'ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳಿಂದ ದೇಶದ ಭವಿಷ್ಯ ಕರಾಳ'

ಕೇಂದ್ರ ‌ಸರಕಾರ ಜಾರಿ‌ಮಾಡಲು ಹೊರಟಿರುವ ರೈತ ಮತ್ತು ಕಾರ್ಮಿಕ ಕಾನೂನುಗಳಿಂದ ಭಾರತದ ಭವಿಷ್ಯ ಕರಾಳವಾಗಲಿದೆ ಹೀಗಾಗಿ ಈ ರೈತ ಹಾಗೂ ಕಾರ್ಮಿಕ ನೀತಿಗಳನ್ನು ಹಿಮ್ಮೆಟ್ಟಿಸುವುದು ಇವತ್ತಿನ ತುರ್ತಾಗಿದೆ ಎಂದು ಸಿ.ಐ.ಟಿ.ಯು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ ಅಭಿಪ್ರಾಯಪಟ್ಟರು.

Last Updated : Jan 31, 2021, 03:56 PM IST
  • ದೇಶದ ರೈತರು ಕಳೆದೆರಡು ತಿಂಗಳಿಂದ ದೆಹಲಿ ಹಾಗೂ ದೇಶಾದ್ಯಂತ ನಡೆಸುತ್ತಿರುವ ದೇಶಪ್ರೇಮಿ ಹೋರಾಟ (Farmers Protest) ವನ್ನು ಯಾವುದೇ ಬೆಲೆ ತೆತ್ತಾದರೂ ಸಫಲಗೊಳಿಸುವುದು ಅಗತ್ಯವಾಗಿದೆ‌ಯೆಂದರು.
  • ಕೇಂದ್ರ ‌ಸರಕಾರ ಜಾರಿ‌ಮಾಡಲು ಹೊರಟಿರುವ ರೈತ ಮತ್ತು ಕಾರ್ಮಿಕ ಕಾನೂನುಗಳಿಂದ ಭಾರತದ ಭವಿಷ್ಯ ಕರಾಳವಾಗಲಿದೆ.
'ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳಿಂದ ದೇಶದ ಭವಿಷ್ಯ ಕರಾಳ' title=

ಗದಗ: ಕೇಂದ್ರ ‌ಸರಕಾರ ಜಾರಿ‌ಮಾಡಲು ಹೊರಟಿರುವ ರೈತ ಮತ್ತು ಕಾರ್ಮಿಕ ಕಾನೂನುಗಳಿಂದ ಭಾರತದ ಭವಿಷ್ಯ ಕರಾಳವಾಗಲಿದೆ ಹೀಗಾಗಿ ಈ ರೈತ ಹಾಗೂ ಕಾರ್ಮಿಕ ನೀತಿಗಳನ್ನು ಹಿಮ್ಮೆಟ್ಟಿಸುವುದು ಇವತ್ತಿನ ತುರ್ತಾಗಿದೆ ಎಂದು ಸಿ.ಐ.ಟಿ.ಯು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ಡೆ ವಿರೋಧಿಸಿ ರೈತರಿಂದ ಜಾಥಾ

ಅವರು ಗಜೇಂದ್ರಗಡದಲ್ಲಿನ ಕೆ.ಕೆ.ವೃತ್ತದಲ್ಲಿ ರೈತ- ಕಾರ್ಮಿಕ ವಿರೋಧಿ ಕೃಷಿ ಸಂಬಂಧಿ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಗಳ ವಿರುದ್ಧ ಪ್ರಚಾರ ಜಾಥಾದ ಬಹಿರಂಗ ಸಭೆಯನ್ನುದ್ಧೇಶಿಸಿ ಮಾತನಾಡಿದರು."ದೇಶದ ರೈತರು ಕಳೆದೆರಡು ತಿಂಗಳಿಂದ ದೆಹಲಿ ಹಾಗೂ ದೇಶಾದ್ಯಂತ ನಡೆಸುತ್ತಿರುವ ದೇಶಪ್ರೇಮಿ ಹೋರಾಟ (Farmers Protestವನ್ನು ಯಾವುದೇ ಬೆಲೆ ತೆತ್ತಾದರೂ ಸಫಲಗೊಳಿಸುವುದು ಅಗತ್ಯವಾಗಿದೆ‌ಯೆಂದರು.ರೈತ,ಕಾರ್ಮಿಕರ ಈ ಐತಿಹಾಸಿಕ ಹೋರಾಟವನ್ನು ಸಂಪೂರ್ಣ ಬೆಂಬಲಿಸಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿಕೊಂಡರು.

