ಮೋದಿ ಸರ್ಕಾರದ ಮಹಾಘೋಷಣೆ, 80 ಕೋಟಿ ಜನರಿಗೆ 2 ತಿಂಗಳು ಉಚಿತ ರೇಷನ್
ಕರೋನಾ ಮಹಾಮಾರಿ ಪ್ರಳಯಸ್ವರೂಪಿಯಾಗಿರುವಂತೆ ಕೇಂದ್ರ ಸರ್ಕಾರವು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಬಡವರಿಗೆ ಉಚಿತ ರೇಷನ್ ವಿತರಿಸುವ ನಿರ್ಧಾರದ ಘೋಷಣೆ ಮಾಡಿದೆ ಮೋದಿ ಸರ್ಕಾರ.
ನವದೆಹಲಿ: ಕರೋನಾ (Coronavirus)ಮಹಾಮಾರಿ ಪ್ರಳಯಸ್ವರೂಪಿಯಾಗಿರುವಂತೆ ಕೇಂದ್ರ ಸರ್ಕಾರವು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಬಡವರಿಗೆ ಉಚಿತ ರೇಷನ್ (Free ration) ವಿತರಿಸುವ ನಿರ್ಧಾರದ ಘೋಷಣೆ ಮಾಡಿದೆ ಮೋದಿ ಸರ್ಕಾರ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ (PM Garib Kalyan Yojana) ಅನ್ನ ಯೋಜನೆಯಡಿ ಈಗ ರೇಷನ್ ಕಾರ್ಡ್ ಹೊಂದಿರುವ ಪರಿವಾರದ ಪ್ರತಿಯೊಬ್ಬ ವ್ಯಕ್ತಿ ಮೇ ಮತ್ತು ಜೂನ್ ತಿಂಗಳಿಗೆ 5 ಕೆಜಿಗೂ ಅಧಿಕ ಅಕ್ಕಿಅಥವಾ ಗೋಧಿ ಉಚಿತವಾಗಿ ಪಡೆಯಲಿದ್ದಾರೆ.
80 ಕೋಟಿ ಪರಿವಾರಗಳಿಗೆ ಸಿಗಲಿದೆ ಪ್ರಯೋಜನ :
ಮೋದಿ ಸರ್ಕಾರದ (Modi government) ಈ ನಿರ್ಧಾರವನ್ನು ಸ್ವಾಗತಿಸಿ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಕರೋನಾದಿಂದ ಜನತೆ ಕಂಗೆಟ್ಟಿರುವ ಈ ಹೊತ್ತಿನಲ್ಲಿ 28 ಸಾವಿರ ಕೋಟಿ ರೂಪಾಯಿ ಅನುದಾನದಿಂದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ (PM Garib Kalyan Yojana)ಎರಡು ತಿಂಗಳು ಪ್ರತಿ ವ್ಯಕ್ತಿಗೆ 5 ಕಿಲೋ ದವಸ ಸಿಗಲಿದೆ. ಈ ಬಗ್ಗೆ ಪ್ರಧಾನಿ ಮೋದಿಯವರನ್ನು (PM Modi) ನಾನು ಅಭಿನಂದಿಸುತ್ತೇನೆ. ಇದರಿಂದ ಸುಮಾರು 80 ಕೋಟಿ ಜನರಿಗೆ ಪ್ರಯೋಜನ ಸಿಗಲಿದೆ ಎಂದು ಹೇಳಿದ್ದಾರೆ.
COVID-19 Crisis: ಭಾರತಕ್ಕೆ ನೆರವು ನೀಡುವುದಾಗಿ ಹೇಳಿದ ಚೀನಾ
ಮುಖ್ಯಮಂತ್ರಿಗಳೊಂದಿಗೆ ಸಭೆ ಮುಗಿದ ಬಳಿಕ ಘೋಷಣೆ :
ಶುಕ್ರವಾರ ಪ್ರಧಾನಿ ಕರೋನಾದಿಂದ (Coronavirus) ಧ್ವಸ್ತಗೊಂಡಿರುವ ಹತ್ತು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಕರೋನಾ ಪರಿಹಾರ ಪ್ಯಾಕೇಜ್ ಬಿಡುಗಡೆಗೆ ಮನವಿ ಮಾಡಿದರು. ಕರೋನಾದಿಂದಾ ಲಾಕ್ ಡೌನ್ (Lockdown) ಹಾಕಲಾಗಿದೆ. ಅರ್ಥ ವ್ಯವಸ್ಥೆ ನೆಲಕಚ್ಚಿದೆ. ಜನರು ಹಸಿವು, ಸಂಕಟದಿಂದ ಕಂಗೆಟ್ಟಿದ್ದಾರೆ ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ಅಳಲು ತೋಡಿಕೊಂಡಿದ್ದರು. ಈ ಸಭೆ ಮುಗಿದ ಕೂಡಲೇ ಕೇಂದ್ರ ಸರ್ಕಾರ 80 ಕೋಟಿ ಬಡವರಿಗೆ ಫ್ರೀ ರೇಷನ್ (free Ration) ನೀಡುವ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ : Zydus Cadila Virafin - ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಿಕ್ತು ಮತ್ತೊಂದು ಅಸ್ತ್ರ, Zydus ಔಷಧಿಗೆ DCGI ಅನುಮತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.