ಇನ್ಮುಂದೆ ಈ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಸಿಗಲಿದೆ ಪರ್ಮ್ನಂಟ್ `Work From Home` ಸ್ವಾತಂತ್ರ್ಯ
ಬಿಸಿನೆಸ್ ಪ್ರೋಸೆಸ್ ಔಟ್ ಸೋರ್ಸ್ (BPO) ಮತ್ತು ಐಟಿ ಆಧಾರಿತ ಸೇವೆಗಳನ್ನು (ITES) ಸೇವೆ ಒದಗಿಸುವ ಕಂಪನಿಗಳ ಮಾರ್ಗಸೂಚಿಗಳ ಸರಳೀಕರಣವನ್ನು ಸರ್ಕಾರ ಘೋಷಿಸಿದೆ, ಇದು ನೌಕರರ ಮನೆಯಿಂದ ಮಾಡುವ ಕೆಲಸಕ್ಕೆ ಅನುಕೂಲ ಮಾಡಿಕೊಡಲಿದೆ.
ನವದೆಹಲಿ: ಕರೋನಾ ಸಾಂಕ್ರಾಮಿಕದಿಂದಾಗಿ, ಹಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ (Work From Home) ಮಾಡುವ ಅವಕಾಶ ಕಲ್ಪಿಸಿವೆ. ಏತನ್ಮಧ್ಯೆ, ಬಿಸಿನೆಸ್ ಪ್ರೋಸೆಸ್ ಔಟ್ ಸೋರ್ಸ್ (BPO) ಮತ್ತು ಐಟಿ ಆಧಾರಿತ ಸೇವೆಗಳನ್ನು (ITES) ಸೇವೆ ಒದಗಿಸುವ ಕಂಪನಿಗಳಿಗೆ ಮಾರ್ಗಸೂಚಿಗಳ ಸರಳೀಕರಣವನ್ನು ಸರ್ಕಾರ ಗುರುವಾರ ಪ್ರಕಟಿಸಿದೆ, ಇದು ನೌಕರರಿಗೆ ಮನೆಯಿಂದ ಶಾಶ್ವತವಾಗಿ ಕೆಲಸ ಮಾಡಲು ಅನುವು ಮಾಡಿಕೊಡಲಿದೆ.
ಇದನ್ನು ಓದಿ- Health Tips:Work From Home ನಿಂದಾಗುವ ಈ ಹಾನಿಯ ಕುರಿತು ಅಧ್ಯಯನ ಏನು ಹೇಳುತ್ತೆ..?
ನೂತನ ನಿಯಮದಿಂದ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ
ನೂತನ ನಿಯಮಗಳು ಕಂಪೆನಿಗಳಿಗೆ ಮನೆಯಿಂದ ಕೆಲಸ ಮಾಡಲು ಮತ್ತು ಎಲ್ಲಿಂದಲಾದರೂ ಕೆಲಸ ಮಾಡಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲಿವೆ. ಇದಕ್ಕೂ ಮೊದಲು ಕಂಪೆನಿಗಳಿಗೆ ಇದ್ದ ಕಾಲಕಾಲಕ್ಕೆ ವರದಿ ಸಲ್ಲಿಕೆ ಮತ್ತು ಇತರ ಬದ್ಧತೆಗಳನ್ನು ತೆಗೆದುಹಾಕಲಾಗಿದೆ. ಉದ್ಯಮವನ್ನು ಬಲಪಡಿಸುವುದು ಇದರ ಉದ್ದೇಶ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿ-Lockdown:Work From Home ಕೆಲಸದ ಹುಡುಕಾಟದಲ್ಲಿ ಭಾರತೀಯರು
ಅನುಕೂಲಕರ ವಾತಾವರಣ ಸೃಷ್ಟಿಗೆ ಕೇಂದ್ರ ಸರ್ಕಾರ ಬದ್ಧ