ಇದನ್ನೂ ಓದಿ: Karnataka Gram Panchayat Election Results 2020: ಗದಗ ಜಿಲ್ಲೆಯಲ್ಲಿ ಕಾಮ್ರೆಡ್ ಗಳ ಮಿಂಚು

(ಬೆಳವಣಿಕಿಯಲ್ಲಿ ಪುಟ್ಟರಾಜ ಗವಾಯಿಗಳ ಮೂರ್ತಿಗೆ ಮಾಲಾರ್ಪಣೆ ಮಾಡುತ್ತಿರುವುದು)

ಇದೇ ವೇಳೆ ಸಿ.ಐ.ಟಿ.ಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ,ಮುಖಂಡರಾದ ಎಂ.ಬಿ.ನಾಡಗೌಡ, ಮಹೇಶ ಪತ್ತಾರ, ಎಂ.ಎಸ್.ಹಡಪದ ಅವರು ಸಹ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿ ಮಾಡಲು ಹೊರಟಿರುವ ದೇಶದ ಸ್ವಾತಂತ್ಯ,ಸ್ವಾವಲಂಬನೆಗೆ ವಿರುದ್ಧವಾಗಿ ಕಾರ್ಪೋರೇಟ್ ಕಂಪನಿ ಪರವಾಗಿ, ರೈತ (Farmers),ಕಾರ್ಮಿಕ,ಜನಸಾಮಾನ್ಯರ ವಿರೋಧಿ ನೀತಿ,ಕಾಯ್ದೆಗಳನ್ನು ಕೈಬಿಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಇದನ್ನೂ ಓದಿ: ರಾಜ್ಯದ ಗಮನ ಸೆಳೆದ ಗ್ರಾಮ ಪಂಚಾಯತಿ ಚುನಾವಣಾ ಪ್ರಣಾಳಿಕೆ

ರೈತರ ಈ ಜಾಥಾ ಗದಗ ಜಿಲ್ಲೆಯಲ್ಲಿ ಬೆಳವಣಿಕಿ, ಲಕ್ಷ್ಮೇಶ್ವರ, ನರಗುಂದ ಭಾಗಗಳಲ್ಲಿಯೂ ಕೂಡ ಸಂಚರಿಸಿತು.ಜಾಥಾ ಹೋದಲ್ಲೆಲ್ಲಾ ಕಾರ್ಮಿಕ,ರೈತ,ವಿದ್ಯಾರ್ಥಿ,ಯುವಜನ ಸಂಘಟನೆಗಳು ಬರಮಾಡಿಕೊಂಡವು.ಜಾಥಾದ ಕಲಾತಂಡವು ಬೀದಿ ನಾಟಕ ಹಾಗೂ ಹೋರಾಟದ ಹಾಡುಗಳ ಮೂಲಕ ರೈತರ ಕೃಷಿ ವಿರೋಧಿ ಕಾಯ್ದೆಗಳನ್ನು  ಜನರಿಗೆ ಮನಮುಟ್ಟುವಂತೆ ಪ್ರಸ್ತುತಪಡಿಸಿದರು.

(ಗಜೇಂದ್ರಗಡದಲ್ಲಿ ಜಾಥಾವನ್ನು ಉದ್ದೇಶಿಸಿ ಸಿಐಟಿಯುನ ಕೆ.ಮಹಾಂತೇಶ ಮಾತನಾಡುತ್ತಿರುವುದು)

ಕಾರ್ಯಕ್ರಮದಲ್ಲಿ ಮಾರುತಿ ಚಿಟಗಿ, ಬಾಲು ರಾಠೋಡ, ಅಲ್ಲಾಭಕ್ಷಿ ಮುಚ್ಚಾವಲಿ,ಬಸವರಾಜ ಮಂತೂರ, ಮಹೇಶ ಹಿರೇಮಠ, ಸಂಕಪ್ಪ ಕುರಹಟ್ಟಿ, ಹಣಮಂತಪ್ಪ ತಾಳಿ, ಮೈಲಾರಪ್ಪ ಮಾದರ, ಮಹಾಗುಂಡಪ್ಪ ಅಂಗಡಿ, ಗಣೇಶ ರಾಠೋಡ, ಫಯಾಜ್ ತೋಟದ, ಪೀರು ರಾಠೋಡ ಮತ್ತೀತರರಿದ್ದರು.

-ರವೀಂದ್ರ ಹೊನವಾಡ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News