ಮತ್ತೆ ಕ್ಷೀಣಿಸಿದ ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ ಆರೋಗ್ಯ
ಫ್ಲೈಯಿಂಗ್ ಸಿಖ್ ಎಂದೇ ಖಾತ್ಯ ಪಡೆದಿರುವ ಮಿಲ್ಖಾ ಸಿಂಗ್ ಕೊರೊನಾ ಧೃಢಪಟ್ಟ ನಂತರ ಚಂಡೀಗಡದ ಪಿಜಿಐಎಂಆರ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.ಈಗ ಆಮ್ಲಜನಕದಲ್ಲಿ ವ್ಯತ್ಯಾಸ ಕಂಡು ಬಂದಿರುವ ಹಿನ್ನಲೆಯಲ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ನವದೆಹಲಿ: ಫ್ಲೈಯಿಂಗ್ ಸಿಖ್ ಎಂದೇ ಖಾತ್ಯ ಪಡೆದಿರುವ ಮಿಲ್ಖಾ ಸಿಂಗ್ ಕೊರೊನಾ ಧೃಢಪಟ್ಟ ನಂತರ ಚಂಡೀಗಡದ ಪಿಜಿಐಎಂಆರ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.ಈಗ ಆಮ್ಲಜನಕದಲ್ಲಿ ವ್ಯತ್ಯಾಸ ಕಂಡು ಬಂದಿರುವ ಹಿನ್ನಲೆಯಲ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿ: ಹಿಂದಿ ಎಲ್ಲಾ ಭಾರತೀಯರ ಮಾತೃಭಾಷೆ ಅಲ್ಲ: ಒವೈಸಿ
ಬುಧವಾರ ಕೊರೋನಾ ನೆಗಟಿವ್ ಬಂದ ಹಿನ್ನಲೆಯಲ್ಲಿ ಅವರನ್ನು ಸಾಮಾನ್ಯ ಐಸಿಯುಗೆ ಸ್ಥಳಾಂತರಿಸಿದ ನಂತರ ವೈದ್ಯರ ತಂಡವು ಸೂಕ್ಷ್ಮವಾಗಿ ಗಮನಿಸುತ್ತಿದೆ. "ಅವರು ಗುರುವಾರ ರಾತ್ರಿ ಇದ್ದಕ್ಕಿದ್ದಂತೆ ಅವರಿಗೆ ಜ್ವರ ಬಂದು ಆಮ್ಲಜನಕದ ಪ್ರಮಾಣವು ಕಡಿಮೆಯಾಗಿದೆ.ಈಗ ವೈದ್ಯರ ತಂಡ ಅವರ ಮೇಲೆ ನಿಗಾವಹಿಸಿದೆ ಎಂದು ಪಿಜಿಐಎಂಆರ್ ಮೂಲಗಳು ಶುಕ್ರವಾರ ತಿಳಿಸಿವೆ.
ಅವರು ಕಳೆದ ತಿಂಗಳು ಅವರಿಗೆ COVID-19 ಧೃಡಪಟ್ಟಿತ್ತು ಮತ್ತು ಅವರ 85 ವರ್ಷದ ಪತ್ನಿ ನಿರ್ಮಲ್ ಕೌರ್ ಸಹ ವೈರಸ್ ಸೋಂಕಿಗೆ ಒಳಗಾಗಿದ್ದರು, ಅವರು ಭಾನುವಾರ ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೌರ್ ಅವರು ಮಾಜಿ ರಾಷ್ಟ್ರೀಯ ಮಹಿಳಾ ವಾಲಿಬಾಲ್ ತಂಡದ ನಾಯಕಿಯಾಗಿದ್ದರು.
ಇದನ್ನೂ ಓದಿ: ಮೋಸ ಹೋದರೆ ಡಾಬವಾಲೆ ಬಾಬಾ, ಯುಟ್ಯೂಬರ್ ವಿರುದ್ಧ ಪೊಲೀಸರಿಗೆ ದೂರು ಕೊಟ್ಟ ಕಾಂತಾ ಪ್ರಸಾದ್
ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಒಂದು ವಾರದ ಚಿಕಿತ್ಸೆಯ ನಂತರ ಮಿಲ್ಖಾ (Milkha Singh) ಅವರನ್ನು ಜೂನ್ 3 ರಂದು ಪಿಜಿಐಎಂಆರ್ಗೆ ದಾಖಲಿಸಲಾಯಿತು.ಮಿಲ್ಖಾ ಸಿಂಗ್ ಅವರು ನಾಲ್ಕು ಬಾರಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಾಗಿದ್ದಾರೆ ಮತ್ತು 1958 ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಕೂಡ ಹೌದು.1960 ರ ರೋಮ್ ಒಲಿಂಪಿಕ್ಸ್‌ನ 400 ಮೀಟರ್ ಫೈನಲ್‌ನಲ್ಲಿ ಅವರ ನಾಲ್ಕನೇ ಸ್ಥಾನ ಪಡೆದು ಗಮನ ಸೆಳೆದಿದ್ದರು.
ಇದನ್ನೂ ಓದಿ: Coronasomia: Covid-19 ಮಹಾಮಾರಿಯ ನಡುವೆಯೇ ಹೆಚ್ಚಾಗುತ್ತಿದೆ ಈ ನಿಗೂಢ ಕಾಯಿಲೆಯ ಅಪಾಯ!
ಅವರು 1956 ಮತ್ತು 1964 ರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು ಮತ್ತು 1959 ರಲ್ಲಿ ಪದ್ಮಶ್ರೀ ಅವರಿಗೆ ನೀಡಲಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.