SFJ ಹೊಸ ಧಮ್ಕಿ, ಜನವರಿ 26ರಂದು ಖಾಲಿಸ್ತಾನಿ ಧ್ವಜ ಹಾರಿಸಿದವರಿಗೆ ಭಾರಿ ಬಜೆಟ್ ಘೋಷಣೆ

Sikhs For Justice - ಗಣರಾಜ್ಯೋತ್ಸವದ ಹಿನ್ನೆಲೆ ಖಲಿಸ್ತಾನಿ ಗುಂಪು ಸಿಖ್ಸ್ ಫಾರ್ ಜಸ್ಟಿಸ್ ಮತ್ತೊಮ್ಮೆ ಸಕ್ರಿಯವಾಗಿದೆ ಮತ್ತು ಮತ್ತೊಮ್ಮೆ ಭಾರತದ ವಿರುದ್ಧ ಪಿತೂರಿ ರೂಪಿಸುತ್ತಿದೆ. ಈ ಬಾರಿಯ  ತ್ರಿವರ್ಣ (Tiranga) ಧ್ವಜದ ಬದಲು ಖಲಿಸ್ತಾನಿ ಧ್ವಜಾರೋಹಣಕ್ಕಾಗಿ (Khalistani Flag) ಸಂಘಟನೆಯ ವತಿಯಿಂದ ಭಾರಿ ಬಜೆಟ್ ಘೋಷಣೆಯಾಗಿದೆ.

Written by - Nitin Tabib | Last Updated : Jan 10, 2022, 06:09 PM IST
  • ಖಲಿಸ್ತಾನಿ ಸಂಘಟನೆ SFJ ಬೆದರಿಕೆ.
  • ಗಣರಾಜ್ಯೋತ್ಸವದ ಹಿನ್ನೆಲೆ ಸಂಚು ರೂಪಿಸಲಾಗಿದೆ.
  • ಖಲಿಸ್ತಾನಿ ಧ್ವಜವನ್ನು ಹಾರಿಸಿದರೆ ಭಾರಿ ಬಹುಮಾನ.
SFJ ಹೊಸ ಧಮ್ಕಿ, ಜನವರಿ 26ರಂದು ಖಾಲಿಸ್ತಾನಿ ಧ್ವಜ ಹಾರಿಸಿದವರಿಗೆ ಭಾರಿ ಬಜೆಟ್ ಘೋಷಣೆ title=
Sikhs For Justice New Threat (File Photo)

ನವದೆಹಲಿ: Sikhs For Justice New Threat - ಜನವರಿ 26 ರಂದು ದೇಶಾದ್ಯಂತ ಗಣರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಅದಕ್ಕೂ ಮುನ್ನ ಮತ್ತೊಮ್ಮೆ ಭಾರತ ವಿರೋಧಿ ಶಕ್ತಿಗಳು ತಮ್ಮ ಸಂಚು ರೂಪಿಸಲು ಆರಂಭಿಸಿವೆ. ಇದೆ ಹಿನ್ನೆಲೆ ಇದೀಗ ಖಲಿಸ್ತಾನ್ ಪರ ಬೆಂಬಲಿಗರ ಗುಂಪಾಗಿರುವ ಸಿಖ್ ಫಾರ್ ಜಸ್ಟಿಸ್ (SFJ) ನಿಂದ ಹೊಸ ಬೆದರಿಕೆಯೋಡ್ಡಿದೆ. ಇದರಲ್ಲಿ ಭಾರತದಲ್ಲಿ ತ್ರಿವರ್ಣ ಧ್ವಜದ ಬದಲಿಗೆ ಖಲಿಸ್ತಾನಿ ಧ್ವಜವನ್ನು ಹಾರಿಸಲು 1 ಮಿಲಿಯನ್ ಡಾಲರ್ ಅಂದರೆ 10 ಲಕ್ಷ ಡಾಲರ್ ಬಹುಮಾನದ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ-Multibagger Stock: ಟಾಟಾ-ಬಿರ್ಲಾದ ಈ 2 ಷೇರುಗಳಿಂದ ಹಣದ ಮಳೆ, ಹೂಡಿಕೆದಾರರಿಗೆ ಜಾಕ್ ಪಾಟ್..!

