ನವದೆಹಲಿ: Coronasomnia - ಕೊರೊನಾ ವೈರಸ್ (Coronavirus) ನ ಮೂರನೇ ಅಲೆಯ ಚಿಂತೆ ಹಾಗೂ ಭಯದ ನಡುವೆ ಇದೀಗ ಮಹಾಮಾರಿ ಮನುಷ್ಯರ ನಿದ್ರೆಯ ಮೇಲೆ ಪರಿಣಾಮ ಬೀರಲು ಆರಂಭಿಸಿದೆ. ಕೊವಿಡ್ ಮಹಾಮಾರಿಯ ಹಿನ್ನೆಲೆ ಇದೀಗ ಜನರು ಸರಿಯಾಗಿ ನಿದ್ರಿಸುತ್ತಿಲ್ಲ. ಕೊರೊನಾ ವೈರಸ್ ಕೇವಲ ಜನರ ಶರೀರವನ್ನಷ್ಟೇ ಅಲ್ಲ, ಅವರ ಸ್ಲೀಪ್ ಪ್ಯಾಟರ್ನ್ ಗೂ (Sleep Pattern) ಕೂಡ ಅಪಾಯ ಉಂಟುಮಾಡುತ್ತಿದೆ. ಕೊರೊನಾ ವೈರಸ್ ನಿನ್ದಾಗುತ್ತಿರುವ ನಿದ್ರಾಹೀನತೆಗೆ ಕೊರೋನೋಸೋಮ್ನಿಯಾ (Coronasomnia) ಎಂದು ಕರೆಯಲಾಗುತ್ತಿದೆ. ಹಾಗಾದರೆ ಬನ್ನಿ ಕೊರೊನಾ ಸೋಮ್ನಿಯಾ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ.
ಕೊರೋನೋಸೋಮ್ನಿಯಾದ ಲಕ್ಷಣಗಳೇನು?
ನಿಮ್ಮ ನಿದ್ರೆಯೂ ಕೂಡ ಈ ಮೊದಲಿನಂತಿಲ್ಲವೇ? ನಿದ್ರಿಸಲು ಪ್ರಯತ್ನಿಸಿದರೂ ಕೂಡ ಮೆದುಳು ಬೇರೆಡೆ ಯೋಚಿಸುತ್ತಿರುತ್ತದೆಯೇ? ಆಕಸ್ಮಿಕವಾಗಿ ನಿದ್ರೆ ಹಾಳಾಗುತ್ತದೆ ಮತ್ತು ಪುನಃ ನಿದ್ರಿಸಲು ಸಮಸ್ಯೆ ಎದುರಾಗುತ್ತಿದೆಯಾ? ಹಾಗಾದರೆ ಇವು ಕೊರೊನಾ ಇನ್ಸೋಮೆನಿಯಾ (Corona Related Insomenia) ಲಕ್ಷಣಗಳಾಗಿರಬಹುದು. ಕೊರೊನಾ ಮಹಾಮಾರಿಯ (Corona Pandemic) ಕಾರಣ ಜನರಿಗೆ ಸರಯಾಯಾಗಿ ನಿದ್ರಿಸಲು ಆಗುತ್ತಿಲ್ಲ ಹಾಗೂ ಅವರು ಕೊರೋನಾಸೋಮ್ನಿಯಾಗೆ ಗುರಿಯಗುತ್ತಿದ್ದಾರೆ. ತನ್ನವರನ್ನು ಕಳೆದುಕೊಂಡ ಚಿಂತೆ, ಕೊರೊನಾ ಸೋಂಕಿನ ಭಯ, ಲಕ್ಷಣಗಳಿಂದ ರಕ್ಷಿಸಿಕೊಳ್ಳಲು ಎದುರಾಗುತ್ತಿರುವ ಒತ್ತಡ ಜನರಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿವೆ. ಇದು ನಿದ್ರೆಯ ಮೇಲೆ ಪ್ರಭಾವ ಬೀರುತ್ತಿದೆ.
