ನೌಕರರಿಗೆ ಇಲ್ಲಿದೆ ಸಂತಸದ ಸುದ್ದಿ, ಒಂದು ವರ್ಷ ಸೇವೆ ಸಲ್ಲಿಸಿದವರಿಗೂ ಕೂಡ ಸಿಗಲಿದೆ Gratuity ಲಾಭ !

ಸಾಮಾಜಿಕ ಭದ್ರತಾ ಸಂಹಿತೆ (Social Security Code 2020) ಯಲ್ಲಿ ಅನೇಕ ಹೊಸ ನಿಬಂಧನೆಗಳನ್ನು ಸೇರಿಸಲಾಗಿದೆ.  ಈ ನೂತನ ನಿಬಂಧನೆಗಳ ಪ್ರಕಾರ ಇನ್ಮುಂದೆ ಗ್ರ್ಯಾಚ್ಯುಟಿ ಪಡೆಯಲು ಬೇಕಾಗುವ ಅರ್ಹತೆಯನ್ನು ಐದು ವರ್ಷಗಳಿಂದ ಒಂದು ವರ್ಷಕ್ಕೆ ಇಳಿಕೆ ಮಾಡುವ ಶಿಫಾರಸ್ಸು ಮಾಡಲಾಗಿದೆ.

Last Updated : Sep 21, 2020, 09:55 PM IST
  • ಸಾಮಾಜಿಕ ಭದ್ರತಾ ಸಂಹಿತೆ (Social Security Code)ಯಲ್ಲಿ ಅನೇಕ ಹೊಸ ನಿಬಂಧನೆಗಳನ್ನು ಸೇರಿಸಲಾಗಿದೆ.
  • ಗ್ರ್ಯಾಚ್ಯುಟಿ ಪಡೆಯಲು ಬೇಕಾಗುವ ಅರ್ಹತೆಯನ್ನು ಐದು ವರ್ಷಗಳಿಂದ ಒಂದು ವರ್ಷಕ್ಕೆ ಇಳಿಕೆ ಮಾಡುವ ಶಿಫಾರಸ್ಸು ಮಾಡಲಾಗಿದೆ.
  • ಆದರೆ, ಕಾನೂನು ಜಾರಿಗೆ ಬಂದ ನಂತರವೇ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗಲಿವೆ.
ನೌಕರರಿಗೆ ಇಲ್ಲಿದೆ ಸಂತಸದ ಸುದ್ದಿ, ಒಂದು ವರ್ಷ ಸೇವೆ ಸಲ್ಲಿಸಿದವರಿಗೂ ಕೂಡ ಸಿಗಲಿದೆ Gratuity ಲಾಭ ! title=

ನವದೆಹಲಿ: ಸಂಸತ್ತಿನ ಮಾನ್ಸೂನ್ ಅಧಿವೇಶನ (Mansoon Session) ದಲ್ಲಿ ಕೇಂದ್ರ ಸರ್ಕಾರವು ಕಾರ್ಮಿಕ ಸುಧಾರಣೆಗೆ (Labour Reforms) ಸಂಬಂಧಿಸಿದ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಪರಿಚಯಿಸಿದೆ. ಇವುಗಳಲ್ಲಿ ಸಾಮಾಜಿಕ ಭದ್ರತಾ ಸಂಹಿತೆ 2020 (Social Security Code 2020) ಕೂಡ ಶಾಮೀಲಾಗಿದೆ.  ಸಾಮಾಜಿಕ ಭದ್ರತಾ ಸಂಹಿತೆಯಲ್ಲಿ ಅನೇಕ ಹೊಸ ನಿಬಂಧನೆಗಳನ್ನು ಸೇರಿಸಲಾಗಿದೆ. ಈ ನಿಬಂಧನೆಗಳಲ್ಲಿ ಒಂದು ಗ್ರಾಚ್ಯುಟಿ (Gratuity) ಕುರಿತಾದ ಒಂದು ನಿಬಂಧನೆ ಇದೆ. ಐದು ವರ್ಷಗಳ ಬದಲು ಒಂದು ವರ್ಷದಲ್ಲಿ ಗ್ರ್ಯಾಚುಟಿಯನ್ನು ಪಡೆಯಬಹುದು ಎಂದು ಈ ನಿಬಂಧನೆಯಲ್ಲಿ ಹೇಳಲಾಗಿದೆ.

