ನವದೆಹಲಿ: Milk Price Hike - ಈಗಾಗಲೇ ಪೆಟ್ರೋಲ್-ಡಿಸೇಲ್ ಬೆಲೆ (ಪೆಟ್ರೋಲ್-Diesel) ಹಾಗೂ ಅಡುಗೆ ಅನಿಲ (Cooking Gas) ಬೆಲೆ ಏರಿಕೆಯಿಂದ ನಲುಗಿ ಹೋಗಿರುವ ಜನತೆಗೆ ಹಾಲಿನ ಬೆಲೆ ಏರಿಕೆಯ (Milk Price Hike)ಹೊಡೆತ ಬೀಳಲಿದೆಯೇ? ಲೀಟರ್ ಹಾಲಿಗೆ ನಿಮಗೆ 100 ರೂ.ಪಾವತಿಸುವ ಸಂದರ್ಭ ಬಂದೊದಗಿದರೆ? ಒಮ್ಮೆ ಯೋಚಿಸಿ ನೋಡಿ. ನಾವು ಈ ಮಾತನ್ನು ಹಾಗೆಯೇ ಹೇಳುತ್ತಿಲ್ಲ.  ಏಕೆಂದರೆ ಶನಿವಾರ ಬೆಳಗ್ಗೆಯಿಂದಲೇ twitter ಮೇಲೆ ಪ್ರತಿ ಲೀಟರ್ ಹಾಲಿನ ಬೆಲೆ 100 ರೂ.ಗಳಷ್ಟಾಗಲಿದೆ ಎಂಬ ಸಂಗತಿ ಭಾರಿ ಟ್ರೆಂಡ್ ಸೃಷ್ಟಿಸುತ್ತಿದೆ. ಒಂದು ವೇಳೆ ಇದು ನಡೆದು ಹೋದರೆ , ಈಗಾಗಲೇ ಪೆಟ್ರೋಲ್-ಡಿಸೇಲ್ ಬೆಲೆ (Petrol-Diesel) ಹಾಗೂ ಅಡುಗೆ ಅನಿಲ (LPG Cylinders) ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನತೆಗೆ ಭಾರಿ ಹೊಡೆತ ಬೀಳಲಿದೆ.


COMMERCIAL BREAK
SCROLL TO CONTINUE READING

ಹಾಲಿನ ಬೆಲೆ ಏರಿಕೆ ಹಿಂದಿರುವ ಕಾರಣ ಇಲ್ಲಿದೆ  milk price today
ವಾಸ್ತವದಲ್ಲಿ ಹರಿಯಾಣಾದ ಹಿಸಾರ್ ನಲ್ಲಿನ ಒಂದು ಖಾಪ್ ಪಂಚಾಯತ್ (Khap Panchayat), ಕೃಷಿ ಕಾನೂನುಗಳನ್ನು (Farm Laws) ಹಾಗೂ ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ಹಾಲಿನ ಬೆಲೆ ಏರಿಕೆ ಮಾಡಲು ನಿರ್ಧರಿಸಿದೆ. ಈ ಕುರಿತು ನಿರ್ಣಯ ಮಂಡಿಸಿರುವ ಖಾಪ್ ಪಂಚಾಯತ್, ಮಾರ್ಚ್ ನಿಂದ ಹಾಲಿನ ಬೆಲೆ ಲೀಟರ್ ಗೆ ರೂ.100ಕ್ಕೆ ಏರಿಕೆ ಮಾಡಲಾಗುವದು ಎಂದು ಹೇಳಿದೆ. ಆದರೆ ಈ ಬೆಲೆ ಏರಿಕೆ ಡೇರಿಯಲ್ಲಿ ಮಾರಾಟ ಮಾಡಲಾಗುವ ಹಾಗೂ ಹೊರಗಡೆ ಮಾರಾಟ ಮಾಡಲಾಗುವವವರಿಗೆ  ಹಾಲಿನ ಮೇಲೆ ಮಾತ್ರ ಅನ್ವಯಿಸಲಿದೆ. ಹಳ್ಳಿಯ ಜನರಿಗೆ ಮಾತ್ರ ಹಳೆ ದರದಲ್ಲಿಯೇ ಹಾಲು ಸಿಗಲಿದೆ.


ಇದನ್ನೂ ಓದಿ- Gold-Silver Price: ಚಿನ್ನಾಭರಣ ಪ್ರೀಯರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್..!


