ಲಡಾಖ್ ಗಡಿ ಪ್ರದೇಶ ಮೇಲೆ ಹದ್ದಿನ ಕಣ್ಣಿಡಲಿವೆ ಭಾರತೀಯ ನೌಕಾಪಡೆಯ MiG-29K
ಭಾರತೀಯ ನೌಕಾಪಡೆಯ ಪಿ -8 ಐ ಕಣ್ಗಾವಲು ವಿಮಾನಗಳು ಪೂರ್ವ ಲಡಾಖ್ ವಲಯದ ಮೇಲೆ ಆಗಾಗ್ಗೆ ಹಾರಾಟ ನಡೆಸುವ ಮೂಲಕ ಗಡಿ ಪ್ರದೇಶದ ಮೇಲೆ ಹದ್ದಿನ ಕಣ್ಣು ಇಡಲಿವೆ.ನೌಕಾಪಡೆಯ ಕಡಲ ಯುದ್ಧವಿಮಾನಗಳಾದ ಮಿಗ್ -29 ಕೆ ಅನ್ನು ಉತ್ತರ ವಲಯದಲ್ಲಿ ಕಾರ್ಯಾಚರಣೆಗಾಗಿ ನಿಯೋಜಿಸಲಾಗುವುದು ಎನ್ನಲಾಗಿದೆ.
ನವದೆಹಲಿ: ಭಾರತೀಯ ನೌಕಾಪಡೆಯ ಪಿ -8 ಐ ಕಣ್ಗಾವಲು ವಿಮಾನಗಳು ಪೂರ್ವ ಲಡಾಖ್ ವಲಯದ ಮೇಲೆ ಆಗಾಗ್ಗೆ ಹಾರಾಟ ನಡೆಸುವ ಮೂಲಕ ಗಡಿ ಪ್ರದೇಶದ ಮೇಲೆ ಹದ್ದಿನ ಕಣ್ಣು ಇಡಲಿವೆ.ನೌಕಾಪಡೆಯ ಕಡಲ ಯುದ್ಧವಿಮಾನಗಳಾದ ಮಿಗ್ -29 ಕೆ ಅನ್ನು ಉತ್ತರ ವಲಯದಲ್ಲಿ ಕಾರ್ಯಾಚರಣೆಗಾಗಿ ನಿಯೋಜಿಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಭಯೋತ್ಪಾದಕ ಸಂಘಟನೆಗಳ ಮೊರೆ ಹೋದ ಚೀನಾ
ಭಾರತೀಯ ವಾಯುಪಡೆಯ (ಐಎಎಫ್) ನೆಲೆಗಳಲ್ಲಿ ನೌಕಾ ಯುದ್ಧ ವಿಮಾನಗಳ ನಿಯೋಜನೆಯು ಮೂರು ಸೇವೆಗಳ ನಡುವೆ ಜಂಟಿ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನಗಳಿಗೆ ಅನುಗುಣವಾಗಿ ಮತ್ತು ಕಡಲ ಯುದ್ಧ ವಿಮಾನಗಳನ್ನು ವಾಯುಪಡೆಯೊಂದಿಗೆ ಉತ್ತರ ಅಥವಾ ಪಶ್ಚಿಮ ಗಡಿಗಳಲ್ಲಿ ನಿಯೋಜಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಚೀನಾಕ್ಕೆ ಮತ್ತೊಂದು ಆಘಾತ, ಕೇಂದ್ರ ಸರ್ಕಾರದ ಈ ಸಚಿವಾಲಯದಿಂದ ಚೀನಾ ಉತ್ಪನ್ನಗಳ ನಿಷೇಧ
"ಮಿಗ್ -29 ಕೆ ಯುದ್ಧ ವಿಮಾನವನ್ನು ಉತ್ತರ ವಲಯದ ಭಾರತೀಯ ವಾಯುಪಡೆಯ ನೆಲೆಯಲ್ಲಿ ನಿಯೋಜಿಸಲು ಯೋಜಿಸಲಾಗಿದೆ. ಪೂರ್ವ ಲಡಾಕ್ ವಲಯದಲ್ಲಿ ಕಾರ್ಯಾಚರಣೆಯ ಹಾರಾಟವನ್ನು ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಬಳಸಿಕೊಳ್ಳಲು ಅವುಗಳನ್ನು ಬಳಸಬಹುದು" ಎಂದು ಸರ್ಕಾರ ಮೂಲಗಳು ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿವೆ.
ಭಾರತೀಯ ನೌಕಾಪಡೆಯು 40 ಮಿಗ್ -29 ಕೆ ಫೈಟರ್ ಜೆಟ್‌ಗಳನ್ನು ಹೊಂದಿದ್ದು, ಅವುಗಳನ್ನು ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ನಿಯೋಜಿಸಲಾಗಿದೆ ಮತ್ತು ಗೋವಾದ ನೌಕಾ ಯುದ್ಧ ನೆಲೆ ಐಎನ್‌ಎಸ್ ಹನ್ಸಾದಿಂದ ನಿಯಮಿತವಾಗಿ ಹಾರಾಟ ನಡೆಸುತ್ತದೆ.ರಷ್ಯಾ ಮೂಲದ ಈ ವಿಮಾನವಾಹಕ ನೌಕೆಯನ್ನು ಭಾರತೀಯ ನೌಕಾಪಡೆಯು ಒಂದು ದಶಕದ ಹಿಂದೆ ಖರೀದಿಸಿತು.
ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯೊಂದಿಗೆ ನಡೆಯುತ್ತಿರುವ ವಿವಾದದ ಮಧ್ಯೆ, ಭಾರತೀಯ ನೌಕಾಪಡೆಯು ತನ್ನ ವಿಮಾನಗಳನ್ನು ಎಲ್‌ಎಸಿಯ ಉದ್ದಕ್ಕೂ ಕಣ್ಗಾವವಿನಲ್ಲಿ ಪ್ರಮುಖ ಪಾತ್ರ ವಹಿಸಲಿವೆ.