Bullet Train : ನೀರೊಳಗಿನ ಸುರಂಗ ನಿರ್ಮಾಣಕ್ಕೆ ಆಸಕ್ತಿ ತೋರಿದ ಭಾರತೀಯ ಕಂಪನಿಗಳು!
ಬುಲೆಟ್ ರೈಲಿಗಾಗಿ ಸಮುದ್ರದ ಕೆಳಗೆ ಸುರಂಗವನ್ನು ನಿರ್ಮಿಸುವ ಪ್ರಯತ್ನದಲ್ಲಿ ಏಳು ಭಾರತೀಯ ಕಂಪನಿಗಳು ಭಾಗವಹಿಸಿವೆ.
ನವದೆಹಲಿ : Bullet train in India: ದೇಶದಲ್ಲಿ ಬುಲೆಟ್ ರೈಲು ಓಡಿಸುವ ಕೆಲಸವೂ ಶರ ವೇಗದಲ್ಲಿ ನಡೆಯುತ್ತಿದೆ. ಭಾರತದ ಮೊದಲ ಬುಲೆಟ್ ರೈಲು ಅಹಮದಾಬಾದ್ ಮತ್ತು ಮುಂಬೈ ನಡುವೆ ಚಲಿಸಲಿದೆ. ಈ ರೈಲಿನ ವಿಶೇಷ ಲಕ್ಷಣವೆಂದರೆ ಅದು ಸಮುದ್ರದ ಕೆಳಗೆ ಹಾದುಹೋಗುತ್ತದೆ.
ಮುಂಬೈ-ಅಹಮದಾಬಾದ್‌ನ ಹೈಸ್ಪೀಡ್ ರೈಲು ಕಾರಿಡಾರ್‌ಗಾಗಿ ನೀರೊಳಗಿನ ಸುರಂಗವನ್ನು ನಿರ್ಮಿಸಲು ಕನಿಷ್ಠ ಏಳು ಭಾರತೀಯ ಕಂಪನಿಗಳು ಆಸಕ್ತಿ ತೋರಿಸಿವೆ.
ಫೆಬ್ರವರಿ 19 ರವರೆಗೆ ಬಿಡ್ ನಡೆಯಲಿದೆ :
ಸುರಂಗ ನಿರ್ಮಾಣಕ್ಕಾಗಿ ಟೆಂಡರ್ ಕರೆಯಲಾಗಿದ್ದು, 2021 ರ ಫೆಬ್ರವರಿ 19 ರೊಳಗೆ ಟೆಂಡರ್ ಸಲ್ಲಿಸಬಹುದು. ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಶನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ಪ್ರಕಾರ, ಬುಲೆಟ್ ರೈಲಿ (Bullet Train)ಗಾಗಿ ನೀರೊಳಗಿನ ಸುರಂಗವನ್ನು ನಿರ್ಮಿಸುವ ಪ್ರಯತ್ನದಲ್ಲಿ ಏಳು ಭಾರತೀಯ ಕಂಪನಿಗಳು ಭಾಗವಹಿಸಿವೆ.
ಇದನ್ನೂ ಓದಿ - ಮೈಸೂರಿನಿಂದ ಚೆನ್ನೈಗೆ ಚಲಿಸಲಿದೆ ಹೊಸ ಬುಲೆಟ್ ರೈಲು! ಈ ಯೋಜನೆ ಬಗ್ಗೆ ಗೊತ್ತೇ?
