Health Tips:Work From Home ನಿಂದಾಗುವ ಈ ಹಾನಿಯ ಕುರಿತು ಅಧ್ಯಯನ ಏನು ಹೇಳುತ್ತೆ..?

ಮನೆಯಿಂದ ಕೆಲಸ (Work From Home) ನಿಮ್ಮ ನಿದ್ರೆಯ ಚಕ್ರವನ್ನು ಹಾಗೂ ರೂಢಿಗಳ ಮೇಲೆ  ಹೆಚ್ಚು ಪರಿಣಾಮ ಬೀರಿದೆ, ಇದರಿಂದಾಗಿ ಹೆಚ್ಚಿನ ಜನರು ಕಳಪೆ ಪ್ರಮಾಣದ  ನಿದ್ರೆಗೆ ಬಲಿಯಾಗುತ್ತಿದ್ದಾರೆ,ಇದರಿಂದ ಅವರ  ಆರೋಗ್ಯದ ಮೇಲೆ ಬಹಳ ಹಾನಿಕಾರಕ ಪರಿಣಾಮ ಉಂಟಾಗುತ್ತಿದೆ. ಹಾಗಾದರೆ ಬನ್ನಿ ಈ ಕುರಿತು ಸಂಶೋಧನೆ ಏನು ಹೇಳುತ್ತದೆ ಎಂಬುದನ್ನು ವಿಸ್ತಾರವಾಗಿ ತಿಳಿಯೋಣ.

Last Updated : Sep 12, 2020, 01:02 PM IST
  • ವರ್ಕ್ ಫ್ರಮ್ ಹೋಂ ಜನರ ಜೀವನಶೈಲಿ ಹಾಗೂ ನಿದ್ರೆಯ ಮೇಲೆ ಪರಿಣಾಮ ಬೀರಿದೆ.
  • ಈ ಅವಧಿಯಲ್ಲಿ ಜನರು ಕಳಪೆ ಮಟ್ಟದ ಆಹಾರ ಶೈಲಿಗೆ ಒಗ್ಗುತ್ತಿದ್ದಾರೆ.
  • ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಜನರ ನಿದ್ರೆಯ ಪ್ರಮಾಣ ಹಾಗೂ ಗುಣಮಟ್ಟ ಪ್ರಭಾವಕ್ಕೊಳಗಾಗಿದೆ.
Health Tips:Work From Home ನಿಂದಾಗುವ ಈ ಹಾನಿಯ ಕುರಿತು ಅಧ್ಯಯನ ಏನು ಹೇಳುತ್ತೆ..? title=

ನವದೆಹಲಿ: ಮುಂದುವರೆದ ಕರೋನವೈರಸ್ ಸಾಂಕ್ರಾಮಿಕದಿಂದಾಗಿ, ಮನೆಯಿಂದ ಕೆಲಸವು ಜನರ ಜೀವನಶೈಲಿ ಮತ್ತು ನಿದ್ರೆಯ ಅವಧಿಯ ಮೇಲೆ  ಸಂಪೂರ್ಣವಾಗಿ ಪರಿಣಾಮ ಬೀರಿದೆ. ವಾಸ್ತವವಾಗಿ, ವರ್ಕ್ ಫ್ರಮ್ ಹೋಂ (Work From Home)  ಮಾಡುವ ಕಾರಣದಿಂದಾಗಿ, ಕೆಲಸದಿಂದ ಸ್ವಲ್ಪ ಸಮಯದವರೆಗೆ ಬಿಡುವು ಪಡೆಯಲು ಮತ್ತು ಸ್ವಲ್ಪ ಸಮಯದವರೆಗೆ ಕಣ್ಣುಗಳನ್ನು ಮುಚ್ಚಲು ಸಹ ಜನರು ಹೆಣಗಾಡುತ್ತಿದ್ದಾರೆ. ಒಂದೆಡೆ ನೀವು ಸಾಮಾಜಿಕ ಅಂತರ ಕಾಯುವಿಕೆ, ಮುಖ ಮುಚ್ಚುವಿಕೆ ಮತ್ತು ಆಗಾಗ್ಗೆ ಕೈ ತೊಳೆಯುವ ಹೊಸ ಜಗತ್ತಿನಲ್ಲಿ ಬದುಕಲು ಕಲಿಯುತ್ತಿರುವಾಗ, ಮತ್ತೊಂದೆಡೆ ಪ್ರಪಂಚದಾದ್ಯಂತದ ಜನರು ಹದಗೆಡುತ್ತಿರುವ ಜೀವನ ಚಕ್ರಗಳು ಮತ್ತು ರೂಢಿಗಳಿಂದಾಗಿ ಜನರು ಕಳಪೆ ಪ್ರಮಾಣ ಹಾಗೂ ಮಟ್ಟದ ನಿದ್ರೆಗೆ ಬಲಿಯಾಗುತ್ತಿದ್ದಾರೆ. ಇದು ಜನರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆ. ಆದ್ದರಿಂದ ಇಂದು ಈ ಸಂಶೋಧನೆಯ ಬಗ್ಗೆ ವಿವರವಾಗಿ ಅರಿಯೋಣ ಬನ್ನಿ.