ವೇಗವಾಗಿ ಹೆಚ್ಚಾಗುತ್ತಿವೆ ಕೊರೊನಾಸೋಮ್ನಿಯಾ ಪ್ರಕರಣಗಳು
ಅಮೇರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್ (Amerikan Academy Of Sleep Medicine) ಮೂಲಕ 2020 ರಲ್ಲಿ ನಡೆಸಲಾಗಿರುವ ಒಂದು ಸಮೀಕ್ಷೆಯ ಪ್ರಕಾರ, ಕೊರೊನಾ ಮಹಮಾರಿಗೂ ಮೊದಲು ಶೇ.20ರಷ್ಟು ಜನರು ನಿದ್ರೆಯ ಸಮಸ್ಯೆ ಎದುರಿಸುತ್ತಿದ್ದರು. ಕೊರೊನಾ ಮಹಾಮಾರಿಯ ಬಳಿಕ ಈ ಸಂಖ್ಯೆ ಶೇ.60 ಕ್ಕೆ ಏರಿಕೆಯಾಗಿದೆ. ರಾಯಲ್ ಫಿಲಿಪ್ (Royal Philip Survey) ಹೆಸರಿನ ಸಂಸ್ಥೆಯೊಂದು ಸುಮಾರು 13 ದೇಶಗಳಲ್ಲಿ ನಿದ್ರೆಗೆ ಸಂಬಂಧಿಸಿದಂತೆ ಸಮೀಕ್ಷೆಯೊಂದನ್ನು ನಡೆಸಿದ್ದು, ಇದರಲ್ಲಿ ಶೇ.37 ರಷ್ಟು ಜನರು ಕೊರೊನಾ ಮಹಾಮಾರಿ ತಮ್ಮ ನಿದ್ರೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಶೇ.70 ಯುವಕರಿಗೆ ಕೊವಿಡ್ ಆರಂಭವಾದಾಗಿನಿಂದಲೇ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತಿವೆ. ವಿಶೇಷ ಎಂದರೆ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು ಗಮನಿಸಲಾಗಿದೆ.
ಕೊರೊನಾಸೋಮ್ನಿಯಾದಿಂದ ಹಲವು ಕಾಯಿಲೆಗಳಿಗೆ ಆಮಂತ್ರಣ
ಮ್ಯಾಕ್ಸ್ ಹೆಲ್ತ್ ಕೆಯರ್ ವೈದ್ಯ ಐ.ಎಂ ಚುಗ್ (Director, Respiratory & Sleep Disorders) ಹೇಳುವ ಪ್ರಕಾರ, ಕೊರೊನಾ ಸೋಮ್ನಿಯಾ ವ್ಯಕ್ತಿಗಳ ಹೃದಯ, ಮೆದುಳು, ವಯಸ್ಸು, ಇಮ್ಯೂನಿಟಿ ಹಾಗೂ ಆಂಟಿಬಾಡಿಗಳಿಗೆ ದೊಡ್ಡ ಅಪಾಯ ಎಂದಿದ್ದಾರೆ. ನಿದ್ರೆ ಬಾರದೆ ಇರುವುದರ ನೇರ ಸಂಬಂಧ ಹೃದಯ, ರಕ್ತದೊತ್ತಡ, ಸ್ಟ್ರೋಕ್ ಜೊತೆಗಿದೆ. ನಿದ್ರೆ ಬಾರದೆ ಇರುವುದು ಎಂಗ್ಜೈಟಿ ಹೆಚ್ಚಿಸುತ್ತದೆ. 1 ಗಂಟೆಯ ಕಡಿಮೆ ನಿದ್ರೆ ಕೂಡ ವ್ಯಕ್ತಿಗಳ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುವ ಸಾಧ್ಯತೆ ಇದೆ. ನಿದ್ರೆ ಸರಿಯಾಗಿ ಬಾರದೆ ಇದ್ದಲ್ಲಿ ಮನಸ್ಸಿನಲ್ಲಿ ಆತ್ಮಹತ್ಯೆಯಂತಹ ವಿಚಾರಗಳು ಕೂಡ ಬರಬಹುದು ಎಂದು ವೈದ್ಯರು ಹೇಳುತ್ತಾರೆ.