21 ಕಿ.ಮೀ ಉದ್ದದ ಭೂಗತ ಕಾರಿಡಾರ್ (Mumbai Ahmedabad high speed rail corridor) :
ಬುಲೆಟ್ ರೈಲು ಯೋಜನೆಯು ಬಿಕೆಸಿಯಿಂದ ಮಹಾರಾಷ್ಟ್ರದ ಕಲ್ಯಾಣ್ ಶಿಲ್ಪಾಟದವರೆಗೆ 21 ಕಿ.ಮೀ ಉದ್ದದ ಭೂಗತ ಕಾರಿಡಾರ್ ಅನ್ನು ಹೊಂದಿರುತ್ತದೆ. ಈ ಭೂಗತ ಕಾರಿಡಾರ್‌ನ ಸುಮಾರು 7 ಕಿ.ಮೀ ಥಾಣೆ ಕ್ರೀಕ್ ಅಡಿಯಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಲ್ಲಿ 1.8 ಕಿ.ಮೀ ಉದ್ದದ ವಿಭಾಗವನ್ನು ಸಮುದ್ರ ಮಟ್ಟಕ್ಕಿಂತ ಕೆಳಗಡೆ ಅಭಿವೃದ್ಧಿಪಡಿಸಬೇಕಾದರೆ, ಉಳಿದ ಭಾಗವನ್ನು ಕೊಲ್ಲಿಯ ಎರಡೂ ಬದಿಯಲ್ಲಿರುವ ಮ್ಯಾಂಗ್ರೋವ್ ಜವುಗು ಪ್ರದೇಶದಲ್ಲಿ ನಿರ್ಮಿಸಬೇಕಾಗಿದೆ.
ಬುಲೆಟ್ ರೈಲು ಗಂಟೆಗೆ 350 ಕಿ.ಮೀ ವೇಗದಲ್ಲಿ ಚಲಿಸುತ್ತದೆ :
ಬುಲೆಟ್ ರೈಲು ಗಂಟೆಗೆ 350 ಕಿಲೋಮೀಟರ್ ವೇಗದಲ್ಲಿ ಚಲಿಸುವ ನಿರೀಕ್ಷೆಯಿದ್ದು, ಇದು ಸುಮಾರು ಎರಡು ಗಂಟೆಗಳಲ್ಲಿ 508 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಪ್ರಸ್ತುತ ಮುಂಬೈ-ಅಹಮದಾಬಾದ್ ನಡುವೆ ರೈಲು ಏಳು ಗಂಟೆ ಮತ್ತು ವಿಮಾನಕ್ಕೆ ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ - ಚೀನಾದಲ್ಲಿ ಚಲಿಸಲಿದೆ ಮೊದಲ ಅಂಡರ್ ವಾಟರ್ ಬುಲೆಟ್ ಟ್ರೈನ್
ಬಜೆಟ್ನಲ್ಲಿ ದೊಡ್ಡ ಪ್ರಕಟಣೆ ಇರಬಹುದು (Bullet Train in Budget 2021) :
ಬುಲೆಟ್ ರೈಲು ಯೋಜನೆಗೆ ಸಂಬಂಧಿಸಿದಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಜೆಟ್‌ನಲ್ಲಿ ದೊಡ್ಡ ಘೋಷಣೆ ಮಾಡಬಹುದೆಂದು ಆಶಿಸಲಾಗಿದೆ. ಮುಂಬೈ ಮತ್ತು ಅಹಮದಾಬಾದ್ ನಡುವಿನ ಹೈಸ್ಪೀಡ್ ರೈಲು ಯೋಜನೆಯನ್ನು ಭಾರತೀಯ ರೈಲ್ವೆ ಸಕ್ರಿಯವಾಗಿ ಪ್ರಾರಂಭಿಸುವುದಾಗಿ ಕಳೆದ ವರ್ಷ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು.
ಇತ್ತೀಚೆಗೆ ಭಾರತೀಯ ರೈಲ್ವೆ (Indian Railways) ತನ್ನ ಕರಡು ರಾಷ್ಟ್ರೀಯ ರೈಲು ಯೋಜನೆ 2024 ಅನ್ನು ಬಿಡುಗಡೆ ಮಾಡಿತು. ಇದರಲ್ಲಿ 2051 ರ ವೇಳೆಗೆ ಸುಮಾರು 8,000 ಕಿ.ಮೀ ಬುಲೆಟ್ ರೈಲು ಜಾಲವನ್ನು ಪ್ರಸ್ತಾಪಿಸಲಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.