Viral video : ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ತೆಗೆಯುವ ವಿಧಾನ ತಿಳಿಯಿರಿ

ಬೆಳ್ಳುಳ್ಳಿಯ  ಸಿಪ್ಪೆ ಸುಲಿಯುವುದು ಎಂದರೆ ಬಹಳ ಕಿರಿಕಿರಿ ಕೆಲಸ. ಬಹಳಷ್ಟು ಹೊತ್ತು ತೆಗೆದುಕೊಳ್ಳುತ್ತದೆ . ಕೆಲವೊಮ್ಮೆ ಉಗುರು ನೋವು ಬರುವುದೂ ಇದೆ.   

Written by - Ranjitha R K | Last Updated : May 11, 2021, 04:11 PM IST
  • ಬೆಳ್ಳುಳ್ಳಿ ಸಿಪ್ಪೆ ಸುಲಿಯುವ ಹೊಸ ವಿಧಾನ
  • ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ ವಿಡಿಯೋ
  • ಬೆಳ್ಳುಳ್ಳಿ ಸಿಪ್ಪೆ ಸುಲಿಯುವ ವಿಡಿಯೋ ವೈರಲ್
Viral video : ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ತೆಗೆಯುವ ವಿಧಾನ ತಿಳಿಯಿರಿ  title=
ಬೆಳ್ಳುಳ್ಳಿ ಸಿಪ್ಪೆ ಸುಲಿಯುವ ಹೊಸ ವಿಧಾನ (photo instagram)

ನವದೆಹಲಿ : ಈಗ ಕೂತರೂ ನಿಂತರೂ ಎಲ್ಲದಕ್ಕೂ ಸೋಶಿಯಲ್ ಮಿಡಿಯಾ (Social media) ಅನ್ನೋ ಹಾಗಾಗಿದೆ.  ಏನೇ ವಿಷಯಗಳಿದ್ದರೂ ಸಾಮಾಜಿಕ ಮಾಧ್ಯಮಗಳಲ್ಲಿ ಥಟ್ಟಂತ ವಿಡಿಯೋಗಳು ಅಪ್ ಲೋಡ್ ಆಗಿ ಬಿಡುತ್ತವೆ. ಇವುಗಳಲ್ಲಿ ಕೆಲವು ಬಾಲಿಶ ಎಂದೆನಿಸಿದರೆ. ಕೆಲವೊಂದು ನಿಜಕ್ಕೂ ಬಹಳ ಉಪಯುಕ್ತವಾಗಿರುತ್ತವೆ. ಇದೀ ಬೆಳ್ಳುಳ್ಳಿ (Garlic) ಸಿಪ್ಪೆಯನ್ನು ಸುಲಭವಾಗಿ ಹೇಗೆ ತೆಗೆಯುವುದು ಎಂಬ ವಿಡಿಯೋ ವೈರಲ್ (Viral video)  ಆಗುತ್ತಿದೆ. ಈ ಟೆಕ್ನಿಕ್ ಬಳಸಿದರೆ ಸೆಕೆಂಡುಗಳ ಒಳಗೆ ಇಡೀ ಬೆಳ್ಳುಳ್ಳಿಯ ಸಿಪ್ಪೆ ಸುಲಿಯುವುದು ಸಾಧ್ಯ  ಅದು ಕೂಡಾ ಬಹಳ ಸುಲಭವಾಗಿ.. 

ಬೆಳ್ಳುಳ್ಳಿ ಸಿಪ್ಪೆಸುಲಿಯುವ ಹೊಸ ವಿಧಾನ : 

ಬೆಳ್ಳುಳ್ಳಿಯ (Garlic) ಸಿಪ್ಪೆ ಸುಲಿಯುವುದು ಎಂದರೆ ಬಹಳ ಕಿರಿಕಿರಿ ಕೆಲಸ. ಬಹಳಷ್ಟು ಹೊತ್ತು ತೆಗೆದುಕೊಳ್ಳುತ್ತದೆ . ಕೆಲವೊಮ್ಮೆ ಉಗುರು ನೋವು ಬರುವುದೂ ಇದೆ. ಆದರೆ ಈ ಟೆಕ್ನಿಕ್ ಬಳಸಿದರೆ ಕ್ಷಣಾರ್ಧದಲ್ಲಿ ಇಡೀ ಬೆಳ್ಳುಳ್ಳಿ ಸಿಪ್ಪೆ ತೆಗೆದುಬಿಡಬಹುದು. ಇದೀಗ ಇಂಥಹ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಬಹಳ ಮಂದಿ ಮನೆಯಲ್ಲೂ ಈ ರೀತಿ ಬೆಳ್ಳುಳ್ಳಿ ಸಿಪ್ಪೆ ತೆಗೆಯಲು ಯತ್ನಿಸಿದ್ದಾರಂತೆ.. 

 

ಇದನ್ನೂ ಓದಿ : Heart Attack In Covid-19: ಕರೋನಾ ರೋಗಿಗಳು ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ

ಬೆಳ್ಳುಳ್ಳಿ ಸಿಪ್ಪೆ ಸುಲಿಯುವ ವಿಡಿಯೋ ವೈರಲ್ : 
ವೀಡಿಯೊ (Video) ನೋಡಿದ ನಂತರ, ಅನೇಕ ಜನರು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ಒಬ್ಬರು, ನಾನು ವಿಡಿಯೋ ನೋಡಿದ್ದೇನೆ ಆದರೆ ಈ ರೀತಿ ಪ್ರಯತ್ನ ಮಾಡಲಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ಕೆಲಸ ಸುಲಭವಾಗಿ ಆಗುವುದಾದರೆ, ಅಡುಗೆ ಮನೆಯ ದೊಡ್ಡ ಕೆಲಸ ಕಡಿಮೆಯಾದಂತೆ ಎಂದು ಬರೆದಿದ್ದಾರೆ.  

ಇದನ್ನೂ ಓದಿ : Benefits of Clove : ಪುರುಷರು ಈ ಸಮಯದಲ್ಲಿ 4 ಲವಂಗ ಸೇವಿಸಿ! ನಂತ್ರ ಅದರ ಪ್ರಯೋಜನ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News