ಮದುವೆಯ ದಿನವೇ ವಧುವಿನ ಕರೋನಾ ರಿಪೋರ್ಟ್ ಪಾಸಿಟಿವ್ ಬಂದಾಗ...!
ವಾಸ್ತವವಾಗಿ ಪ್ರತಿ ಹುಡುಗಿ ತನ್ನ ಮದುವೆಯ ಬಗ್ಗೆ ತನ್ನದೇ ಆದ ಸುಂದರ ಕನಸುಗಳನ್ನು ಕಾಣುತ್ತಾಳೆ. ಆದರೆ ಕರೋನಾ ಈ ಹುಡುಗಿಯ ಕನಸುಗಳನ್ನು ನುಚ್ಚು ನೂರು ಮಾಡಿದೆ.
Marriage in PPE kit: ಕರೋನಾವೈರಸ್ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ಬೆನ್ನು ಬಿಡದ ಬೇತಾಳದಂತೆ ಕಾಡುತ್ತಿದೆ. ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರಿದೆ. ಇನ್ನೂ ಕೂಡ ಇದರ ಅಟ್ಟಹಾಸ ಮುಂದುವರೆದಿದ್ದು ರಾಜಸ್ಥಾನದ ಬರಾನ್ ಎಂಬ ಪ್ರದೇಶದಲ್ಲಿ ಮದುವೆಯ ದಿನವೇ ವಧುವಿನ ಕರೋನಾ ರಿಪೋರ್ಟ್ ಪಾಸಿಟಿವ್ ಬಂದಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು ಮದುವೆಯ ದಿನವೇ ಮದುವೆ ಹುಡುಗಿಯ ಕರೋನಾ ವರದಿ ಧನಾತ್ಮಕವಾಗಿ ಬಂದಿದ್ದು ಬಳಿಕ ಪಿಪಿಇ ಕಿಟ್ (PPE KIT) ಧರಿಸಿ ವಿವಾಹ ಕಾರ್ಯ ನೆರವೇರಿಸಿದ್ದಾರೆ. ಇದೀಗ ಈ ವಿವಾಹದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.
ಪ್ರಪಂಚದಲ್ಲಿ ಅತಿ ಹೆಚ್ಚು ಕೋವಿಡ್–19 ಲಸಿಕೆ ಖರೀದಿಸಿರುವ ರಾಷ್ಟ್ರ ಯಾವುದು ಗೊತ್ತಾ?
ಮದುವೆಯ ದಿನದಂದು ವಧುವಿನ ಕೋವಿಡ್ 19 (COVID-19) ವರದಿ ಸಕಾರಾತ್ಮಕವಾಗಿ ಬಂದಿದ್ದರಿಂದ ಇಲ್ಲಿನ ಕೆಲ್ವಾರಾ ಕೋವಿಡ್ ಕೇಂದ್ರದಲ್ಲಿ ಜೋಡಿ ಪಿಪಿಇ ಕಿಟ್ ಧರಿಸಿ ವಿವಾಹವಾದರು. ವಧುವಿನ ಕರೋನಾ ವರದಿ ಸಕಾರಾತ್ಮಕವಾಗಿ ಬಂದ ನಂತರ ಎರಡೂ ಕುಟುಂಬಗಳು ಅದೇ ದಿನ ಅದೇ ಮುಹೂರ್ತದಲ್ಲಿ ಮದುವೆ ಮಾಡಲು ದೃಢ ನಿಶ್ಚಯ ಮಾಡಿದರು.
ಆದಾಗ್ಯೂ ಸರ್ಕಾರದ ಕೋವಿಡ್ ಪ್ರೋಟೋಕಾಲ್‌ನ ಸಂಪೂರ್ಣ ಅನುಸರಣೆಯಲ್ಲಿ ವಿವಾಹ (Marriage) ಸಮಾರಂಭವನ್ನು ನಡೆಸಲಾಯಿತು. ಈ ಸಮಾರಂಭದಲ್ಲಿ ವರ ವಧು ಒಂದೇ ಬಣ್ಣದ ಪಿಪಿಇ ಕಿಟ್ ಧರಿಸಿರುವುದನ್ನು ವೀಡಿಯೊದಲ್ಲಿ ನೋಡಬಹುದು. ಇಬ್ಬರೂ ಫೇಸ್ ಶೀಲ್ಡ್ ಧರಿಸಿರುವುದನ್ನೂ ಕೂಡ ವಿಡಿಯೋದಲ್ಲಿ ಕಾಣಬಹುದು. ಇದಲ್ಲದೆ ಹುಡುಗ ಹಾರವನ್ನು ಧರಿಸುವುದರ ಜೊತೆಗೆ ಪೇಟವನ್ನೂ ಧರಿಸಿದ್ದಾನೆ.
ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಬರುತ್ತಿದೆ, ಮುಂದಿನ 45 ದಿನ ಹುಷಾರಾಗಿರಬೇಕು!
ಈ ವೀಡಿಯೊ ವೈರಲ್ ಆದ ನಂತರ, ಕೆಲವರು ಸ್ವಲ್ಪ ಸಮಯ ಕಾದು ವಿವಾಹವಾಗಬಹುದಿತ್ತು ಎಂದು ಹೇಳುತ್ತಿದ್ದಾರೆ.