ನಿದ್ರೆ ಬಾರದೆ ಹೋದಲ್ಲಿ ಈ ಸಮಸ್ಯೆಗಳಾಗಬಹುದು
ಒಂದು ವೇಳೆ 6 ಗಂಟೆಗೂ ಕಡಿಮೆ ನಿದ್ರಿಸಿದರೆ ಅಲ್ಜಾಯಿಮರ್ (Alzheimer's) ಅಪಾಯ ಹೆಚ್ಚಾಗುತ್ತದೆ. ಒಂದು ವೇಳೆ ನೀವು ರಾತ್ರಿ 4 ಗಂಟೆಯೇ ಮಲಗಿದರೆ, ದೇಹದಲ್ಲಿನ ಟೆಸ್ಟೋಸ್ಟೀರಾನ್ ಮಟ್ಟ 10 ವರ್ಷ ದೊಡ್ಡವ್ಯಕ್ತಿಗಳ ರೀತಿ ಇರುತ್ತದೆ. ಅಂದರೆ, ನೀವು ನಿಮ್ಮ ವಯಸ್ಸಿಗಿಂತ 10 ವರ್ಷ ದೊಡ್ಡವರಾಗಿ ಕಾಣುವಿರಿ. ಒಂದು ವೇಳೆ ನೀವು ನಿಮ್ಮ ನಿರ್ಧಾರಿತ ಅವಧಿಗಿಂತ 1 ಗಂಟೆ ಕಡಿಮೆ ನಿದ್ರಿಸಿದರೆ, ಹೃದಯಾಘಾತದ ಅಪಾಯ ಶೇ.24ರಷ್ಟು ಹೆಚ್ಚಾಗುತ್ತದೆ. 7 ಗಂಟೆಗಿಂತ ಕಡಿಮೆ ನಿದ್ರಿಸುವುದರಿಂದ ಶೀತ, ಕೆಮ್ಮು, ಫ್ಲೂ ಅಪಾಯ 3 ಪಟ್ಟು ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ಸಂಪೂರ್ಣ ನಿದ್ರೆ ಮಾಡಿಲ್ಲ ಎಂದಾದರೆ ವ್ಯಾಕ್ಸಿನೆಶನ್ ಬಳಿಕವೂ ಕೂಡ ಶರೀರದಲ್ಲಿ ಆಂಟಿಬಾಡಿಗಳು ಶೇ.50 ರಷ್ಟು ಕಮ್ಮಿ ಉತ್ಪತ್ತಿಯಾಗುತ್ತವೆ.
ಇದನ್ನೂ ಓದಿ- Corona Vaccine For Children: ಸಿದ್ಧಗೊಂಡಿದೆ ಮಕ್ಕಳ 'ಸುರಕ್ಷಾ ಕವಚ'! ಕೋತಿಗಳ ಮೇಲಿನ ಆರಂಭಿಕ ಪರೀಕ್ಷೆ ಯಶಸ್ವಿ !
ಶ್ರೀಗಂಗಾರಾಮ್ ಆಸ್ಪತ್ರೆಯತ ವೈದ್ಯ ಸಂಜಯ್ ಮಂಚಂದಾ (Sleep Medicine Senior Consultant) ಹೇಳುವ ಪ್ರಕಾರ, ಒಂದು ವೇಳೆ ವ್ಯಕ್ತಿ ಕೊರೋನಸೋಮ್ನಿಯಾದಿಂದ ಪೀಡಿತನಾಗಿದ್ದರೆ, ಆ ವ್ಯಕ್ತಿ ನಿದ್ರಾಹೀನತೆಯಿಂದ ಉಂಟಾಗುವ ಗಂಭೀರ ಕಾಯಿಲೆಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು. ಈ ಕಾಯಿಲೆಯಿಂದ ಪಾರಾಗಲು ಔಷಧಿಯ ಅವಶ್ಯಕತೆ ಇಲ್ಲ. ಕೆಲ ಮುನ್ನೆಚ್ಚರಿಕಾ ಕ್ರಮ ಕೈಗೊಂಡರೂ ಕೂಡ ಕೊರೊನಾಸೋಮ್ನಿಯಾದಿಂದ ರಕ್ಷಿಸಿಕೊಳ್ಳಬಹುದು.
