Video Viral- ಕರೋನಾವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆಯೊಂದೇ ಪರಿಹಾರ. ಹಾಗಾಗಿಯೇ ಸರ್ಕಾರ ಮತ್ತು ಅಧಿಕಾರಿಗಳು ಕೋವಿಡ್ ಲಸಿಕೆ ತೆಗೆದುಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ದೇಶದಲ್ಲಿ ವಿಶೇಷವಾಗಿ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಲಸಿಕೆ ಹಿಂಜರಿಕೆ ಇನ್ನೂ ಮುಂದುವರೆದಿದೆ. ಹಲವು ಸಂಸ್ಥೆಗಳು ಜನರನ್ನು ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಲು ಆಕರ್ಷಕ ಕೊಡುಗೆಗಳನ್ನು ನೀಡುತ್ತಲೇ ಇವೆ. ಈ ಮದ್ಯೆ ವ್ಯಕ್ತಿಯೋರ್ವನ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಜನರನ್ನು ಲಸಿಕೆ ಪಡೆಯುವಂತೆ ಪ್ರಚೋದಿಸುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.


COMMERCIAL BREAK
SCROLL TO CONTINUE READING

ಸೋಶಿಯಲ್ ಮಿಡಿಯಾದಲ್ಲಿ (Social Media) ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಬಸ್ ನಿಲ್ದಾಣದಲ್ಲಿ ಕೋವಿಡ್ -19 ಲಸಿಕೆ ಕಾರ್ಯಕ್ರಮವನ್ನು ಪ್ರಚಾರ ಮಾಡುವುದನ್ನು ಕಾಣಬಹುದು. ತಮಾಷೆಯೆಂದರೆ ತರಕಾರಿ ಮಾರಾಟಗಾರರ ಧ್ವನಿಯಲ್ಲಿ  "ಲಸಿಕೆ, ಲಸಿಕೆ. ಪೆಹ್ಲಾ ಡೋಸ್ ದೂಸ್ರಾ ಡೋಸ್ (ಮೊದಲ ಡೋಸ್, ಎರಡನೇ ಡೋಸ್)'' ಎಂದು ಆತನ ಹಾಡುವ ವಿಧಾನ.


ಇದನ್ನೂ ಓದಿ- Funny Video: ನಡು ರಸ್ತೆಯಲ್ಲಿ ಬ್ಯಾಂಗ್ ಡಾನ್ಸ್ ಮಾಡಿದ ಹುಡುಗಿ, ವಿಡಿಯೋ ಕಂಡು ನೆಟಿಜನ್‌ಗಳು ಹೇಳಿದ್ದೇನು?


ಸಭೀ ನೀ ಲಸಿಕೆ ಲೇ ಲಿ ಹೈ. ಆಪ್ ರಹೇ ಗಯೇ. ಚಲೋ... ವ್ಯಾಕ್ಸಿನ್... ವ್ಯಾಕ್ಸಿನ್... ಚಲೋ ಭಾಯಿ ಕರೋನಾ ವ್ಯಾಕ್ಸಿನ್. ಜಾನ್ ಬಚಾನೇ ವಾಲಿ ವ್ಯಾಕ್ಸಿನ್ ಎಂದು ಈ ವೈರಲ್ ವಿಡಿಯೋದಲ್ಲಿ ವ್ಯಕ್ತಿ ಹಾಡುತ್ತಿದ್ದಾರೆ. ಈ ವಿಡಿಯೋ ಗುಜರಾತ್‌ನದ್ದು ಎಂದು ಹೇಳಲಾಗುತ್ತಿದೆ. ಆದರೆ ವಿಡಿಯೋ ಮೂಲವು ಇನ್ನೂ ಸ್ಪಷ್ಟವಾಗಿಲ್ಲ.


ವೀಡಿಯೊವನ್ನು ಇಲ್ಲಿ ನೋಡಿ:


Viral Video) ಹಂಚಿಕೊಂಡಿದೆ ಮತ್ತು "ಈ ಬಾಸ್‌ನಂತೆ ಲಸಿಕೆಯನ್ನು ಉತ್ತೇಜಿಸುವುದು" ಎಂದು ಶೀರ್ಷಿಕೆ ನೀಡಿದ್ದಾರೆ.


ಇದನ್ನೂ ಓದಿ- Viral Video: ಇಡೀ ಜಿಂಕೆಯನ್ನೇ ನುಂಗುತ್ತಿರುವ ದೈತ್ಯ ಹೆಬ್ಬಾವು, ಇಲ್ಲಿದೆ ಹೃದಯ ಮಿಡಿಯುವ ವಿಡಿಯೋ


ಈ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಉಲ್ಲಾಸದ ಕಾಮೆಂಟ್‌ಗಳನ್ನು ಆಕರ್ಷಿಸುತ್ತಿದೆ. ಒಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ, ಸಹೋದರ ಮಲಗಿರುವವರನ್ನು  ಎಬ್ಬಿಸಿ ಲಸಿಕೆ ಹಾಕಲು ಬಯಸುವಿರಾ ("ಸೋಯೆ ಲೋಗೋ ಕೋ ಜಗಕೆ ಲಸಿಕೆ ಲಗನ ಚಾಹತಾ ಹೈ") ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ನೆಟ್ಟಿಗರು, ಸಹೋದರ ಕೆಲವು ದಿನಗಳ ಹಿಂದೆ ಬಹಳ ಕಷ್ಟದಿಂದ ಲಸಿಕೆ ಸಿಗುತ್ತಿತ್ತು... ಈಗ ಲಸಿಕೆ ಹಾಕಿಸುವಂತೆ ಜನರನ್ನು ಗೋಗರೆಯಬೇಕಿದೆ  ("ಭಾಯ್ ಕುಚ್ ದಿನ್ ಪೆಹ್ಲೆ ಮುಶ್ಕಿಲ್ ಸೆ ಲಸಿಕೆ ಮಿಲ್ ರಹಿ ಥಿ .... ಔರ್ ಅಬ್ ಬುಲಾನಾ ಪ್ಯಾಡ್ ರಹಾ") ಎಂದು ಬರೆದಿದ್ದಾರೆ. ಕಾಮೆಂಟ್ ಬಾಕ್ಸ್ ನಗುವ ಎಮೋಜಿಗಳಿಂದ ತುಂಬಿತ್ತು, ಅವರ ಉಲ್ಲಾಸದ ಪ್ರಚಾರ ತಂತ್ರಕ್ಕಾಗಿ ಅನೇಕರು ಆ ವ್ಯಕ್ತಿಯನ್ನು ಪ್ರಶಂಸಿಸಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.