ಮಧುರೈ: ದೇಶದಲ್ಲಿ ದಿನನಿತ್ಯ ಕೊರೊನಾ(CoronaVirus) ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿದ್ದು, ದೊಡ್ಡ ಆತಂಕವನ್ನುಂಟು ಮಾಡಿದೆ. ಒಮ್ರಿಕಾನ್ ರೂಪಾಂತರಿ ವೈರಸ್ ಜೊತೆಗೆ 3ನೇ ಅಲೆಯ ಭೀತಿ ಜನರ ದುಗುಡವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಇವೆಲ್ಲದವರ ನಡುವೆ ತಮಿಳುನಾಡಿನ ಇಡೀ ಕುಟುಂಬವೊಂದು ಕೊರೊನಾ ಸೋಂಕಿಗೆ ಹೆದರಿ ವಿಷ ಸೇವನೆ(Consuming Poison)ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ತಾಯಿ ಜೊತೆಗೆ 3 ವರ್ಷದ ಮಗು ಸಾವನ್ನಪ್ಪಿದೆ.


COMMERCIAL BREAK
SCROLL TO CONTINUE READING

ಈ ಹೃದಯ ವಿದ್ರಾವಕ ಘಟನೆ ನಡೆದಿರುವುದು ತಮಿಳುನಾಡಿನ ಮಧುರೈ(Tamil Nadu's Madurai)ಯಲ್ಲಿ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಮಧುರೈ ಸಮೀಪದ ಹಳ್ಳಿಯೊಂದರಲ್ಲಿ ಕೊರೊನಾ ಸೋಂಕಿನ ಭಯದಿಂದ ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ್ದರು.  ಈ ಪೈಕಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, 23 ವರ್ಷದ ಮಹಿಳೆ ಮತ್ತು ಆಕೆಯ 3 ವರ್ಷದ ಗಂಡುಮಗು ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: SFJ ಹೊಸ ಧಮ್ಕಿ, ಜನವರಿ 26ರಂದು ಖಾಲಿಸ್ತಾನಿ ಧ್ವಜ ಹಾರಿಸಿದವರಿಗೆ ಭಾರಿ ಬಜೆಟ್ ಘೋಷಣೆ


ಕೊರೊನಾ(Covid-19) ಭೀತಿಯಿಂದ ಸಾವಿಗೀಡಾಗಿರುವ ಈ ವಿಚಾರ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ. ಈ ಹಿನ್ನೆಲೆ ಪೊಲೀಸರು ಅಲರ್ಟ್ ಆಗಿದ್ದು, ಇಂತಹ ಪರಿಸ್ಥಿತಿ ಎದುರಾದಲ್ಲಿ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜನರನ್ನು ಒತ್ತಾಯಿಸಿದ್ದಾರೆ.


ಮೃತ ಮಹಿಳೆಗೆ ಜ.8ರಂದು ಕೊರೊನಾ ದೃಢಪಟ್ಟಿತ್ತು!


ಇಬ್ಬರು ಪುತ್ರರು, ಒಬ್ಬ ಮಗಳು ಹಾಗೂ ಮೊಮ್ಮಗನೊಂದಿಗೆ ಲಕ್ಷ್ಮಿ ಎಂಬುವರು ಹಳ್ಳಿಯಲ್ಲಿ ವಾಸವಾಗಿದ್ದರು. ಮಗಳು ಜ್ಯೋತಿಕಾ, ತನ್ನ ಗಂಡನಿಂದ ಬೇರ್ಪಟ್ಟ ನಂತರ ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದರು. ಈ ವೇಳೆ ವೃದ್ಧೆ ಲಕ್ಷ್ಮಿ ಅವರ ಪತಿ ಡಿಸೆಂಬರ್ ನಲ್ಲಿ ತೀರಿಕೊಂಡಿದ್ದರು. ಅಂದಿನಿಂದ ಇಡೀ ಕುಟುಂಬ ದುಃಖದಲ್ಲಿದ್ದಾಗ ಜ.8ರಂದು ಜ್ಯೋತಿಕಾ ಅವರಿಗೆ ಕೊರೊನಾ(CoronaVirus) ದೃಢಪಟ್ಟಿತ್ತು ಎಂದು ವರದಿಯಾಗಿದೆ.


ಇದನ್ನೂ ಓದಿ: Bank Strike : ಬ್ಯಾಂಕ್ ಯೂನಿಯನ್ ಮುಷ್ಕರ! ಸರ್ಕಾರಿ - ಖಾಸಗಿ ಬ್ಯಾಂಕ್‌ ಎರಡು ದಿನ ಬಂದ್!


ಕೊರೊನಾ ಸೋಂಕು(Omicron Variant) ದೃಢಪಟ್ಟಿರುವ ಬಗ್ಗೆ ಮಾಹಿತಿ ಗೊತ್ತಾದ ಮೇಲೆ ವೃದ್ಧೆ ಲಕ್ಷ್ಮಿಯ ಇಡೀ ಕುಟುಂಬವೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದೆ. ಇದರಲ್ಲಿ ಲಕ್ಷ್ಮಿ, ಲಕ್ಷ್ಮಿಯ ಇಬ್ಬರು ಮಕ್ಕಳು ಹಾಗೂ ಜ್ಯೋತಿಕಾ, ಜ್ಯೋತಿಕಾ ಅವರ ಮಗ ಸೇರಿದ್ದಾರೆ. ವರದಿಯ ಪ್ರಕಾರ ವಿಷ ಸೇವನೆ ಮಾಡಿದ ಮರುದಿನ ಪೊಲೀಸರಿಗೆ ನೆರೆಹೊರೆಯವರು ಮಾಹಿತಿ ತಿಳಿಸಿದ್ದಾರೆ. ಆದರೆ ಪೊಲೀಸರು ಬರುವ ಮೊದಲೇ ಜ್ಯೋತಿಕಾ ಹಾಗೂ ಅವರ 3 ವರ್ಷದ ಮಗ ಸಾವನ್ನಪ್ಪಿದ್ದರು. ಆದರೆ ಜ್ಯೋತಿಕಾ ಅವರ ತಾಯಿ ಹಾಗೂ ಸಹೋದರರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಆದರೆ ಜ್ಯೋತಿಕಾ ಕುಟುಂಬ ಕೊರೊನಾ ಸೋಂಕು ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ಚಿಂತೆ ಮಾಡಿ ವಿಷ ಸೇವಿಸಿರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರಬೇಕಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.