ತ್ರಿವರ್ಣ ಧ್ವಜದ ವಿರುದ್ಧ ಸಂಚು ರೂಪಿಸಲಾಗಿದೆ
ಸಿಖ್ ಫಾರ್ ಜಸ್ಟಿಸ್ ಮುಖ್ಯ ಗುರುಪತ್ವಂತ್ ಸಿಂಗ್ ಪನ್ನು ಅವರು ಜನವರಿ 26ಕ್ಕೆ ಸಂಬಂಧಿಸಿದಂತೆ ಈ ಘೋಷಣೆ ಮಾಡಿದ್ದಾರೆ. ಅಲ್ಲದೆ, ಪ್ರೊ ಖಲಿಸ್ತಾನಿ ಗ್ರೂಪ್ (Khalistani Referendum Movement) ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊಗಳು ಸೇರಿದಂತೆ ಪೋಸ್ಟರ್ ಅಭಿಯಾನವನ್ನು ನಡೆಸುತ್ತಿದೆ. ಜನವರಿ 26 (Republic Day) ರಂದು, ದೆಹಲಿಯ ಜನರು ಮನೆಯಲ್ಲಿಯೇ ಇದ್ದುಕೊಂಡು, ಖಲಿಸ್ತಾನಿ ಧ್ವಜವನ್ನು ಹಾರಿಸಲು ಮತ್ತು ತ್ರಿವರ್ಣ ಧ್ವಜ ಹಾರಿಸುವುದನ್ನು ನಿಲ್ಲಿಸಲು 1 ಮಿಲಿಯನ್ ಡಾಲರ್ ಬಜೆಟ್ ಅನ್ನು ಘೋಷಿಸಲಾಗಿದೆ.

ಬಂಧನಕ್ಕೆ ಯತ್ನಿಸುತ್ತಿರುವ ಭದ್ರತಾ ಏಜೆನ್ಸಿಗಳು
ರೈತ (Farmers) ಆಂದೋಲನದ ವೇಳೆ ಪ್ರಾಣ ಕಳೆದುಕೊಂಡ ರೈತರ ಪರ ವಾದ ಮಂಡಿಸಿ ಈ ಬೆದರಿಕೆ ಹಾಕಲಾಗಿದೆ. ಗುರ್ಪತ್‌ವಂತ್ ಸಿಂಗ್ ಪನ್ನು ವಿದೇಶದಲ್ಲಿ ಕುಳಿತು ಪ್ರತಿದಿನ ವಿಡಿಯೋ (Incendiary Video) ಮೂಲಕ ಬೆದರಿಕೆ ಹಾಕುತ್ತಲೇ ಇದ್ದಾನೆ. ಈ ಹಿನ್ನೆಲೆ ಭದ್ರತಾ ಸಂಸ್ಥೆಗಳೂ ಕೂಡ ಆತನನ್ನು ಬಂಧಿಸಲು ಯತ್ನಿಸುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಭಾರತದ ವಿರುದ್ಧ ದ್ವೇಷ ಹರಡಲು ಆಟ ಸಂಚು ರೂಪಿಸುತ್ತಿದ್ದಾನೆ. 

ಇದನ್ನೂ ಓದಿ-PM Kisan ಯೋಜನೆ ಅನಾಹುತ! 7 ಲಕ್ಷಕ್ಕೂ ಹೆಚ್ಚು ರೈತರು 10ನೇ ಕಂತಿನ ಹಣ ಹಿಂತಿರುಗಿಸಬೇಕು : ಏಕೆ ಇಲ್ಲಿದೆ

ಪನ್ನು ಇತ್ತೀಚಿನ ಬೆದರಿಕೆಯ ನಂತರ, ಎಲ್ಲಾ ಭದ್ರತಾ ಏಜೆನ್ಸಿಗಳು ಅಲರ್ಟ್ ಮೋಡ್‌ನಲ್ಲಿವೆ. ಅಲ್ಲದೆ, ಜನವರಿ 26 ಹಿನ್ನೆಲೆ ರಾಜಧಾನಿ ದೆಹಲಿಯ ಭದ್ರತೆಯಲ್ಲಿ ಭಾರಿ ಹೆಚ್ಚಳ ಮಾಡಲಾಗಿದೆ.

ಇದನ್ನೂ ಓದಿ-ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೆ ಕೊರೊನಾ ದೃಢ, ಕಟೀಲ್ ಎರಡನೇ ಬಾರಿಗೆ ಕೊವಿಡ್ ಪಾಸಿಟಿವ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News