ಪ್ರಪಂಚದಲ್ಲಿ ಅತಿ ಹೆಚ್ಚು ಕೋವಿಡ್‌–19 ಲಸಿಕೆ ಖರೀದಿಸಿರುವ ರಾಷ್ಟ್ರ ಯಾವುದು ಗೊತ್ತಾ?

ಕೋವಿಡ್‌–19 ಲಸಿಕೆ ಖರೀದಿಸಿರುವ ರಾಷ್ಟ್ರ ಕೋವಿಡ್ - 19 ಹುಟ್ಟಿದ ಚೀನಾ ಅಲ್ಲ, ಮೊದಲು ಕೊರೋನಾದಿಂದ ತತ್ತರಿಸಿಹೋಗಿದ್ದ ಇಟಲಿಯೂ ಅಲ್ಲ, ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕಾವೂ ಅಲ್ಲ. ಅದು ಭಾರತ!

Last Updated : Dec 5, 2020, 01:11 PM IST
  • ಪ್ರಪಂಚದಲ್ಲಿ ಅತಿ ಹೆಚ್ಚು ಕೋವಿಡ್‌–19 ಲಸಿಕೆ ಖರೀದಿಸಿರುವ ರಾಷ್ಟ್ರ ಕೋವಿಡ್ - 19 ಹುಟ್ಟಿದ ಚೀನಾ ಅಲ್ಲ
  • ಮೊದಲು ಕೊರೋನಾದಿಂದ ತತ್ತರಿಸಿಹೋಗಿದ್ದ ಇಟಲಿಯೂ ಅಲ್ಲ
  • ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕಾವೂ ಅಲ್ಲ.
ಪ್ರಪಂಚದಲ್ಲಿ ಅತಿ ಹೆಚ್ಚು ಕೋವಿಡ್‌–19 ಲಸಿಕೆ ಖರೀದಿಸಿರುವ ರಾಷ್ಟ್ರ ಯಾವುದು ಗೊತ್ತಾ? title=

ನವದೆಹಲಿ: ಪ್ರಪಂಚದಲ್ಲಿ ಅತಿ ಹೆಚ್ಚು ಕೋವಿಡ್‌–19 ಲಸಿಕೆ ಖರೀದಿಸಿರುವ ರಾಷ್ಟ್ರ ಯಾವುದು ಗೊತ್ತಾ? ಅದು ಕೋವಿಡ್ - 19 ಹುಟ್ಟಿದ ಚೀನಾ ಅಲ್ಲ, ಮೊದಲು ಕೊರೋನಾದಿಂದ ತತ್ತರಿಸಿಹೋಗಿದ್ದ ಇಟಲಿಯೂ ಅಲ್ಲ, ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕಾವೂ ಅಲ್ಲ. ಅದು ಭಾರತ!

ಹೌದು. ಭಾರತವು ಇಡೀ ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್‌–19 ಲಸಿಕೆ (Covid 19 Vaccine) ಖರೀದಿಸಿರುವ ರಾಷ್ಟ್ರವಾಗಿದೆ. ಸದ್ಯ ಲಭ್ಯ ಇರುವ ಮಾಹಿತಿಗಳ ಪ್ರಕಾರ ಭಾರತವು ಒಟ್ಟು 160 ಕೋಟಿ ಡೋಸ್‌ಗಳನ್ನು ಖರೀದಿಸಿದೆ. ಭಾರತದ ಜನಸಂಖ್ಯೆಯು 136 ಕೋಟಿ ಇದ್ದು 160 ಕೋಟಿ ಕೋವಿಡ್ ಡೋಸ್‌ಗಳ ಮೂಲಕ ದೇಶದ ಒಟ್ಟಾರೆ ಜನಸಂಖ್ಯೆಯ ಶೇಕಡ 60ರಷ್ಟು ಜನರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಬಹುದು ಎನ್ನಲಾಗಿದೆ.