ಇದನ್ನು ಓದಿ- Good News: 40 ಲಕ್ಷ ನಿರುದ್ಯೋಗಿಗಳಿಗೆ ಶೀಘ್ರವೇ ಸಿಗಲಿದೆ ಅರ್ಧ ವೇತನ

ವೇತನದ ಜೊತೆಗೆ ಸಿಗಲಿದೆ ಗ್ರ್ಯಾಚುಟಿ ಲಾಭ
 ಸಾಮಾಜಿಕ ಭದ್ರತಾ ಸಂಹಿತೆ 2020 (Social Security Code 2020)ರಲ್ಲಿ ನೂತನ ನಿಬಂಧನೆಗಳನ್ನೂ ನೀಡಲಾಗಿದೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಇದರಿಂದ ನೇರವಾಗಿ ಲಾಭ ಸಿಗಲಿದೆ. ನಿಗದಿತ ಅವಧಿಯ ಆಧಾರದ ಮೇಲೆ ಕೆಲಸ ಮಾಡುವ ಇಂತಹ ಉದ್ಯೋಗಿಗಳಿಗೆ ಅಷ್ಟೇ ದಿನಗಳ ಆಧಾರದ ಮೇಲೆ ಗ್ರ್ಯಾಚುಟಿ ಪಡೆಯಲು ಅರ್ಹರಾಗಿರುತ್ತಾರೆ. ಇದಕ್ಕಾಗಿ ಐದು ವರ್ಷಗಳನ್ನು ಪೂರ್ಣಗೊಳಿಸುವ ಅಗತ್ಯವಿಲ್ಲ. ಇದನ್ನು ಸುಲಭ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವುದಾದರೆ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರು ತಮ್ಮ ಸಂಬಳದೊಂದಿಗೆ ಗ್ರ್ಯಾಚುಟಿ ಲಾಭವನ್ನು ಪಡೆಯಲಿದ್ದಾರೆ. ಒಪ್ಪಂದವು ಎಷ್ಟೇ ಅವಧಿಯದ್ದಾಗಿರಲಿ, ಅವರಿಗೆ ಸಂಬಳದ ಆಧಾರದ ಮೇಲೆ ಗ್ರ್ಯಾಚುಟಿ ನೀಡಬೇಕು ಎನ್ನಲಾಗಿದೆ.

ಇದನ್ನು ಓದಿ- Good News: EPF ನಿಯಮಗಳಲ್ಲಿ ಭಾರಿ ಬದಲಾವಣೆ ತಂದ ಕಾರ್ಮಿಕ ಸಚಿವಾಲಯ

ಕಾಯ್ದೆ ಜಾರಿಗೆ ಬಂದ ಬಳಿಕ ಸಿಗಲಿದೆ ಈ ಲಾಭ
ಸಾಮಾಜಿಕ ಭದ್ರತಾ ಸಂಹಿತೆ 2020 ಕ್ಕೆ ಇನ್ನೂ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರ ನೀಡಲಾಗಿಲ್ಲ. ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರ ದೊರೆದ ಬಳಿಕ ಮಾತ್ರವೇ ಇದು ಕಾನೂನು ಸ್ವರೂಪ ಪಡೆದು ಜಾರಿಗೆ  ಬರಲಿದೆ ಮತ್ತು ನಂತರವೇ ಅದರ ಎಲ್ಲಾ ಮಾಹಿತಿಗಳು ಬಹಿರಂಗಗೊಳ್ಳಲಿವೆ. ಕಾನೂನು ಜಾರಿಗೆ ಬಂದ ನಂತರವೇ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗಲಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

Trending News