ಇದನ್ನೂ ಓದಿ- lert! ದೇಶದಲ್ಲಿ ಸಿಕ್ಕಿದೆ ಕೊರೊನಾ ವೈರಸ್ ನ Delta Plus Variant
ಈ ಸುಲಭ ಉಪಾಯಗಳನ್ನು ಅನುಸರಿಸಿ
>> ಹಾಸಿಗೆಗೆ ಹೋದ 25 ನಿಮಿಷಗಳ ಬಳಿಕವೂ ಕೂಡ ನಿದ್ರೆ ಬಾರದೆ ಹೋದಲ್ಲಿ ಧ್ಯಾನ ಮಾಡಿ.
>> ಮದ್ಯಾಹ್ನ 2 ಗಂಟೆಯ ಬಳಿಕ ಟೀ, ಕಾಫಿ ಸೇವಿಸಬೇಡಿ. ನಿದ್ರೆಯ ಗಾಢ ಅವಸ್ಥೆಯಲ್ಲಿ ರಾಪಿಡ್ ಆಯ್ ಮೂವ್ಮೆಂಟ್ ಇರುತ್ತದೆ ಮತ್ತು ಅದನ್ನು ಕ್ಯಾಫಿನ್ ಪ್ರಭಾವಿತಗೊಳಿಸುತ್ತದೆ.
>> ಬೆಡ್ ಅನ್ನು ವರ್ಕ್ ಸ್ಟೇಷನ್ ಮಾಡಬೇಡಿ.
>> ಬೆಳಗ್ಗೆ 15 ನಿಮಿಷ ಬಿಸಿಲಿನಲ್ಲಿ ನಿಲ್ಲಿ.
>> ಮಲಗುವ ಮುನ್ನ ಮೊಬೈಲ್ ಬಳಕೆಯನ್ನು ನಿಲ್ಲಿಸಿ. ಮೊಬೈಲ್, ಟಿವಿ, ಕಂಪ್ಯೂಟರ್ ಬ್ಲೂ ಸ್ಕ್ರೀನ್ ಮೇಲಾಟೋನಿನ್ ಹಾರ್ಮೋನ್ ಪ್ರಮಾಣ ಕಡಿಮೆಗೊಳಿಸುತ್ತದೆ. ಇದು ಕನ್ನುರೆಪ್ಪೆಗಳ ಮಿಟುಕಿಸುವಿಕೆ ಕಡಿಮೆ ಮಾಡುತ್ತದೆ.
>> ನ್ಯಾಷನಲ್ ಸ್ಲೀಪ್ ಫೌಂಡೇಶನ್ ಪ್ರಕಾರ ಬೆಡ್ ರೂಮ್ ತಾಪಮಾನ 16 ರಿಂದ 19 ಡಿಗ್ರಿ ಸೆಲ್ಸಿಯಸ್ ನಡುವೆ ಇರಬೇಕು, ಇದು ನಿದ್ರೆ ಬರುವಂತೆ ಮಾಡಲು ಸಹಕರಿಸುತ್ತದೆ.
ಇದನ್ನೂ ಓದಿ-ovaxinನಲ್ಲಿ ಹಸುವಿನ ಕರುವಿನ ಸಿರಮ್ ಬಳಕೆ? ಕೇಂದ್ರ ಸರ್ಕಾರ ಹೇಳಿದ್ದೇನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.