ನವದೆಹಲಿ: ಕೊರೊನ ಸೋಂಕು ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಜಾರಿಗೆ ತರಲಾಗಿದ್ದ  ಲಾಕ್ ಡೌನ್ (Lockdown)  ನಿಯಮಗಳನ್ನು ಮತ್ತೊಮ್ಮೆ ಸಡಿಲಿಸಿರುವ ಕೆಂದ್ರ ಗೃಹ ಇಲಾಖೆಯು (MHA) ಪುರಸಭಾ ವ್ಯಾಪ್ತಿಯಲ್ಲಿ ಬರುವ ಹೆಚ್ಚು ಜನಸಂದಣಿ ಆಗುವಂತಹ ಮಾಲ್ ಗಳು, ಚಿತ್ರಮಂದಿರಗಳನ್ನು ಹೊರೆತುಪಡಿಸಿ ಉಳಿದಂತೆ ಎಲ್ಲಾ  ರೀತಿಯ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಿದೆ.


COMMERCIAL BREAK
SCROLL TO CONTINUE READING

ಮೊದಲಿಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದ್ದ ಕೆಂದ್ರ ಗೃಹ ಇಲಾಖೆಯು ಏಪ್ರಿಲ್ 24ರಂದು ರಾತ್ರಿ ತಾನು ಹಿಂದೆ  ಲಾಕ್ ಡೌನ್ ಜಾರಿ ವೇಳೆ ಹೊರಡಿಸಿದ್ದ ಮಾರ್ಗಸೂಚಿಯನ್ನು ಬದಲಾವಣೆಗೊಳಿಸಿದ್ದು ನಿಯಮಾವಳಿಗಳನ್ನುಸಡಿಲಿಸಿ ಅನಿವಾರ್ಯವಲ್ಲದ ವಸ್ತುಗಳ ಮಾರಾಟಕ್ಕೂ ಅವಕಾಶ ಕಲ್ಪಿಸಿದೆ. 


ಈ ಆದೇಶವು ಪುರಸಭೆಯ ನಿಗಮಗಳು ಮತ್ತು ಪುರಸಭೆಗಳ ಮಿತಿಯಲ್ಲಿರುವ ಮಾರುಕಟ್ಟೆ ಸಂಕೀರ್ಣಗಳಲ್ಲಿನ ನೊಂದಾಯಿತ ಅಂಗಡಿಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಎಂಎಚ್‌ಎ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಇದು ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಮಾಲ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದ್ದು ಪುರಸಭೆಯಲ್ಲಿ ನೊಂದಾಯಿಸಲದ ಸ್ಥಳೀಯ ಅಂಗಡಿಗಳಿಗೆ ಮಾತ್ರ ಅನ್ವಯಿಸುತ್ತದೆ.


ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಷರತ್ತು 14ರ ಉಪ-ಷರತ್ತು (xiii) ಮತ್ತು (xiv)ರ ಅಡಿಯಲ್ಲಿ ನೋಂದಾಯಿಸಲಾದ ಎಲ್ಲಾ ಅಂಗಡಿಗಳಲ್ಲಿ ಕಡ್ಡಾಯ ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ 50% ರಷ್ಟು ಕಾರ್ಮಿಕರೊಂದಿಗೆ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.


ಕರೋನಾವೈರಸ್ (Coronavirus)  ಸೋಂಕು ಹರಡುವಿಕೆ ತಡೆಯಲು ಮಾರ್ಚ್ 24ರಿಂದ ಏಪ್ರಿಲ್ 14ರವರೆಗೆ ಮೊದಲ ಹಂತದ ಲಾಕ್​ಡೌನ್ ಜಾರಿಗೊಳಿಸಲಾಗಿತ್ತು. ಅದರಿಂದ ಪರಿಣಾಮಕಾರಿ ಪ್ರಯೋಜನ ಆಗಿರಲಿಲ್ಲ.  ಈ ಹಿನ್ನೆಲೆಯಲ್ಲಿ ಮೇ 3ರವರೆಗೂ ಲಾಕ್​ಡೌನ್ ವಿಸ್ತರಿಸಲಾಗಿತ್ತು. ಅಲ್ಲದೆ ದೇಶದ ಆರ್ಥಿಕತೆ, ಉತ್ಪಾದನೆ, ವ್ಯಾಪಾರ, ವಹಿವಾಟುಗಳಿಗೆ ದೊಡ್ಡ ಮಟ್ಟದ ನಷ್ಟ ಆಗಬಾರದೆಂದು ಏಪ್ರಿಲ್ 20ರಂದು ಮೊದಲ ಬಾರಿಗೆ ಲಾಕ್​ಡೌನ್ ನಿಯಮಾವಳಿಗಳಲ್ಲಿ ಕೆಲ ವಿನಾಯಿತಿ ನೀಡಲಾಗಿತ್ತು. ಎಲ್ಲ ಕಡೆ ಕೃಷಿ, ಹೈನುಗಾರಿಕೆ ಮತ್ತು ಮೀನುಗಾರಿಕೆ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿತ್ತು. ಹಸಿರು ವಲಯದಲ್ಲಿ ಕೈಗಾರಿಕಾ ಚಟುವಟಿಕೆಗಳಿಗೂ ಅವಕಾಶ ತೆರೆದಿಡಲಾಗಿತ್ತು. ನಂತರ ಹಂತಹಂತವಾಗಿ ಮೂರು ಬಾರಿ ಲಾಕ್​ಡೌನ್ ನಿಯಮಗಳನ್ನು ಸಡಿಲಿಸಿ ಮತ್ತಿತರ ಕೆಲಸಗಳಿಗೂ ಅನುವು ಮಾಡಿಕೊಡಲಾಗಿದೆ.