ಅಧ್ಯಯನ ಏನು ಹೇಳಿದೆ?
ಅಧ್ಯಯನದ ಪ್ರಕಾರ ಕೊರೊನಾ ವೈರಸ್ ಪ್ರಕೋಪದ ಕಾರಣ ಜೀವನಶೈಲಿಯಲ್ಲಿ ಉಂಟಾಗಿರುವ ಪ್ರಮುಖ ಬದಲಾವಣೆಗಳು ಜನರ ನಿದ್ರೆಯ ಮೇಲೆ ತೀವ್ರ ಪರಿಣಾಮ ಬೀರಿದೆ ಎನ್ನಲಾಗಿದೆ. ಈ ಸಂಶೋಧನೆಯಲ್ಲಿ ಪಾಲ್ಗೊಳ್ಳುವವರ ನಿದ್ರೆಯ ಸಾಮರ್ಥ್ಯ, ನಿದ್ರೆಯ ಸಮಯ, ನಿದ್ರೆಯ ಗುಣಮಟ್ಟ ಹಾಗೂ ಹಗಲಿನ ನಿದ್ರೆಯಲ್ಲಿ ವ್ಯತಿರಿಕ್ತ ಬದಲಾವಣೆಗಳನ್ನು ಗಮನಿಸಲಾಗಿದೆ.  ಈ ಸಂಶೋಧನೆಯಲ್ಲಿ, 18-65 ವರ್ಷದೊಳಗಿನ 121 ಪುರುಷರು ಮತ್ತು ಮಹಿಳೆಯರನ್ನು ಸಂದರ್ಶಿಸಲಾಗಿದೆ. ಸಂಪರ್ಕತಡೆಯ ಮೊದಲು ಮತ್ತು ನಂತರ 40 ದಿನಗಳವರೆಗೆ ಅವರ ನಿದ್ರೆಯ ಅಭ್ಯಾಸದ ಮೇಲ್ವಿಚಾರಣೆ ನಡೆಸಲಾಗಿದೆ. ಅದರ ಡೇಟಾವನ್ನು ಸಂಗ್ರಹಿಸಿದ ನಂತರ, ಪಿಟ್ಸ್‌ಬರ್ಗ್ ಸ್ಲೀಪ್ ಕ್ವಾಲಿಟಿ ಇಂಡೆಕ್ಸ್ (ಪಿಎಸ್‌ಕ್ಯುಐ) ಬಳಸಿ ಅವರ ನಿದ್ರೆಯ ಗುಣಮಟ್ಟವನ್ನು ಪರೀಕ್ಷಿಸಿ, ಬಿಎಂಐ ಅನ್ನು ಸಹ ಗುರುತಿಸಲಾಗಿದೆ.

