ನವದೆಹಲಿ: ಚೀನಾ ತನ್ನ ವರ್ತನೆಯಲ್ಲಿ ಪರಿವರ್ತನೆ ತರುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಭಾರತದಲ್ಲಿ ಶಾಂತಿಗೆ ಭಂಗ ತರುವ ಉದ್ದೇಶದಿಂದ ಇದೀಗ ಚೀನಾ ಭಯೋತ್ಪಾದಕ ಸಂಘಟನೆಗಳ ನೆರವು ಪಡೆಯಲು ಮುಂದಾಗಿದೆ. ಚೀನಾದ ಸ್ಥಳೀಯ ಸುದ್ದಿ ಸಂಸ್ಥೆ ಲಾಯಿಸಿಸ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಚೀನಾ ಮ್ಯಾನ್ಮಾರ್ ನ ಉಗ್ರ ಸಂಘಟನೆಗೆ ಹಣಕಾಸಿನ ನೆರವು ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ. ಅಷ್ಟೇ ಅಲ್ಲ ನ್ಯಾಪಿತಾವ್ ಭಯೋತ್ಪಾದಕ ಸಂಘಟನೆ ಅರಾಕಾನ್ ಸೇನೆಗೆ ನೆರವು ಕೂಡ ಒದಗಿಸುತ್ತಿದೆ.
ದಕ್ಷಿಣ-ಪೂರ್ವ ಏಷ್ಯಾದ ಮಾಹಿತಿ ಸಂಗ್ರಹಿಸುವ ಒಂದು ಸೇನೆಯ ಓರ್ವ ಅಧಿಕಾರಿಗಳು ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದು, ಚೀನಾ ಅರಾಕಾನ್ ಸೇನೆಯ ಒಟ್ಟು ವೆಚ್ಚಧ ಶೇ.95 ರಷ್ಟನ್ನು ನೋಡಿಕೊಳ್ಳುತ್ತಿದೆ. ಅರಾಕಾನ್ ಸೇನೆಯ ಬಳಿ ಸುಮಾರು 50 MANPADS (ಮೇನ್ ಪೋರ್ಟೆಬಲ್ ಏರ್ ಡಿಫೆನ್ಸ್ ಸಿಸ್ಟಮ್) ನೆಲದಿಂದ ಗಾಳಿಯಲ್ಲಿ ದಾಳಿ ನಡೆಸುವ ಮಿಸೈಲ್ ಗಳಿವೆ ಎಂದು ಅವರು ಹೇಳಿದ್ದಾರೆ. ಅರಾಕನ್ ಸೈನ್ಯವನ್ನು ಬೆಂಬಲಿಸುವ ಚೀನಾದ ಈ ಕಾರ್ಯತಂತ್ರವು ಅದಕ್ಕೆ ಪಶ್ಚಿಮ ಮ್ಯಾನ್ಮಾರ್‌ನತ್ತ ತನ್ನ ಪ್ರಭಾವದ ಕ್ಷೇತ್ರವನ್ನು ವಿಸ್ತರಿಸಲು ಅನುವು ಮಾಡಿಕೊಟ್ಟಿದೆ, ಅಂದರೆ ಇಂಡೋ-ಮ್ಯಾನ್ಮಾರ್ ಗಡಿ.
