ನವದೆಹಲಿ : ಕೋತಿ ತನ್ನ ಚೇಷ್ಟೆಯನ್ನು ಯಾವತ್ತಿಗೂ ಬಿಡುವುದಿಲ್ಲ. ಮರದಿಂದ ಮರಕ್ಕೆ ಹಾರುವ ಮಂಗ ಮರದಲ್ಲಿರುವಷ್ಟು ಹೊತ್ತು ಯಾರಿಗೂ ಹೆದರುವುದಿಲ್ಲ. ಜೊತೆಗೆ ಮಂಗ ಚೇಷ್ಟೆಯನ್ನೂ ಬಿಡುವುದಿಲ್ಲ. ಯಾರ ಜೊತೆ ಬೇಕಾದರೂ ಚೇಷ್ಟೆ ಮಾಡಲು ಸಿದ್ದ ಇರುತ್ತದೆ ಕೋತಿ. ಆಂತಹ ಕೋತಿ ಈ ಸಲ ಚೇಷ್ಟೆಗೆ ಆಯ್ದುಕೊಂಡಿದ್ದು ಹುಲಿರಾಯರ ಒಂದು ಪಟಾಲಮ್ಮಿನ ಜೊತೆ.


COMMERCIAL BREAK
SCROLL TO CONTINUE READING

ಕೊಳ್ಳದಲ್ಲಿ ಹುಲಿ ರಾಯರು ಮತ್ತು ಮಂಗನ ಡೇಂಜರಸ್ ಗೇಂ:
ನಿಮಗೊಂದು ವೈರಲ್ ವಿಡಿಯೋ (Viral video) ತೋರಿಸುತ್ತೇವೆ. ಅದನ್ನು ನೀವು ಖಂಡಿತಾ ನೋಡಲೇ ಬೇಕು. ಕರೋನಾ (Coronavirus) ಕಾಲದ ಯಾವ ಡಿಪ್ರೆಶನ್ ಇದ್ದರೂ ಆ ವಿಡಿಯೋ ನೋಡಿದಾಕ್ಷಣ ಮಾಯವಾಗುತ್ತದೆ. ಮುಖದಲ್ಲಿ ಮಂದಹಾಸ ಮೂಡುತ್ತದೆ. ಆಗಿದಿಷ್ಟೆ. ಬೇಸಿಗೆ (Summer) ಕೊಳ್ಳದಲ್ಲಿ ಹುಲಿರಾಯರು ಮೋಜು ಮಾಡುತ್ತಿದ್ದರು.  ನಾಲ್ಕೈದು ಹುಲಿಗಳು (Tiger) ನೀರಿನಲ್ಲಿ ಆಟ ವಾಡುತ್ತಿದ್ದವು.  ಮರದಿಂದ ಮರಕ್ಕೆ ಹಾರುತ್ತಿದ್ದ ಕೋತಿರಾಯರು ಅದನ್ನು ದೂರದಲ್ಲೇ ನೋಡಿದ್ದಾರೆ. ಹುಲಿರಾಯರ ಪಟಾಲಮ್ಮಿನ ಜೊತೆ ಆಟ  ಆಡಬೇಕು ಅನ್ನೋದು ಹನುಮಂತರಾಯರ ಮನಸ್ಸಿಗೆ ಬಂದು ಬಿಟ್ಟಿದೆ. ಕೂಡಲೇ ಛಂಗನೇ ಕೊಳ್ಳದ ಬದಿಯ ಬಾಗಿದ ಮರಕ್ಕೆ ಜಿಗಿದಿದ್ದಾರೆ ಕೋತಿರಾಯರು.  ಹುಲಿರಾಯರದ್ದು ಕೊಳ್ಳದಲ್ಲಿ ಜಲಕ್ರೀಡೆ.  ಮರದ ತುದಿಯ ಬಾಗಿದ ಟೊಂಗೆಯಲ್ಲಿ ಹನುಮಂತರಾಯರದ್ದು ಮಂಗಚೇಷ್ಟೆ.


Viral video : ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ತೆಗೆಯುವ ವಿಧಾನ ತಿಳಿಯಿರಿ


ಕೊಂಚ ಯಾಮಾರಿದರೂ ಮಂಗ ಫಿನಿಶ್..!
ಬಾಗಿದ ಟೊಂಗೆಯಲ್ಲಿ ಹುಲಿಗಳನ್ನು ಟಚ್ ಮಾಡಲು ಯತ್ನಿಸುವ ಕೋತಿ (Monkey) . ತಮ್ಮನ್ನು ಮುಟ್ಟಲು ಬರುವ ಮಂಗನನ್ನು ಹಿಡಿದು ಚೆನ್ನಾಗಿ ಬುದ್ದಿ ಕಲಿಸಬೇಕು ಎಂಬ ಧಾವಂತದಲ್ಲಿ ಮಂಗನನ್ನು ಹಿಡಿಯಲು ಜಿಗಿಯುವ ಹುಲಿರಾಯರ ಪಟಾಲಮ್. ಕೊಂಚ ಆಯತಪ್ಪಿದರೂ ಈ ಮಂಗ ನಾಲ್ವರು ಹುಲಿರಾಯರಿಗೆ ಮಧ್ಯಾಹ್ನಕ್ಕೆ ಭೋಜನವಾಗುತ್ತಿತ್ತು.  ಆದರೆ, ಹನುಮಂತರಾಯರು ಸಾಮಾನ್ಯರಲ್ಲ. ಜಿಗಿದು ಜಿಗಿದು ಹುಲಿ ಸುಸ್ತಾಯಿತೇ ವಿನಃ, ಮಂಗಣ್ಣ ಜಪ್ಪಯ್ಯ ಅನ್ನಲಿಲ್ಲ. ಕೊನೆಗೆ ಹುಲಿರಾಯರೇ ಸೋತು, ಸುಮ್ಮನಾಗಬೇಕಾಯಿತು. 


ಇದನ್ನೂ ಓದಿ : Desert Rose Tree: ಮರುಭೂಮಿಯಲ್ಲಿ ಅರಳಿ ನಿಂತ ಪುಷ್ಪಗಳು: ಸ್ವರ್ಗವೇ ಧರೆಗಿಳಿದಂಥಹ ನೋಟ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.