ನವದೆಹಲಿ: Labour Codes -  ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ನಾಲ್ಕು ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ನಿಯಮಗಳನ್ನು ಅಂತಿಮಗೊಳಿಸಿದೆ. ಹೀಗಾಗಿ ಇದೀಗ ಈ ಸುಧಾರಣೆಗಳು ಜಾರಿಯಾಗಲು ಇದು ದಾರಿ ಮಾಡಿಕೊಟ್ಟಿದೆ. ಶೀಘ್ರದಲ್ಲೇ ಅವುಗಳನ್ನು ಕಾರ್ಯಗತಗೊಳಿಸಲು ನೋಟಿಸ್ ನೀಡಲಾಗುವುದು. ರಾಷ್ಟ್ರಪತಿಗಳ ಅನುಮೋದನೆಯ ನಂತರ ವೇತನ, ಕೈಗಾರಿಕಾ ಸಂಬಂಧಗಳು, ಸಾಮಾಜಿಕ ಭದ್ರತೆ ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳು (OSH) ನಾಲ್ಕು ಸಂಹಿತೆಗಳನ್ನು ನೀಡಲಾಗಿದೆ. ಆದರೆ ಈ ನಾಲ್ಕು ಕೋಡ್‌ಗಳನ್ನು ಕಾರ್ಯಗತಗೊಳಿಸಲು ಅಧಿಸೂಚನೆ ಹೊರಡಿಸಬೇಕಾಗಿದೆ.


COMMERCIAL BREAK
SCROLL TO CONTINUE READING

ಸಮಾಲೋಚನೆಯ ಪ್ರಕ್ರಿಯೆ ಪೂರ್ಣ
ಪ್ರಸ್ತುತ ಸಚಿವಾಲಯವು (Modi Government) ಈ ನಾಲ್ಕು ಸಂಹಿತೆಗಳ (Labour Codes) ಕರಡು ನಿಯಮಗಳ (Labour Laws) ಕುರಿತು ಸಮಾಲೋಚನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಮತ್ತು ಅವುಗಳನ್ನು ಅಧಿಸೂಚನೆಗಾಗಿ ಸಿದ್ಧಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಕಾರ್ಮಿಕ ಕಾರ್ಯದರ್ಶಿ ಅಪೂರ್ವಾ ಚಂದ್ರ (Apoorva Chandra) , ನಾವು ನಾಲ್ಕು ಸಂಹಿತೆಗಳ ಅಡಿಯಲ್ಲಿನ ನಿಯಮಗಳನ್ನು ಅಂತಿಮಗೊಳಿಸಿದ್ದೇವೆ, ಈ ನಿಯಮಗಳು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲು ತುಂಬಾ ಮಹತ್ವದ್ದಾಗಿವೆ. ಈ ನಿಯಮಗಳನ್ನು ತಿಳಿಸಲು ಅವರು ಸಂಹಿತೆಗಳು (Labour Reforms) ಕೂಡ ಸಿದ್ಧವಾಗಿವೆ. ನಾಲ್ಕು ಸಂಹಿತೆಗಳ ಅಡಿಯಲ್ಲಿ ನಿಯಮಗಳನ್ನು ಮಾಡಲು ರಾಜ್ಯಗಳು ತಮ್ಮ ಕೆಲಸವನ್ನು ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ.


ಕೆಲ ದಿನಗಳ ಹಿಂದೆಯಷ್ಟೇ ಈ ನಾಲ್ಕು ಸಂಹಿತೆಗಳಾದ ವೇತನ, ಇಂಡಸ್ಟ್ರಿಯಲ್ ರಿಲೇಶನ್ಸ್, ಸೋಸಿಯಲ್ ಸೆಕ್ಯೂರಿಟಿ ಹಾಗೂ ಆಕ್ಯುಪೇಶನಲ್ ಸೇಫ್ಟಿ, ಹೆಲ್ತ್ ಅಂಡ್ ವರ್ಕಿಂಗ್ ಕಂಡಿಶನ್ (OSH)ಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದ ಒಟ್ಟು 44 ಕಾರ್ಮಿಕ ಕಾನೂನುಗಳನ್ನು ಪುನರ್ವಿಂಗಡನೆ ಮಾಡಲಾಗಿದೆ. ವೇತನದ ಕುರಿತಾದ ಕೋಡ್ ಗೆ ಸಂಸತ್ತು 2019 ರಲ್ಲಿ ಅಂಗೀಕಾರ ನೀಡಿತ್ತು. ಉಳಿದ ಮೂರು ಕೋಡ್ ಗಳಿಗೆ 2020ರಲ್ಲಿ ಅನುಮೋದನೆ ನೀಡಲಾಗಿತ್ತು.


