Nivar ಚಂಡಮಾರುತದಿಂದಾಗಿ ಹಲವು ರೈಲುಗಳ ಸಂಚಾರ ರದ್ದು, ಪೂರ್ಣ ಪಟ್ಟಿಯನ್ನು ಇಲ್ಲಿ ಪರಿಶೀಲಿಸಿ
ನಿವಾರ್ ಚಂಡಮಾರುತದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ತಿರುವನಂತಪುರಂ ವಿಭಾಗದ ಆರು ವಿಶೇಷ ರೈಲುಗಳನ್ನು ಭಾರತೀಯ ರೈಲ್ವೆ ರದ್ದುಗೊಳಿಸಿದೆ.
ನವದೆಹಲಿ: ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವು ಚಂಡಮಾರುತದ ಸ್ವರೂಪ ಪಡೆದಿದೆ. ತೀವ್ರ ಚಂಡಮಾರುತವಾಗಿ ಬದಲಾಗಲಿರುವ ನಿವಾರ್ ಚಂಡಮಾರುತವು ಇಂದು ಸಂಜೆ ವೇಳೆಗೆ ಚೆನ್ನೈ, ಪುದುಚೇರಿಯನ್ನು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಮಧ್ಯೆ ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ನಿವಾರ್ ಚಂಡಮಾರುತದ (Nivar Cyclone) ಭೀತಿ ಎದುರಾಗಿದೆ. ಚಂಡಮಾರುತವು ಕಾರೈಕಲ್ ಮತ್ತು ಮಾಮಲ್ಲಾಪುರಂ ನಡುವಿನ ಕರಾವಳಿಯನ್ನು ಇಂದು (ನವೆಂಬರ್ 25) ತಡರಾತ್ರಿ ಅಪ್ಪಳಿಸಬಹುದು ಎಂದು ಹೇಳಲಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ (Indian Railways) ತಿರುವನಂತಪುರಂ ವಿಭಾಗದ ಆರು ವಿಶೇಷ ರೈಲುಗಳನ್ನು ರದ್ದುಗೊಳಿಸಿದೆ.
ಪ್ರಯಾಣಿಕರಿಗೆ ಪೂರ್ಣ ಶುಲ್ಕವನ್ನು ಹಿಂತಿರುಗಿಸಲಾಗುತ್ತದೆ:
ಭಾರತ ಹವಾಮಾನ ಇಲಾಖೆ (IMD) ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ನವೆಂಬರ್ 25 ರಂದು ತಿರುವನಂತಪುರಂ ವಿಭಾಗದ ಆರು ವಿಶೇಷ ರೈಲುಗಳನ್ನು ರದ್ದುಪಡಿಸಲಾಗಿದೆ. ರದ್ದಾದ ರೈಲುಗಳಿಗೆ ಈಗಾಗಲೇ ಮುಂಗಡ ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರಿಗೆ ಸಂಪೂರ್ಣ ಮರುಪಾವತಿ ನೀಡಲಾಗುವುದು ಎಂದು ಭಾರತೀಯ ರೈಲ್ವೆ ಹೇಳಿದೆ. ಇದರೊಂದಿಗೆ ರೈಲ್ವೆ ಇ-ಟಿಕೆಟ್ ಸ್ವಯಂಚಾಲಿತವಾಗಿ ರದ್ದಾಗಲಿದೆ. ಆದರೆ ಕೌಂಟರ್ ಟಿಕೆಟ್ ಅನ್ನು ಕೌಂಟರ್‌ನಿಂದಲೇ ರದ್ದುಗೊಳಿಸಬೇಕಾಗುತ್ತದೆ ಎಂದು ತಿಳಿಸಿದೆ.