ಸಂಶೋಧನೆಯ ಫಲಿತಾಂಶ
ಸಂಶೋಧನೆಯ ಪ್ರಕಾರ, ಸಂಶೋಧನೆಯಲ್ಲಿ ಪಾಲ್ಗೊಂಡ ಎಲ್ಲರಲ್ಲಿ ಪಿಎಸ್‌ಕ್ಯೂಐ ಸ್ಕೋರ್‌ ಹೆಚ್ಚಳವನ್ನು ಗಮನಿಸಲಾಗಿದೆ. ಇದು ವಾಸ್ತವಿಕ ಸಂಪರ್ಕತಡೆಯ ನಂತರ ನಿದ್ರೆಯ ಗುಣಮಟ್ಟವನ್ನು ಕಡಿಮೆ ತೋರಿಸಿದೆ. ಈ ಅಧ್ಯಯನದಲ್ಲಿ, ನಿದ್ರೆಯ ಗುಣಮಟ್ಟ ಮತ್ತು ದೇಹದ ದ್ರವ್ಯರಾಶಿ ಸೂಚ್ಯಂಕದ ಮೇಲೆ ಸಂಪರ್ಕತಡೆಯನ್ನು ಪರಿಣಾಮ ಬೀರುವುದು ಮತ್ತು ನಿದ್ರೆಯ ಕಳಪೆ ಗುಣಮಟ್ಟ ಮತ್ತು ಹೆಚ್ಚಿದ ನಿದ್ರೆಯ ನಡುವಿನ ಆಳವಾದ ಸಂಬಂಧವನ್ನು ಗಮನಿಸಲಾಗಿದೆ.

ನಿದ್ರೆಯ ಮೇಲೆ ವರ್ಕ್ ಫ್ರಮ್ ಹೋಂ ಪರಿಣಾಮ
ಅಧ್ಯಯನದ ಪ್ರಕಾರ ಜನರಲ್ಲಿ ಅಧಿಕ PSIQ ಸ್ಕೋರ್ ಗಮನಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಮನೆಯಿಂದ ಕಚೇರಿ ಕೆಲಸ ಮಾಡುವವರಾಗಿದ್ದಾರೆ. ಹಾಗೂ ದಿನದಲ್ಲಿ ಕೆಲಸ ಮಾಡಲು ಸ್ಮಾರ್ಟ್ ಉಪಕರಣಗಳ ಬಳಕೆ ಮಾಡುತ್ತಾರೆ. ರಿಸರ್ಚ್ ಪ್ರಕಾರ, ಮನೆಯಲ್ಲಿ ಸ್ಕ್ರೀನ್ ಮೇಲೆ ಹೆಚ್ಚಿನ ಸಮಯ ಕೆಲಸ ಮಾಡುವುದರಿಂದ ನಿದ್ರೆ ಪ್ರಭಾವಕ್ಕೆ ಒಳಗಾಗಿದೆ ಮತ್ತು ಕಳಪೆ ಮಟ್ಟದ ನಿದ್ರೆಯ ಒಂದು ಕಾರಣವಾಗಿದೆ. ಈ ಸಂಶೋಧನೆಯಲ್ಲಿ ಪಾಲ್ಗೊಂಡ ವ್ಯಕ್ತಿಗಳ ಶಾರೀರಿಕ ಕಾರ್ಯಚಟುವಟಿಕೆಗಳ ಮೇಲೂ ಕೂಡ ಪರಿಣಾಮ ಕಂಡುಬಂದಿದೆ. ಹಾಗೂ ಕೊರೊನಾ ವೈರಸ್ ಮಹಾಮಾರಿಯ ಕಾಲದಲ್ಲಿ ಆರೋಗ್ಯಕರವಲ್ಲದ ಆಹಾರ ಸೇವನೆಯಲ್ಲಿಯೂ ಕೂಡ ಏರಿಕೆಯನ್ನು ಗಮನಿಸಲಾಗಿದೆ.

ಈ ಸಂಶೋಧನೆಯಿಂದ ಕಲಿಯಬೇಕಾದುದೇನು?
ಸ್ಕ್ರೀನ್ ಟೈಮ್ ನಲ್ಲಿ ವೃದ್ಧಿ, ಅನ್ ಹೆಲ್ದಿ ಫುಡ್ ಹ್ಯಾಬಿಟ್ ಹಾಗೂ ಶಾರೀರಿಕ ಚತುವಟಿಕೆಗಳಲ್ಲಿನ ಭಾರಿ ಕೊರತೆಯ ಕಾರಣ ನಿದ್ರಾ ಚಕ್ರ ಪ್ರಭಾವಿತಕ್ಕೊಳಗಾಗುತ್ತಿದೆ. ಇದಲ್ಲದೆ ಸೋಂಕಿಗೆ ಸಂಬಂಧಿಸಿದಂತೆ ಚಿಂತೆಯನ್ನು ಸಹ ಹೆಚ್ಚಿಸಿದೆ.

Trending News