Birds Amazing Viral Video: ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವ, ಸೆಲ್ಫಿ ತೆಗೆದುಕೊಳ್ಳುವ ಪಕ್ಷಿಗಳನ್ನು ನೋಡಿದ್ದೀರಾ... ಇಲ್ಲಿದೆ ತಮಾಷೆಯ ವಿಡಿಯೋ

Birds Amazing Viral Video: ಪಕ್ಷಿಗಳು ಸೆಲ್ಫಿ ತೆಗೆದುಕೊಳ್ಳುವುದನ್ನು, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದನ್ನು ನೀವು ನೋಡಿದ್ದೀರಾ, ಇಲ್ಲ ... ಹಾಗಾದರೆ ಈ ತಮಾಷೆಯ ವಿಡಿಯೋ ನೋಡಿ, ನಿಮ್ಮ ಮನಸ್ಸು ಸಂತೋಷವಾಗುತ್ತದೆ.

Written by - Yashaswini V | Last Updated : Sep 14, 2021, 12:53 PM IST
  • ಈ ವಿಡಿಯೋ ನೋಡಿದ ನಂತರ ನಿಮ್ಮ ಮುಖದಲ್ಲಿ ನಗು ಮೂಡುತ್ತದೆ
  • ಈ ವಿಡಿಯೋ ಎಷ್ಟು ಅದ್ಭುತವಾಗಿದೆ ಎಂದರೆ ಒಮ್ಮೆ ಇದನ್ನು ನೋಡಿದವರಿಗೆ ಪದೇ ಪದೇ ನೋಡಬೇಕು ಎಂದೆನಿಸುತ್ತದೆ
  • ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ಚರ್ಚೆಯಾಗುತ್ತಿದೆ
Birds Amazing Viral Video: ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವ, ಸೆಲ್ಫಿ ತೆಗೆದುಕೊಳ್ಳುವ ಪಕ್ಷಿಗಳನ್ನು ನೋಡಿದ್ದೀರಾ... ಇಲ್ಲಿದೆ ತಮಾಷೆಯ ವಿಡಿಯೋ title=
ಪಕ್ಷಿಗಳಿಗೂ ಕೈಗಳಿದ್ದರೆ ಹೇಗಿರುತ್ತಿತ್ತು! ಇಲ್ಲಿದೆ ಅನನ್ಯ ವಿಡಿಯೋ (Photo Credit- Video Grab)

Birds Amazing Viral Video: ನಮ್ಮ ನಿಮ್ಮಂತೆಯೇ ಕೈಗಳಿಂದ ಆಹಾರ ಸೇವಿಸುವ ಪಕ್ಷಿಗಳನ್ನು ನೀವು ಎಂದಾದರೂ ನೋಡಿದ್ದೀರಾ. ಪಕ್ಷಿಗಳು ಸೆಲ್ಫಿ ತೆಗೆದುಕೊಳ್ಳುವುದನ್ನು, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದನ್ನು ಎಂದಾದರೂ ನೋಡಿದ್ದೀರಾ...! ಊಹಿಸಿ, ಪಕ್ಷಿಗಳಿಗೂ ಕೂಡ ಕೈ ಇದ್ದಿದ್ದರೆ ಅವು ಹೇಗಿರುತ್ತಿದ್ದವು? 

