ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಜುಲೈ 27) ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ರಾಷ್ಟ್ರ ರಾಜಧಾನಿಗೆ ಆಗಮಿಸಿದ ಒಂದು ದಿನದ ನಂತರ ಪ್ರಧಾನಿಯನ್ನು ಭೇಟಿಯಾಗಿದ್ದಾರೆ.
ಈ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮಮತಾ(Mamata Banerjee) ಅವರು ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದ ಮೊದಲ ಭೇಟಿ ಇದಾಗಿದೆ.
ಇದನ್ನೂ ಓದಿ : Baal Aadhaar card : ಬಾಲ್ ಆಧಾರ್ ಕಾರ್ಡ್ : ದಾಖಲಾತಿಗೆ ಮಗುವಿನ ಆಸ್ಪತ್ರೆ ಡಿಸ್ಚಾರ್ಜ್ ಸ್ಲಿಪ್ ಸಾಕು
ಅವರ ಭೇಟಿಯು ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಸಂಭಂದವಿದೆ, ಇದರಲ್ಲಿ ಪೆಗಾಸಸ್ ಸ್ಪೈವೇರ್( Pegasus spyware) ಮೂಲಕ ಕಣ್ಗಾವಲು ಆರೋಪ, ಬೆಲೆ ಏರಿಕೆ ಮತ್ತು ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ವಿರೋಧ ಪಕ್ಷಗಳು ಪ್ರತಿಭಟಿಸುತ್ತಿವೆ. ಹಿಂದಿನ ದಿನ ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಮತ್ತು ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರನ್ನು ಭೇಟಿಯಾದರು.
ತಾನು ಮತ್ತು ಮಮತಾ ಬ್ಯಾನರ್ಜಿ ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡಿದ್ದೇವೆ ಎಂದು ಶರ್ಮಾ(Anand Sharma) ಮಾಧ್ಯಮಗಳಿಗೆ ತಿಳಿಸಿದರು. "ಅವರು ಇತ್ತೀಚಿಗೆ ಚುನಾವಣೆಯಲ್ಲಿ ಹೋರಾಡಿ ಗೆದ್ದಿದ್ದಕ್ಕಾಗಿ ನಾನು ಅವರನ್ನು ಪ್ರಶಂಸಿಸುತ್ತೇನೆ. ಚುನಾವಣೆಯ ಜಯದ ನಂತರ ಅವರು ಮೊದಲ ಬಾರಿಗೆ ದೆಹಲಿಗೆ ಬಂದಿದ್ದಾರೆ, ಹಾಗಾಗಿ ನಾನು ಬಂದು ಅವರೊಂದಿಗೆ ಚಹಾ ಸೇವಿಸಿದೆ" ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ಇದನ್ನೂ ಓದಿ : Viral Video: ಮದುವೆ ಮಂಟಪದಲ್ಲಿಯೇ ಕಬಡ್ಡಿ ಆಡಿದ ವಧು-ವರ..!
ಮಮತಾ ಬ್ಯಾನರ್ಜಿ ಅವರು ತಮ್ಮದೇ ಪಕ್ಷವನ್ನು ರಚಿಸುವ ಮೊದಲು ಕಾಂಗ್ರೆಸ್‌ನಲ್ಲಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.