ನಾಳೆ ಈ ರಾಜ್ಯಗಳಿಗೆ ಅಪ್ಪಳಿಸಲಿದೆ ನಿವಾರ್ ಚಂಡಮಾರುತ, ಹೈಅಲರ್ಟ್ ಘೋಷಣೆ
ಈ ರೈಲುಗಳನ್ನು ರದ್ದುಪಡಿಸಲಾಗಿದೆ
ರೈಲು ಸಂಖ್ಯೆ: 02634 ಕನ್ಯಾಕುಮಾರಿ-ಚೆನ್ನೈ ಎಗ್ಮೋರ್ ಡೈಲಿ ಸೂಪರ್‌ಫಾಸ್ಟ್ ಸ್ಪೆಷಲ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ: 02633 ಚೆನ್ನೈ ಎಗ್ಮೋರ್-ಕನ್ಯಾಕುಮಾರಿ ಡೈಲಿ ಸೂಪರ್‌ಫಾಸ್ಟ್ ಸ್ಪೆಷಲ್ಎಕ್ಸ್‌ಪ್ರೆಸ್
ರೈಲು ಸಂಖ್ಯೆ: 06724 ಕೊಲ್ಲಂ-ಚೆನ್ನೈ ಎಗ್ಮೋರ್ ಡೈಲಿ (ಅನಂತಪುರಿ) ಸ್ಪೆಷಲ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ: 06723 ಚೆನ್ನೈ ಎಗ್ಮೋರ್-ಕೊಲ್ಲಂ ಡೈಲಿ (ಅನಂತಪುರಿ)ಸ್ಪೆಷಲ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ: 06102 ಕೊಲ್ಲಂ-ಚೆನ್ನೈ ಎಗ್ಮೋರ್ ಸ್ಪೆಷಲ್ ಎಕ್ಸ್‌ಪ್ರೆಸ್ (ಸೆಂಗೋಟೈ ಮತ್ತು ಮಧುರೈ ಮೂಲಕ ಹಾದುಹೋಗುತ್ತದೆ)
ರೈಲು ಸಂಖ್ಯೆ: 06101 ಚೆನ್ನೈ ಎಗ್ಮೋರ್-ಕೊಲ್ಲಂ ಸ್ಪೆಷಲ್ ಎಕ್ಸ್‌ಪ್ರೆಸ್ (ಮಧುರೈ ಮತ್ತು ಸೆಂಗೋಟೈ ಮೂಲಕ ಹಾದುಹೋಗುತ್ತದೆ)
ಎಷ್ಟು ಸಮಯದವರೆಗೆ ಟಿಕೆಟ್ ರದ್ದುಗೊಳಿಸಬಹುದು :
ಇ-ಟಿಕೆಟ್ ಸ್ವಯಂಚಾಲಿತವಾಗಿ ರದ್ದಾಗಲಿದೆ ಮತ್ತು ಶುಲ್ಕ ಮೂಲ ಖಾತೆಗೆ ಹೋಗುತ್ತದೆ ಎಂದು ರೈಲ್ವೆ ತಿಳಿಸಿದೆ. ಆದರೆ ಪ್ರಯಾಣಿಕರಿಗೆ ಕೌಂಟರ್‌ನಿಂದ ಕಾಯ್ದಿರಿಸಿದ ಟಿಕೆಟ್ ರದ್ದುಗೊಳಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಪ್ರಯಾಣಿಕರು 15 ದಿನಗಳಲ್ಲಿ ರೈಲ್ವೆ ಕೌಂಟರ್‌ನಲ್ಲಿ ಟಿಕೆಟ್ ರದ್ದುಗೊಳಿಸುವ ಮೂಲಕ ಶುಲ್ಕವನ್ನು ಹಿಂಪಡೆಯಬಹುದು.
Cyclone Nivar: ತಮಿಳುನಾಡು-ಪುದುಚೇರಿ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಮಾತು
ತಮಿಳುನಾಡು ಮತ್ತು ಪುದುಚೇರಿಯಲ್ಲಿ ನಿವಾರ್ ಚಂಡಮಾರುತದ ಬೆದರಿಕೆ :
ಸೈಕ್ಲೋನಿಕ್ ಚಂಡಮಾರುತ 'ನಿವಾರ್' ಬಂಗಾಳಕೊಲ್ಲಿಯ ಪಶ್ಚಿಮ-ವಾಯುವ್ಯಕ್ಕೆ ಚಲಿಸುತ್ತಿದೆ. ಬಂಗಾಳ ಕೊಲ್ಲಿಯ ನೈಋತ್ಯ ದಿಕ್ಕಿನಲ್ಲಿ 'ನಿವಾರ್' ಎಂಬ ತೀವ್ರವಾದ ಚಂಡಮಾರುತವು ಕಳೆದ ಆರು ಗಂಟೆಗಳಲ್ಲಿ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತಿದೆ. ಮುಂದಿನ ಕೆಲವು ಗಂಟೆಗಳಲ್ಲಿ 130-140 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವರದಿ ಮಾಡಿದೆ.