'ದೇಶದಲ್ಲಿ ಬೆಳವಣಿಗೆಯಾ ದೃಷ್ಟಿಯಿಂದ ಹಾಗೂ ನಾವೀನ್ಯತೆಗಾಗಿ ಅನುಕೂಲಕರ ವಾತಾವರಣವನ್ನು ಖಾತ್ರಿಪಡಿಸಲು ಕೇಂದ್ರ ಸರ್ಕಾರ ಕಟಿಬದ್ಧವಾಗಿದೆ ಮತ್ತು ಬಿಪಿಓ ಉದ್ಯಮ ಮತ್ತು ಐಟಿ-ಶಕ್ತಗೊಂಡ ಸೇವೆಗಳಿಗೆ ಸರ್ಕಾರ ಸರಳೀಕೃತ ಮಾರ್ಗಸೂಚಿಗಳನ್ನು ಘೋಷಿಸಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 'ಭಾರತದ ಐಟಿ ಕ್ಷೇತ್ರ ನಮ್ಮ ಹೆಮ್ಮೆ. ಇಡೀ ಪ್ರಪಂಚವು ಈ ಕ್ಷೇತ್ರದ ಶಕ್ತಿಯನ್ನು ಪರಿಗಣಿಸುತ್ತದೆ. ಭಾರತದಲ್ಲಿ ಬೆಳವಣಿಗೆ ಮತ್ತು ನಾವೀನ್ಯತೆಗೆ ಅನುಕೂಲಕರ ವಾತಾವರಣವನ್ನು ಖಾತ್ರಿಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಇಂದಿನ ನಿರ್ಧಾರವು ದೇಶದ ಯುವ ಪ್ರತಿಭೆಗಳನ್ನು ವಿಶೇಷವಾಗಿ ಪ್ರೋತ್ಸಾಹಿಸಲಿದೆ' ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ- Work from home ಉದ್ಯೋಗಿಗಳಿಗೆ ಎದುರಾಗಲ್ಲ ಈ ಸಮಸ್ಯೆ
BPO ಉದ್ಯಮದ ಮೇಲಿನ ಹೊರೆ ಕಡಿಮೆಯಾಗಲಿದೆ
'ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್' ಅನ್ನು ಮುಂದುವರೆಸಲು ಮತ್ತು ಭಾರತವನ್ನು ತಂತ್ರಜ್ಞಾನ ಕೇಂದ್ರವನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದ್ದಾರೆ. 'ದೂರಸಂಪರ್ಕ ಇಲಾಖೆಯ ಇತರ ಸೇವಾ ಪೂರೈಕೆದಾರರ (OSP) ಮಾರ್ಗಸೂಚಿಗಳನ್ನು GOI ಇನ್ನಷ್ಟು ಸರಳೀಕೃತಗೊಳಿಸಿದೆ. ಇದರಿಂದಾಗಿ ಬಿಪಿಓ ಉದ್ಯಮದ ಅನುಸರಣೆಯ ಹೊರೆ ಬಹಳಷ್ಟು ಕಡಿಮೆಯಾಗಲಿದೆ. ಇದು ಇತರ ಹಲವು ಅವಶ್ಯಕತೆಗಳನ್ನು ತೆಗೆದುಹಾಕುತ್ತದೆ. ಈ ಹಂತಗಳು ನಮ್ಯತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲಿವೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನು ಓದಿ- ಜನರ ಪಾಲಿಗೆ ಲಾಭ ತಂದ Work From Home, ಜನರು ಉಳಿಸಿದ ಒಟ್ಟು ಹಣ ಎಷ್ಟು ಗೊತ್ತಾ?
OSP ಎಂದರೇನು?
ಅಪ್ಲಿಕೇಶನ್ ಸೇವೆ, ಐಟಿಗೆ ಸಂಬಂಧಿತ ಸೇವೆ ಅಥವಾ ಯಾವುದೇ ರೀತಿಯ ಹೊರಗುತ್ತಿಗೆ ಸೇವೆ ಒದಗಿಸಲು ದೂರಸಂಪರ್ಕ ಸಂಪನ್ಮೂಲಗಳನ್ನು ಬಳಸುವ ಕಂಪನಿಗಳನ್ನು ಒಎಸ್ಪಿಗಳ ಗುಂಪಿಗೆ ಸೇರುತ್ತವೆ. ಇಂತಹ ಕಂಪನಿಗಳನ್ನು ಬಿಪಿಓ, ನಾಲೆಜ್ ಪ್ರೋಸೆಸ್ ಔಟ್ ಸೋರ್ಸ್ (KPO), ಐಟಿಇಎಸ್ ಮತ್ತು ಕಾಲ್ ಸೆಂಟರ್ ಎಂದು ಕರೆಯಲಾಗುತ್ತದೆ.