100 ರೂ. ಲೀಟರ್ ಸಿಗಲಿದೆ ಹಾಲು 100 rupees a liter of milk
ಹರಿಯಾಣಾದ ಹಿಸಾರ್ ಜಿಲ್ಲೆಯ ನಾರನೌಂದ್ ಹೋಬಳಿಯ ಧಾನ್ಯಮಾರುಕಟ್ಟೆಯಲ್ಲಿನ ಸತರೌಲ್ ಖಾಪ್ ಪಂಚಾಯತ್ ನಿರ್ಣಯದ ಬಳಿಕ ಈ ಹಾಲಿನ ಬೆಲೆ ಏರಿಕೆ ನಿರ್ಣಯ ಕೈಗೊಳ್ಳಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಪಂಚಾಯತ್ ಸದಸ್ಯರೊಬ್ಬರು, "ನಾವು ಹಾಲನ್ನು 100ರೂ. ಪ್ರತಿ ಲೀಟರ್ (Milk 100 Rs per Litre) ಮಾರಾಟ ಮಾಡಲು ನಿರ್ಣಯ ಕೈಗೊಂಡಿದ್ದೇವೆ. ಸರ್ಕಾರಿ ಕೋ-ಆಪ್ರೆಟಿವ್ ಸೊಸೈಟಿಗಳಿಗೆ (Government Cooperative Society)  ಇದೆ ಬೆಲೆಯಲ್ಲಿ ಹಾಲು ಮಾರಾಟ ಮಾಡಲು ನಾವು ಡೇರಿ ಹಾಲು ಉತ್ಪಾದಕ ರೈತರಿಗೆ ಮನವಿ ಮಾಡುತ್ತೇವೆ" ಎಂದಿದ್ದಾರೆ.


ಇದನ್ನೂ ಓದಿ- Gas Cylinder: ಗ್ಯಾಸ್‌ ಸಿಲೆಂಡರ್‌ ಮೇಲೆ ʼ₹ 700 ರಿಯಾಯಿತಿʼ ಪಡೆಯಲು ಇಂದೇ ಕೊನೆ ದಿನ..!


ವೇದಿಕೆಯಿಂದ ಘೋಷಣೆ Announced from the stage
ದೆಹಲಿ-ಗರಿಯಾನಾದ ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತರ ಧರಣಿ ಸತ್ಯಾಗ್ರಹದಲ್ಲಿ ಶಾಮೀಲಾದ ಭಾರತೀಯ ಕಿಸಾನ್ ಒಕ್ಕೂಟದ ಅಂಬಾಲಾ ಜಿಲ್ಲೆಯ ಮುಖ್ಯಸ್ಥ ಮಲಕೀತ್ ಸಿಂಗ್ ಕಳೆದ ತಿಂಗಳು ಈ ಹೇಳಿಕೆಯನ್ನು ನೀಡಿದ್ದರು. ಈ ಕುರಿತು ಹೇಳಿಕೆ ನೀಡಿದ್ದ ಅವರು ಮಾರ್ಚ್ 1 ರಿಂದ ದೇಶಾದ್ಯಂತ ಇರುವ ರೈತರು, ಹಾಲಿನ ಬೆಲೆಯಲ್ಲಿ ರೂ.50ರಷ್ಟು ಹೆಚ್ಚಳ ಮಾಡಲಿದ್ದಾರೆ ಎಂದಿದ್ದರು. ಈ ಬೆಲೆ ಏರಿಕೆಯಿಂದ ಹಾಲಿನ ಬೆಲೆ ಲೀಟರ್ ಗೆ ರೂ.100 ಆಗಲಿದೆ. ಇದಲ್ಲದೆ ಸರ್ಕಾರ ಡಿಸೇಲ್ ಬೆಲೆ (Petrol-Diesel) ಹೆಚ್ಚಿಸಿ ರೈತರನ್ನು ನಾಲ್ಕು ಕಡೆಗಳಿಂದ ಸುತ್ತುವರೆಯಲು ಪ್ರಯತ್ನಿಸಿದೆ. ಈ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹಾಲಿನ ಬೆಲೆಯನ್ನು ರೂ.50ರವರೆಗೆ ಹೆಚ್ಚಿಸಲು ನಿರ್ಧರಿಸಿದೆ ಎಂದು ಮಲ್ಕಿತ್ ಸಿಂಗ್ ಹೇಳಿದ್ದಾರೆ. ಒಂದು ವೇಳೆ ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ಹಿಂಪಡೆಯದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ತರಕಾರಿಗಳ ಬೆಲೆಯನ್ನು ಕೂಡ ಹೆಚ್ಚಿಸಿ ಶಾಂತಿಪೂರ್ವಕವಾಗಿ ಪ್ರತಿಭಟನೆಯನ್ನು ಮುಂದುವರೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. 


ಇದನ್ನೂ ಓದಿ-  ಈ ರೀತಿ ಸಿಲಿಂಡರ್ ಬುಕ್ ಮಾಡಿ, Cashback ಜೊತೆಗೆ ಕೇವಲ 94 ರೂ.ಗೆ ಖರೀದಿಸಿ LPG Cylinder


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.