ಇದನ್ನೂ ಓದಿ- ನೌಕರರಿಗೆ ಇಲ್ಲಿದೆ ಸಂತಸದ ಸುದ್ದಿ, ಒಂದು ವರ್ಷ ಸೇವೆ ಸಲ್ಲಿಸಿದವರಿಗೂ ಕೂಡ ಸಿಗಲಿದೆ Gratuity ಲಾಭ !


ಕಾರ್ಮಿಕ ಸಚಿವಾಲಯ (Ministry Of Labour) ಏಕಕಾಲಕ್ಕೆ ಈ ನಾಲ್ಕೂ ಸಂಹಿತೆಗಳನ್ನು ಜಾರಿಗೆ ತರಲು ಬಯಸುತ್ತಿದೆ. ನಿಯಮಗಳು ರೂಪಗೊಂಡ ಬಳಿಕ ನಾಲ್ಕೂ ಸಂಹಿತೆಗಳ ಅಧಿಸೂಚನೆ ಹೊರಡಿಸಲಾಗುವುದು.


ಇದನ್ನೂ ಓದಿ- New job code : ಇನ್ನು ವಾರದಲ್ಲಿ ನಾಲ್ಕೇ ದಿನ ಕೆಲಸ, ಮೂರು ದಿನ ರಜೆ..! ಸರ್ಕಾರ ತರುತ್ತಿದೆ ಹೊಸ ನಿಯಮ


ರಾಜ್ಯಗಳು ಕೂಡ ಕೆಲ ನಿಯಮಗಳನ್ನು ನಿರ್ಧರಿಸಲಿವೆ
ಇದಕ್ಕೂ ಮೊದಲು ಫೆಬ್ರುವರಿ 8 ರಂದು ಸುದ್ದಿಗೋಷ್ಠಿ ನಡೆಸಿದ್ದ ಚಂದ್ರ, ನಿಯಮಗಳನ್ನು ರೂಪಿಸುವ ಪ್ರಕ್ರಿಯೆ ಈ ಮೊದಲೇ ಆರಂಭಗೊಂಡಿದೆ ಮತ್ತು ಮುಂಬರುವ ಒಂದು ವಾರದಲ್ಲಿ ಇದನ್ನು ಪೂರ್ಣಗೊಳಿಸಲಾಗುವುದು ಎಂದಿದ್ದರು. ಎಲ್ಲಾ ಹಿತಧಾರಕರಿಗೆ ನಿಯಮಗಳನ್ನು ರೂಪಿಸಲು ಹಾಗೂ ಪರಾಮರ್ಶಿಸಲು ಹೇಳಲಾಗಿದೆ. ಹೀಗಾಗಿ ಶೀಘ್ರವೇ ಸಚಿವಾಲಯ ಈ ನಾಲ್ಕೂ ಸಂಹಿತೆಗಳನ್ನು ಜಾರಿಗೊಳಿಸುವ ಸ್ಥಿತಿಯಲ್ಲಿದ್ದು, ಇದರಲ್ಲಿ ವೇತನ, ಇಂಡಸ್ಟ್ರಿಯಲ್ ರಿಲೇಶನ್ಸ್, ಸಾಮಾಜಿಕ ಭದ್ರತೆ ಹಾಗೂ ಆಕ್ಯೂಪೆಶನಲ್ ಸೇಫ್ಟಿ, ಹೆಲ್ತ್ ಅಂಡ್ ವರ್ಕಿಂಗ್ ಕಂಡಿಶನ್ (OSH)ಗಳಿಗೆ ಸಂಬಂಧಿಸಿದಂತೆ ಸಂಹಿತೆಗಳು ಶಾಮೀಲಾಗಿವೆ.


ಇದನ್ನೂ ಓದಿ- Jandhan ಖಾತೆದಾರರಿಗೆ ಸಿಗುತ್ತಿರುವ ಈ ಲಾಭ ನಿಮ್ಮದಾಗಿಸಲು ಈ ಕೆಲಸ ತಪ್ಪದೆ ಮಾಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.