ಮುಂಬೈ: ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ಜನರು ತಮ್ಮ ವ್ಯರ್ಥ ವೆಚ್ಚಗಳಿಗೆ ಸಂಪೂರ್ಣ ಬ್ರೇಕ್ ಹಾಕಿದ್ದಾರೆ. ಸಮೀಕ್ಷೆಯೊಂದರ ಪ್ರಕಾರ, ಪ್ರತಿ ಮೂವರು ಭಾರತೀಯರಲ್ಲಿ ಒಬ್ಬರು ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡುವುದರಿಂದ ಪ್ರತಿ ತಿಂಗಳು ಸರಾಸರಿ 3 ರಿಂದ 5 ಸಾವಿರ ರೂಪಾಯಿಗಳನ್ನು ಉಳಿಸಿದ್ದಾರೆ. ತಮ್ಮ ಮನೆಗಳಿಂದ ಕೆಲಸ ಮಾಡುವ ಜನರು ಸಾರಿಗೆ, ಬಟ್ಟೆ, ಆಹಾರ ಮತ್ತು ಇತರ ವಸ್ತುಗಳ ಮೆಲಾಗುತ್ತಿದ್ದ ಖರ್ಚನ್ನು ಉಳಿತಾಯ ಮಾಡಿದ್ದಾರೆ.
ಸಮೀಕ್ಷೆ ನಡೆಸಿದವರಲ್ಲಿ ಶೇಕಡಾ 74 ರಷ್ಟು ಜನರು ಮನೆಯಿಂದ ಕೆಲಸ ಮಾಡಲು ಸಿದ್ಧ ಎಂದು ಹೇಳಿದ್ದಾರೆ. 80 ರಷ್ಟು ಜನರು ತಮ್ಮ ಕೆಲಸದ ಪಾತ್ರವು ಮನೆಯಿಂದ ಕೆಲಸ ಮಾಡಲು ಸಂಪೂರ್ಣ ಫಿಟ್ ಆಗಿದೆ ಎಂದು ನಂಬಿದ್ದಾರೆ. ಭಾರತದ ಅತಿದೊಡ್ಡ ಹೋಂಗ್ರೋನ್ ಫ್ಲೆಕ್ಸ್ ವರ್ಕ್ ಪ್ಲೇಸ್ ಪ್ರೊವೈಡರ್-ಆಫೀಸ್ ಈ ಸಮೀಕ್ಷೆನನ್ನು ಕೈಗೊಂಡಿದೆ.
ಜೂನ್ ಮತ್ತು ಜುಲೈನಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ, ಏಳು ಮೆಟ್ರೋ ನಗರಗಳಲ್ಲಿನ ವಿವಿಧ ಕಂಪನಿಗಳ 1 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಸಂದರ್ಶನ ನಡೆಸಲಾಗಿದೆ. ಸಮೀಕ್ಷೆಯ ಪ್ರಕಾರ, ಶೇಕಡಾ 47 ರಷ್ಟು ಜನರು ಮನೆಯಿಂದ ಕೆಲಸ ಮಾಡುವಾಗ, ಆರಾಮದಾಯಕವಾದ ಕುರ್ಚಿ ಮತ್ತು ಮೇಜಿನ ಕೊರತೆಯನ್ನು ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ. ಇದೆ ವೇಳೆ ಶೇಕಡಾ 71 ರಷ್ಟು ಜನರು ಮನೆಯಲ್ಲಿ ಕೆಲಸ ಮಾಡಲು ಬೇರೆ ಸ್ಥಳ ಇದ್ದರೆ ಅವರು ಮನೆಯಿಂದ ಕೆಲಸ ಮಾಡಲು ಹೆಚ್ಚು ಯಶಸ್ವಿಯಾಗಬಹುದು ಎಂದು ಹೇಳಿದ್ದಾರೆ.
ಶೇಕಡಾ 60 ರಷ್ಟು ನೌಕರರು ನಿಯಮಿತವಾಗಿ ಕಚೇರಿಗೆ ಭೇಟಿ ನೀಡಲು ಸರಾಸರಿ ಒಂದು ಗಂಟೆ ಬೇಕಾಗುತ್ತದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈ ಆಧಾರದ ಮೇಲೆ, ಮನೆಯಿಂದ ಕೆಲಸ ಮಾಡುವ ನೌಕರ ದಿನದಲ್ಲಿ ಸರಾಸರಿ 1.47 ಗಂಟೆಗಳ ಸಮಯವನ್ನು ಉಳಿಸಿದ್ದಾನೆ. ಇದು ಅವರಿಗೆ ಒಂದು ವರ್ಷದಲ್ಲಿ 44 ಹೆಚ್ಚುವರಿ ದಿನಗಳ ಕೆಲಸವನ್ನು ನೀಡಿದೆ.