ಈ ಕುರಿತು ಹೇಳಿಕೆ ನೀಡಿರುವ ಆಸ್ಟ್ರೇಲಿಯಾದ ತಜ್ಞರೊಬ್ಬರು, "ದಕ್ಷಿಣ ಏಷ್ಯಾದಲ್ಲಿ ಚೀನಾ ಒಂದು ಮಲ್ಟಿಲೆವಲ್ ಆಟ ಆಡುತ್ತಿದೆ. ಚೀನಾ ಈ ಭಾಗದಲ್ಲಿ ಭಾರತವನ್ನು ದುರ್ಬಲಗೊಳಿಸಲು ಬಯಸುತ್ತಿದೆ. ಅದರಲ್ಲೂ ವಿಶೇಷವಾಗಿ ಭಾರತ-ಚೀನಾ ಸಂಬಂಧಗಳು ಉತ್ತಮವಾಗಿಲ್ಲ. ಇನ್ನೊಂದೆಡೆ ಮ್ಯಾನ್ಮಾರ್ ಅನ್ನು ಹೊಸ ಶತ್ರುರಾಷ್ಟ್ರವಾಗಿ ಪರಿವರ್ತಿಸಲು ಬಯಸುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಮೂಲಗಳು, ಮ್ಯಾನ್ಮಾರ್ ನಲ್ಲಿ ಭಾರತೀಯ ಪ್ರಭಾವ ಹೆಚ್ಚಾಗುವುದು ಚೀನಾಗೆ ಇಷ್ಟವಿಲ್ಲ. ಅಲ್ಲದೆ ಏಕಸ್ವಾಮ್ಯ ಬಯಸುತ್ತಿದೆ. ಮ್ಯಾನ್ಮಾರ್ ನಲ್ಲಿ ಭಾರತದ ನಿರ್ಣಯದ ವಿರುದ್ಧ ಅರಾಕಾನ್ ಸೇನೆಗೆ ಚೀನಾ ಬೆಂಬಲ ಸಾಕಷ್ಟು ಪ್ರಭಾವಶಾಲಿಯಾಗಿದೆ ಎಂಬುದು ಇಲ್ಲಿ ಸ್ಪಷ್ಟವಾಗಿ ಹೇಳಬಹುದು.
ಜೂನ್ 2017 ರಲ್ಲಿ ಭಾರತದ ಸಿ ಅಂಡ್ ಸಿ ಕನ್ಸ್ಟ್ರಕ್ಷನ್ ಕಂಪನಿಗೆ 220 ಮಿಲಿಯನ್ ಡಾಲರ್ ಮೊತ್ತದ ರಸ್ತೆ ನಿರ್ಮಾಣ ಕಾರ್ಯದ ಗುತ್ತಿಗೆ ಸಿಕ್ಕಿಟ್ಟು. ಈ ವೇಳೆ ಮ್ಯಾನ್ಮಾರ್ ಸರ್ಕಾರ ಜನವರಿ 2018 ರವರೆಗೆ ಅನುಮೋದನೆ ನೀಡುವ ಮೂಲಕ ವಿಳಂಬ ನೀತಿ ಅನುಸರಿಸಿತ್ತು. ಈ ರಸ್ತೆಯ ನಿರ್ಮಾಣ ಕಾರ್ಯ ಆರಂಭಗೊಂಡ ವೇಳೆ ಅರಾಕಾನ್ ಸೇನೆ ಭಾರತೀಯ ನಾಗರಿಕರು, ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಚಾಲಕ ದಳ, ಮ್ಯಾನ್ಮಾರ್ ನ ಸಂಸತ್ ಸದಸ್ಯನ ಅಪಹರಣ ಮಾಡಿತ್ತು.
ಸುಭೀರ್ ಭೌಮಿಕ್ ಅವರು ಬರೆದ ಒಂದು ವರದಿಯ ಪ್ರಕಾರ, ಚೀನಾವತಿಯಿಂದ ಇತ್ತೀಚೆಗಷ್ಟೇ ಅರಾಕಾನ್ ಸೇನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದು, ಇವುಗಳಲ್ಲಿ 500 ಆಕ್ರಮಣಕಾರಿ ಬಂದುಕುಗಳು, 30 ಯೂನಿವರ್ಸಲ್ ಮೆಶೀನ್ ಗನ್ ಗಳು, 70 ಸಾವಿರ ಮದ್ದುಗುಂಡುಗಳು ಶಾಮೀಲಾಗಿದ್ದು, ಇವು ಸಮುದ್ರ ಮಾರ್ಗವಾಗಿ ಮ್ಯಾನ್ಮಾರ್ ತಲುಪಿವೆ. ಬ್ರವರಿ ಮೂರನೇ ವಾರದಲ್ಲಿ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಕರಾವಳಿ ಜಂಕ್ಷನ್‌ನಿಂದ ದೂರದಲ್ಲಿರುವ ಮೊನಾಖಾಲಿ ಕರಾವಳಿಯಲ್ಲಿ ಶಸ್ತ್ರಾಸ್ತ್ರಗಳನ್ನು ಇಳಿಸಲಾಗಿತ್ತು.