7th Pay Commission: Pension ನಿಯಮದಲ್ಲಿ ಭಾರಿ ಬದಲಾವಣೆ, ನಿಮ್ಮ ಮೇಲೇನು ಪ್ರಭಾವ

7th Pay Commission - ಸಮಯದ ಬೇಡಿಕೆ ಮತ್ತು 7 ನೇ ವೇತನ ಆಯೋಗದ ಶಿಫಾರಸುಗಳನ್ನು ((7th Pay Commission)) ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಪಿಂಚಣಿ ನಿಯಮಗಳಲ್ಲಿ (Pension Rule)ದೊಡ್ಡ ಬದಲಾವಣೆಯನ್ನು ಮಾಡಿದೆ. ಹೊಸ ನಿಯಮಗಳ ಪ್ರಕಾರ, ಈಗ ಗರಿಷ್ಠ ಪಿಂಚಣಿಯನ್ನು 1.25 ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ. ಇದು ಮೊದಲು 45 ಸಾವಿರ ರೂಪಾಯಿಗಳಷ್ಟಿತ್ತು.

ನವದೆಹಲಿ: 7th Pay Commission - ಸರ್ಕಾರಿ ಸೇವೆಯಿಂದ ನಿವೃತ್ತಿಯಾದ ನಂತರ ಪಿಂಚಣಿ ಪಡೆಯಲು ಪಡಬೇಕಾದ ಕಷ್ಟದ ಬಗ್ಗೆ ಪ್ರತಿಯೊಬ್ಬ ಸರ್ಕಾರಿ ನೌಕರನಿಗೆ ತಿಳಿದಿದೆ. ನಿವೃತ್ತಿಯ ನಂತರ ನೌಕರ ನಿಧನ ಹೊಂದಿದರು ಕೂಡ ಆತನ ಪಿಂಚಣಿ ಆರಂಭವಾಗುವುದಿಲ್ಲ ಎಂಬುದಕ್ಕೆ ಹಲವು ನಿದರ್ಶನಗಳಿವೆ. ಇದಲ್ಲದೆ, ಇತರ ಹಲವು ಸಮಸ್ಯೆಗಳು ಕೂಡ ಎದುರಾಗುತ್ತವೆ.  ಅವಲಂಬಿತರಲ್ಲಿ ದಿವ್ಯಾಂಗಗಳಿದ್ದರೆ ಅವರಿಗೆ ಪೆನ್ಷನ್ (Pension) ನೀಡುವ ಯಾವುದೇ ನಿಯಮ ಇಲ್ಲ. ಆದರೆ, ಇದೀಗ ಈ ಹಳೆ ನಿಯಮಗಳಿಗೆ ತಿಲಾಂಜಲಿ ನೀಡಲಾಗಿದೆ.

 

ಇದನ್ನು ಓದಿ-EPFO Pension Latest News: PF ಸ್ವರೂಪದಲ್ಲಿ ಭಾರಿ ಬದಲಾವಣೆಗೆ ಮುಂದಾದ ಸರ್ಕಾರ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

1 /4

ಸರ್ಕಾರಿ ನೌಕರರ ಕುಟುಂಬ ಸದಸ್ಯರಿಗಾಗಿ ಕೇಂದ್ರದ ಮೋದಿ ನೇತೃತ್ವದ (Modi Government) ಸರ್ಕಾರ ಕೇಂದ್ರ ದೊಡ್ಡ ಘೋಷಣೆಯೊಂದನ್ನು ಮಾಡಿದೆ. ಸರ್ಕಾರಿ ನೌಕರನ ಮರಣದ ನಂತರ, ಅವರ ಕುಟುಂಬವು ಇದೀಗ ಗರಿಷ್ಠ 1.25 ಲಕ್ಷ ರೂ.ಗಳನ್ನು ಪಿಂಚಣಿಯಾಗಿ ಪಡೆಯಲು ಸಾಧ್ಯವಾಗಲಿದೆ. 

