ಹಿಂದಿ ಎಲ್ಲಾ ಭಾರತೀಯರ ಮಾತೃಭಾಷೆ ಅಲ್ಲ: ಒವೈಸಿ

ಹಿಂದಿ ಎಲ್ಲ ಭಾರತೀಯರ ಮಾತೃಭಾಷೆಯಲ್ಲ ಎಂದು ಎಐಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಟ್ವೀಟ್ ಮಾಡಿದ್ದಾರೆ.

Last Updated : Sep 14, 2019, 02:15 PM IST
ಹಿಂದಿ ಎಲ್ಲಾ ಭಾರತೀಯರ ಮಾತೃಭಾಷೆ ಅಲ್ಲ: ಒವೈಸಿ title=

ನವದೆಹಲಿ: ದೇಶ ಮತ್ತು ವಿಶ್ವಾದ್ಯಂತ ಇಂದು ಹಿಂದಿ ದಿನವನ್ನು ಆಚರಿಸಲಾಗುತ್ತಿದೆ. ಈ ಬಗ್ಗೆ ಎಐಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದು, ಹಿಂದಿ, ಹಿಂದೂ ಧರ್ಮ ಮತ್ತು ಹಿಂದೂ ಧರ್ಮಕ್ಕಿಂತ ಭಾರತ ದೊಡ್ಡದಾಗಿದೆ ಎಂದು ಹೇಳಿದ್ದಾರೆ.

ಹಿಂದಿ ಎಲ್ಲ ಭಾರತೀಯರ ಮಾತೃಭಾಷೆಯಲ್ಲ ಎಂದು ಟ್ವೀಟ್ ಮಾಡಿರುವ ಒವೈಸಿ, ದೇಶದಲ್ಲಿ ಮಾತನಾಡುವ ಇತರ ಮಾತೃಭಾಷೆಗಳ ವೈವಿಧ್ಯತೆ ಮತ್ತು ಸೌಂದರ್ಯವನ್ನು ಮೆಚ್ಚಿಸಲು ನೀವು ಪ್ರಯತ್ನಿಸಬಹುದೇ? ಆರ್ಟಿಕಲ್ 29 ಪ್ರತಿಯೊಬ್ಬ ಭಾರತೀಯನಿಗೂ ವಿಭಿನ್ನ ಭಾಷೆ, ಲಿಪಿ ಮತ್ತು ಸಂಸ್ಕೃತಿಯ ಹಕ್ಕನ್ನು ನೀಡುತ್ತದೆ" ಎಂದು ಹೇಳಿದ್ದಾರೆ.

ಇದೇ ವೇಳೆ, ಕೇಂದ್ರ ಸರ್ಕಾರದ ಹಿಂದಿ ದಿವಸ ಆಚರಣೆಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಕೇಂದ್ರ ಸರ್ಕಾರ ಮತ್ತೆ ಏಕ ಭಾಷೆ ಪ್ರತಿಪಾದನೆ ಮೂಲಕ ಹಿಂದಿ ಹೇರಿಕೆಗೆ ಮುಂದಾಗಿದೆ ಎಂದು ಹಲವರು ಟೀಕಿಸಿದ್ದಾರೆ.

Trending News