ದೆಹಲಿ-ಯುಪಿ ಗಡಿ ಪ್ರದೇಶದಲ್ಲಿ ಮತ್ತಷ್ಟು ತೀವ್ರಗೊಂಡ ರೈತರ ಪ್ರತಿಭಟನೆ
ಮೂರು ಕೇಂದ್ರ ಕೃಷಿ ಕಾನೂನುಗಳ ವಿರುದ್ಧದ ನಡೆಯುತ್ತಿರುವ ಬೃಹತ್ ರೈತರ ಪ್ರತಿಭಟನೆಯ 67 ನೇ ದಿನಕ್ಕೆ ಕಾಲಿಟ್ಟಿದೆ. ಗಣರಾಜ್ಯೋತ್ಸವದ ನಂತರವಂತೂ ಪ್ರತಿಭಟನೆ ಮತ್ತಷ್ಟೂ ತೀವ್ರಗೊಂಡಿದೆ.
ನವದೆಹಲಿ: ಮೂರು ಕೇಂದ್ರ ಕೃಷಿ ಕಾನೂನುಗಳ ವಿರುದ್ಧದ ನಡೆಯುತ್ತಿರುವ ಬೃಹತ್ ರೈತರ ಪ್ರತಿಭಟನೆಯ 67 ನೇ ದಿನಕ್ಕೆ ಕಾಲಿಟ್ಟಿದೆ. ಗಣರಾಜ್ಯೋತ್ಸವದ ನಂತರವಂತೂ ಪ್ರತಿಭಟನೆ ಮತ್ತಷ್ಟೂ ತೀವ್ರಗೊಂಡಿದೆ.
ಕಳೆದ ಎರಡು-ಮೂರು ದಿನಗಳಲ್ಲಿ ಈ ಪ್ರದೇಶಗಳಲ್ಲಿ ಭದ್ರತೆಯನ್ನು ದೂಡಲಾಗಿದ್ದರೂ ಸಹ, ಅವರಲ್ಲಿ ಅನೇಕರು, ವಿಶೇಷವಾಗಿ ಯುವಕರು, ಸಿಂಗು, ಗಾಜಿಪುರ, ಮತ್ತು ಟಿಕ್ರಿಯಂತಹ ಗಡಿ ಬಿಂದುಗಳಿಗೆ ತೆರಳಿ ಅಲ್ಲಿ ಈಗ ಕಿಸಾನ್ ಏಕ್ತಾ ಜಿಂದಾಬಾದ್" ಮತ್ತು ಜೈ ಜವಾನ್, ಜೈ ಕಿಸಾನ್ ನಂತಹ ಘೋಷಣೆಗಳನ್ನು ಹಾಕುತ್ತಿದ್ದಾರೆ.
ಇದನ್ನೂ ಓದಿ: 'ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳಿಂದ ದೇಶದ ಭವಿಷ್ಯ ಕರಾಳ'
ಭಾರತೀಯ ಕಿಸಾನ್ ಯೂನಿಯನ್‌ನ ರಾಕೇಶ್ ಟಿಕಾಯತ್ ಅಳುತ್ತಿರುವ ವಿಡಿಯೋಗಳನ್ನು ನೋಡಿದ ನಂತರ ತಾವು ಮತ್ತೆ ಪ್ರತಿಭಟನಾ (Farmers Protest) ಸ್ಥಳಕ್ಕೆ ಆಗಮಿಸಿರುವುದಾಗಿ ಹಲವು ರೈತರು ತಿಳಿಸಿದ್ದಾರೆ. ಈಗ ಕೆಲವು ಪ್ರತಿಭಟನಾಕಾರರು ಏತನ್ಮಧ್ಯೆ, ವಾರಗಳವರೆಗೆ ರಿಲೇ ಉಪವಾಸ ಸತ್ಯಾಗ್ರಹದಲ್ಲಿ ನಿರತರಾಗಿದ್ದಾರೆ.
ಗೃಹ ಸಚಿವಾಲಯವು ದೆಹಲಿಯ ಗಡಿ ಪ್ರದೇಶಗಳಲ್ಲಿ ಅಂತರ್ಜಾಲ ಸೇವೆಗಳನ್ನು ತಾತ್ಕಾಲಿಕವಾಗಿ ಇಂದು ಸಂಜೆವರೆಗೆ ಸ್ಥಗಿತಗೊಳಿಸಿದೆ. ಭದ್ರತಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಹರಿಯಾಣ ಸರ್ಕಾರ ಕೂಡ ರಾಜ್ಯದ 17 ಜಿಲ್ಲೆಗಳಲ್ಲಿ ಡಾಟಾ ಸೇವೆಗಳನ್ನು ಇಂದು ಸಂಜೆ 5 ಗಂಟೆಯವರೆಗೆ ಸ್ಥಗಿತಗೊಳಿಸಿದೆ.
ಇದನ್ನೂ ಓದಿ: ಶಶಿ ತರೂರ್ ಹಾಗೂ ಆರು ಪತ್ರಕರ್ತರ ವಿರುದ್ಧ ದೇಶ ದ್ರೋಹದ ಕೇಸ್ ದಾಖಲು
ಬಜೆಟ್ ಅಧಿವೇಶನದ ಮೊದಲ ದಿನದಂದು ಎಲ್ಲಾ ಪಕ್ಷಗಳು ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ವಿರೋಧ ಪಕ್ಷಗಳಿಗೆ ಮನವಿ ಮಾಡುತ್ತಾ ತಮ್ಮ ಸರ್ಕಾರ ಇನ್ನೂ ರೈತರೊಂದಿಗೆ ಮಾತನಾಡಲು ಸಿದ್ಧವಾಗಿದೆ ಎಂದು ಹೇಳಿದರು.ಮೂರು ಕೃಷಿ ಕಾನೂನುಗಳನ್ನು 18 ತಿಂಗಳು ಅಮಾನತುಗೊಳಿಸುವ ಹಿಂದಿನ ಪ್ರಸ್ತಾಪವೂ ಇನ್ನೂ ಇದೆ ಎಂದು ಅವರು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.