2 /4

ಇದುವರೆಗೆ ಈ ಮಿತಿ ಗರಿಷ್ಠ 45 ಸಾವಿರ ರೂಪಾಯಿಗಳಾಗಿದ್ದು, ಇದನ್ನು ಎರಡೂವರೆ ಪಟ್ಟು ಹೆಚ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Dr.Jitendra Singh) ಘೋಷಿಸಿದ್ದಾರೆ. ಈ ಬದಲಾವಣೆಯು ಹಣದುಬ್ಬರ ಕಾಲದಲ್ಲಿ ಮನೆ ನಡೆಸುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದ ಸಾವಿರಾರು ಸರ್ಕಾರಿ ನೌಕರರ ಕುಟುಂಬಕ್ಕೆ ಪ್ರಯೋಜನ ನೀಡಲಿದೆ. ಹೊಸ ನಿಯಮಗಳ ಪ್ರಕಾರ, ಅವರ ಪಿಂಚಣಿ ಪುನಶ್ಚೇತನಗೊಂಡಾಗ, ಅವರ ಆರ್ಥಿಕ ಸ್ಥಿತಿ ಮತ್ತಷ್ಟು ಸುಧಾರಿಸಲಿದೆ.

3 /4

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪ್ರಕಾರ , ಸರ್ಕಾರಿ ನೌಕರನ ಮರಣದ ನಂತರ, ಮನೆಯ ಸದಸ್ಯರೊಬ್ಬರು ಅಂಗವಿಕಲರಾಗಿದ್ದರೆ ಮತ್ತು ಅವರ ಜೀವನೋಪಾಯಕ್ಕೆ ಯಾವುದೇ ಮಾರ್ಗವಿಲ್ಲದಿದ್ದರೆ, ಅವರಿಗೆ ಜೀವಮಾನದ ಪಿಂಚಣಿ ನೀಡಲಾಗುತ್ತದೆ. ಮೋದಿ ಸರ್ಕಾರದ ಈ ನಿರ್ಧಾರವು ಹೆತ್ತವರ ಮರಣದ ನಂತರ ತೀವ್ರ ಸಂಕಷ್ಟದಲ್ಲಿ ಬದುಕುತ್ತಿರುವ ಸಾವಿರಾರು ಜನರಿಗೆ ಭಾರಿ ನೆಮ್ಮದಿ ನೀಡಲಿದೆ. 

4 /4

ಈ ಬದಲಾವಣೆಯ ಮೊದಲು, ಮೋದಿ ಸರ್ಕಾರವು ಅನೇಕ ಬಾರಿ ಸಭೆಗಳನ್ನು ನಡೆಸಿದೆ  ಮತ್ತು ಪ್ರಸ್ತುತ ವ್ಯವಸ್ಥೆಯು ಸಾವಿರಾರು ಜನರ ಮುಂದೆ ಇರುವ ಊಟದ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂಬುದನ್ನು ಕಂಡುಕೊಂಡಿದೆ ಮತ್ತು  ಅದು ಸರಿಯಲ್ಲ ಎಂಬ ನಿರ್ಣಯಕ್ಕೆ ಬಂದು ತಲುಪಿದೆ. ಇದಲ್ಲದೆ, ಕೇಂದ್ರ ನಾಗರಿಕ ಸೇವಾ ಪಿಂಚಣಿ ನಿಯಮಗಳು 1972 (54/6) ಪ್ರಕಾರ, ಸರ್ಕಾರಿ ನೌಕರನ ಅವಲಂಬಿತ ಕುಟುಂಬದ ಒಟ್ಟು ಆದಾಯವು ನೌಕರನ ಅಂತಿಮ ವೇತನದ 30 ಪ್ರತಿಶತಕ್ಕಿಂತ ಕಡಿಮೆಯಿದ್ದರೆ, ಮೃತ ಅವಲಂಬಿತರಿಗೆ ಜೀವನೋಪಾಯಕ್ಕಾಗಿ ಪಿಂಚಣಿ (Pension) ಪಡೆಯುವ ಎಲ್ಲಾ ಹಕ್ಕು ಇದೆ ಎಂಬ ತೀರ್ಮಾನ ಕೈಗೊಂಡಿದೆ. ಎಲ್ಲಾ ಚರ್ಚೆಗಳ ನಂತರ ಮೋದಿ ಸರ್ಕಾರ ಈಗಿರುವ ವ್ಯವಸ್ಥೆಯನ್ನುಬದಲಾಯಿಸಿದ್ದು, ಶೀಘ್ರದಲ್ಲೇ ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದು, ಇದು ಸಾವಿರಾರು ಜನರಿಗೆ ಹೆಚ್ಚಿನ ಪರಿಹಾರವನ್ನು ಒದಗಿಸಲಿದೆ.