಮಾಡಿ ಗೆದ್ದ ಸೋಮಣ್ಣ title=

Tumkur Lokasabha Election Result :ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪೊಇ ಅಭ್ಯರ್ಥಿ ವಿ ಸೋಮಣ್ಣ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದು ಬೀಗಿದ್ದಾರೆ. ಹೊರಗಿನವರು ಅನ್ನೋ ಕೂಗಿನ ನಡುವೆಯೂ ಸೋಮಣ್ಣ ಭರ್ಜರಿ ಗೆಲುವನ್ನೇ  ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಸೋಮಣ್ಣಗೆ ತುಮಕೂರು ರಾಜಕೀಯ ಪುನರ್ಜನ್ಮ ನೀಡಿದೆ. ಸತತ ಎರಡು ಸೋಲಿನ ನೋವನ್ನು ತುಮಕೂರು ಮತದಾರರು ಇದೀಗ ಮರೆಸಿದ್ದಾರೆ. 

7,15,295 ಮತಗಳನ್ನ ಪಡೆದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ, 1,73,632 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಮುದ್ದಹನುಮೇಗೌಡ 5,42,263 ಮತಗಳನ್ನ ಪಡೆದು ಎರಡನೇ ಸ್ದಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಒಟ್ಟಿನಲ್ಲಿ ಜಿದ್ದಾಜಿದ್ದಿನ ಕಣದಲ್ಲಿ ತುಮಕೂರು‌ ಲೋಕಸಭಾ ಕ್ಷೇತ್ರ ಬಿಜೆಪಿ ಪಾಲಾಗಿದೆ. 

ಬಿಜೆಪಿ ಕಾರ್ಯಕರ್ತರ ಸಂಭ್ರಮ : 

ಈ ಮಧ್ಯೆ, ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.ತುಮಕೂರು ವಿವಿ ಮುಂಭಾಗ ಕಾರ್ಯಕರ್ತರು  ಪಟಾಕಿ ಸಿಡಿಸಿದ್ದಾರೆ.ಕೊರಟಗೆರೆ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಬಿಜೆಪಿ ಮುಖಂಡ ಅನಿಲ್ ಕುಮಾರ್ ಹಾಗೂ ಜೆಡಿಎಸ್ ನರಸಿಂಹರಾಜು ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಗೃಹ ಸಚಿವರ ಕ್ಷೇತ್ರ ಕೊರಟಗೆರೆಯಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು. 

ಇತಿಹಾಸ ಬರೆದ ಸೋಮಣ್ಣ : 

ಈ ಕ್ಷೇತ್ರದ ಒಂದು ವಿಶೇಷತೆ ಇದೆ. ಇಲ್ಲಿಯ ಮತದಾರ ಸ್ಥಳೀಯರಿಗೇ ಮಣೆ ಹಾಕುವುದು. ಹಾಗಾಗಿಯೇ ಇಲ್ಲಿಯವರೆಗೆ ಹೊರಗಿನಿಂದ ಬಂದು ಚುನಾವಣೆಗೆ ಸ್ಪರ್ಧಿಸಿರುವ ಯಾವೊಬ್ಬನೂ ಈ ಕ್ಷೇತ್ರದಲ್ಲಿ ಗೆದ್ದಿರಲಿಲ್ಲ. 2019ರ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರೇ ಸೋತ ಕ್ಷೇತ್ರ ಇದು. ಆದರೆ ಈ ಬಾರಿ ಮಾತ್ರ ತುಮಕೂರು ಜನ ವಲಸೆ ಅಭ್ಯರ್ಥಿಯನ್ನು ತಬ್ಬಿಕೊಂಡಿದ್ದಾರೆ.ಅದೆಷ್ಟೇ ಬಂಡಾಯ ಎದುರಾದರೂ ಗೆದ್ದೇ ಗೆಲ್ಲುತ್ತೇನೆ ಎನ್ನುವ  ಹಠದೊಂದಿಗೆ ಅಖಾಡಕ್ಕೆ ಇಳಿದ ಸೋಮಣ್ಣ ಕೊನೆಗೂ ಇತಿಹಾಸ ನಿರ್ಮಿಸಿದ್ದಾರೆ.   

ಕ್ಷೇತ್ರದಲ್ಲಿ ಹೊರಗಿನ ಅಭ್ಯರ್ಥಿ ಎನ್ನುವ ಗೊಂದಲ ಆರಂಭದಿಂದಲೂ ಬಿಜೆಪಿ ಕಾರ್ಯಕರ್ತರಲ್ಲಿ ಕೇಳಿ ಬಂದಿತ್ತು. ವಲಸೆ ಅಭ್ಯರ್ಥಿ ಎನ್ನುವ ಕಾರಣಕ್ಕೆ  ಸ್ಥಳೀಯ ನಾಯಕರ ಬಂಡಾಯ ಬಿಸಿಯನ್ನು ಸೋಮಣ್ಣ ಎದುರಿಸಿದ್ದಾರೆ. ಹಾಗೆ ನೋಡಿದರೆ ಕಾಂಗ್ರೆಸ್‌ಗೆ ಅಭ್ಯರ್ಥಿ ಮುದ್ದಹನುಮೇಗೌಡರಿಗೆ ಅಂಥಹ ಯಾವುದೇ ಗೊಂದಲ ಇರಲಿಲ್ಲ. ಆದರೂ ಕ್ಷೇತ್ರದ ಜನ ಸೋಮಣ್ಣ ಕೈ ಹಿಡಿದಿದ್ದಾರೆ.  

ಇದನ್ನೂ ಓದಿ : ಚಾಮರಾಜನಗರದಲ್ಲಿ ಕಾಂಗ್ರೆಸ್- ಬಿಜೆಪಿ ಜಿದ್ದಾಜಿದ್ದಿ: ಯಾರೇ ಗೆದ್ದರೂ ಮೊದಲ ಬಾರಿ ಸಂಸತ್ ಗೆ ಪ್ರವೇಶ

ತುಮಕೂರು ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲೂ ಇದ್ದದ್ದು ಕಾಂಗ್ರೆಸ್‌ ಪ್ರಾಬಲ್ಯ. ಹಳೆಯ ಹೊಸ ಘಟಾನುಘಟಿ ಕಾಂಗ್ರೆಸ್ ನಾಯಕರ ಶಕ್ತಿ, ಕೊರಟಗೆರೆಯಲ್ಲಿಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಮಧುಗಿರಿಯಲ್ಲಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ,  ತುಮಕೂರು ಗ್ರಾಮಾಂತರದಲ್ಲಿ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್‌, ಎಸ್‌.ಟಿ.ಶ್ರೀನಿವಾಸ್‌, ಗುಬ್ಬಿಯಲ್ಲಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಅವರಂಥಹ ಬಲಿಷ್ಠ ನಾಯಕರಿದ್ದರೂ ಮುದ್ದ ಹನುಮೇ ಗೌಡರು ಸೋಲು ಕಾಣುವಂತಾಗಿದೆ. .   

ಇದನ್ನೂ ಓದಿ : ಸಚಿವ ನಾಗೇಂದ್ರ ರಾಜಿನಾಮೆ ಕೇಳಿಲ್ಲ:ಮುಖ್ಯಮಂತ್ರಿ ಸಿದ್ದರಾಮಯ್ಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News