ಭಾರತದಲ್ಲಿ ಮೂರು ಕಡೆ ಕೊರೊನಾಗೆ ಲಸಿಕೆ (Corona Vaccine) ಕಂಡುಹಿಡಿಯಲಾಗುತ್ತದೆ. ಆದರೆ ಭಾರತದಲ್ಲಿ ತಯಾರಾಗುತ್ತಿರುವ ಲಸಿಕೆ ಯಾವಾಗ ಲಭ್ಯವಾಗಬಹುದೆಂಬ ಖಚಿತ ಮಾಹಿತಿ ಇಲ್ಲ. ಕೇಂದ್ರ ಸರ್ಕಾರ 'ಶೀಘ್ರದಲ್ಲೇ ಬರಲಿದೆ' ಎಂದು‌ ಹೇಳುತ್ತಿದೆಯೇ ವಿನಃ ಖಚಿತವಾಗಿ 'ಇಂತಿಷ್ಟೇ ದಿನದಲ್ಲಿ' ಬರುತ್ತದೆ ಎಂದು ಹೇಳುತ್ತಿಲ್ಲ. ಈಗ ವಿದೇಶಗಳಿಂದ ಕೋವಿಡ್ ಲಸಿಕೆಗಳನ್ನು ಖರೀದಿಸಲಾಗುತ್ತಿದೆ.

ಶೀಘ್ರದಲ್ಲೇ COVID-19 Vaccine ಲಭ್ಯ: ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ

ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಸಹಯೋಗದಲ್ಲಿ ಆಸ್ಟ್ರಾಜೆನೆಕಾ ಕಂಪನಿ ಕೋವಿಡ್ 19 (Covid 19) ಲಸಿಕೆ ಅಭಿವೃದ್ಧಿಪಡಿಸಿದ್ದು ಭಾರತವು ಆ ಕಂಪನಿಯಿಂದ 50 ಕೋಟಿ ಲಸಿಕೆಗಳನ್ನು ಖರೀಸಿದೆ. ಅಮೆರಿಕದ ನೊವಾವ್ಯಾಕ್ಸ್‌ ಕಂಪನಿಯಿಂದ 100 ಕೋಟಿ ಲಸಿಕೆ ಕೊಂಡುಕೊಂಡಿದೆ. ಇದಲ್ಲದೆ ರಷ್ಯಾದ ಗಮಲೆಯಾ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ನಿಂದ (ಸ್ಪುಟ್ನಿಕ್‌–ವಿ) 10 ಕೋಟಿ ಡೋಸ್‌ಗಳನ್ನು ಖರೀದಿಸಿದೆ ಎಂದು ಅಮೆರಿಕದ ಡ್ಯೂಕ್‌ ಯೂನಿವರ್ಸಿಟಿ ಗ್ಲೋಬಲ್‌ ಹೆಲ್ತ್‌ ಇನ್ನೋವೇಷನ್‌ ಸೆಂಟರ್‌ ತಿಳಿಸಿದೆ.

ಭಾರತವು ಪ್ರಪಂಚದಲ್ಲೇ ಅತಿ ಹೆಚ್ಚು ಕೋವಿಡ್‌ ಲಸಿಕೆ ಖರೀದಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ ಐರೋಪ್ಯ ಒಕ್ಕೂಟ ಹಾಗೂ ಅಮೆರಿಕ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ ಎಂದು ಕೂಡ ಡ್ಯೂಕ್‌ ಯೂನಿವರ್ಸಿಟಿ ಗ್ಲೋಬಲ್‌ ಹೆಲ್ತ್‌ ಇನ್ನೋವೇಷನ್‌ ಸೆಂಟರ್‌ ತಿಳಿಸಿದೆ.

ಈ ದೇಶಕ್ಕೆ Corona Vaccine ಅಗತ್ಯವೇ ಇಲ್ಲವಂತೆ

ಡ್ಯೂಕ್‌ ಯೂನಿವರ್ಸಿಟಿ ಗ್ಲೋಬಲ್‌ ಹೆಲ್ತ್‌ ಇನ್ನೋವೇಷನ್‌ ಸೆಂಟರ್‌ ಗೆ ಈ ಮಾಹಿತಿ ಹೇಗೆ ಲಭ್ಯವಾಗಿದೆ ಎಂಬುದನ್ನು ಸೂಕ್ಷ್ಮ ರೋಗಾಣು ಶಾಸ್ತ್ರಜ್ಞ ಶಾಹೀದ್‌ ಜಮೀಲ್‌ ತಿಳಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಹಾಗೂ ಇತರ ಮೂಲಗಳಿಂದ ಕಲೆಹಾಕಿದ ಮಾಹಿತಿಯ ಆಧಾರದಲ್ಲಿ ಡ್ಯೂಕ್‌ ಯೂನಿವರ್ಸಿಟಿ ಗ್ಲೋಬಲ್‌ ಹೆಲ್ತ್‌ ಇನ್ನೋವೇಷನ್‌ ಸೆಂಟರ್‌ ಈ ಅಂಕಿ ಅಂಶಗಳನ್ನು ಸಿದ್ಧಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

Trending News