ಈ ಅನನ್ಯ ವಿಡಿಯೋವನ್ನು  (Funny Videos) ಒಮ್ಮೆ ನೋಡಿದ ನಂತರ, ಪಕ್ಷಿಗಳ ಬಗ್ಗೆ ನಿಮ್ಮ ಆಲೋಚನೆಯು ಬದಲಾಗಬಹುದು. If birds have hands ಎಂಬ ಶೀರ್ಷಿಕೆಯೊಂದಿಗೆ ಶೇರ್ ಮಾಡಲಾಗಿರುವ 25 ಸೆಕೆಂಡುಗಳ ಈ ವಿಡಿಯೋದಲ್ಲಿ ಮಾನವರಂತೆ ಕೆಲಸ ಮಾಡುವ ನದಿಯಲ್ಲಿ ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ, ವಿವಿಧ ಭಂಗಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವ,  ಸಂಗೀತದ ಪರಿಕರಗಳನ್ನು ನುಡಿಸುವ, ಫೋನಿನಲ್ಲಿ ಮಾತನಾಡುತ್ತಾ ನಡೆಯುವ, ಕೊಡೆಹಿಡಿದು ನಡೆಯುವ, ಅಷ್ಟೇ ಅಲ್ಲ ಕಸರತ್ತು ಮಾಡುವ, ಪುಸ್ತಕ ಓದುವ ಪಕ್ಷಿಗಳನ್ನು ಕಾಣಬಹುದು ಈ ವೈರಲ್ ವಿಡಿಯೋವನ್ನು   (Viral Video)  ನೀವೂ ನೋಡಿ ಆನಂದಿಸಿ...

ಇದನ್ನೂ ಓದಿ- Viral Video- ಹಿಡಿಯಲು ಬಂದವನ ಗುಂಡಿಗೆಯನ್ನೇ ನಡುಗಿಸಿದ ಕಿಂಗ್ ಕೋಬ್ರಾ! ಹೃದಯ ಸಂಬಂಧಿತ ಕಾಯಿಲೆಯಿರುವವರು ಇದನ್ನು ನೋಡಬೇಡಿ

ಈ ವಿಡಿಯೋ ನೋಡಿದ ನಂತರ ನಿಮ್ಮ ಮುಖದಲ್ಲಿ ನಗು ಮೂಡುತ್ತದೆ. ಈ ವಿಡಿಯೋ ಎಷ್ಟು ಅದ್ಭುತವಾಗಿದೆ ಎಂದರೆ ಒಮ್ಮೆ ಇದನ್ನು ನೋಡಿದವರಿಗೆ ಪದೇ ಪದೇ ನೋಡಬೇಕು ಎಂದೆನಿಸುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ಚರ್ಚೆಯಾಗುತ್ತಿದೆ. ಆದರೂ ಈ ವಿಡಿಯೋ ನಿಜವಲ್ಲ. ಇದನ್ನು ಎಡಿಟ್ ಮಾಡಲಾಗಿದೆ, ಆದರೆ ಈ ವಿಡಿಯೋದಲ್ಲಿ ನೀವು ಸೃಜನಶೀಲತೆಯನ್ನು ನೋಡಲೇಬೇಕು. ಈ ವೀಡಿಯೋದಲ್ಲಿನ ಪ್ರಮುಖ ವಿಷಯವೆಂದರೆ ಇದನ್ನು ನೋಡಿದ ನಂತರ ನಾವು ಬೇರೆ ಪ್ರಪಂಚಕ್ಕೆ ಹೋಗುತ್ತಿದ್ದೇವೆ.

ಇದನ್ನೂ ಓದಿ- Viral Video: ಗರ್ಲ್ ಫ್ರೆಂಡ್ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ, ಮುಂದೇನಾಯ್ತು ನೀವೇ ನೋಡಿ...

ಈ ವಿಡಿಯೋವನ್ನು @DograTishaa ಎಂಬ Twitter ಬಳಕೆದಾರರು Twitter ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದೊಂದಿಗೆ, ಅವರು  ಪಕ್ಷಿಗಳಿಗೆ ಕೈಗಳಿದ್ದರೆ! ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು - ಯಾವುದಾದರೂ ಪಕ್ಷಿ ಈ ವೀಡಿಯೊವನ್ನು ನೋಡಿದರೆ, ಇದು ಸಂಭವಿಸಬಹುದೇ ಎಂದು ಪಕ್ಷಿಗೂ ಅನಿಸುತ್ತದೆ ಎಂದು ಬರೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News