ಚೀನಾದಲ್ಲಿ ಚಲಿಸಲಿದೆ ಮೊದಲ ಅಂಡರ್ ವಾಟರ್ ಬುಲೆಟ್ ಟ್ರೈನ್

ಪ್ರವಾಸೋದ್ಯಮ ಉತ್ತೇಜಿಸುವ ಗುರಿ ಹೊಂದಿರುವ ಈ ಪ್ರಸ್ತಾವಿತ ಅಂಡರ್ ವಾಟರ್ ಸುರಂಗವು 77 ಕಿಲೋಮೀಟರ್ ಯಾಂಗ್-ಝು ರೈಲ್ವೇ ಯೋಜನೆಯ ಭಾಗವಾಗಿದೆ.

Last Updated : Nov 29, 2018, 04:13 PM IST
ಚೀನಾದಲ್ಲಿ ಚಲಿಸಲಿದೆ ಮೊದಲ ಅಂಡರ್ ವಾಟರ್ ಬುಲೆಟ್ ಟ್ರೈನ್ title=
File Image

ಬೀಜಿಂಗ್: ಚೀನಾ ಸರ್ಕಾರ ದೇಶದ ಮೊದಲ ಅಂಡರ್ ವಾಟರ್ ಬುಲೆಟ್ ಟ್ರೈನ್ ನಿರ್ಮಾಣದ ಯೋಜನೆಯನ್ನು ಅನುಮೋದಿಸಿದೆ. ಸಿಎನ್ಎನ್ ವರದಿಯ ಪ್ರಕಾರ, ಈ ಬುಲೆಟ್ ಮಾರ್ಗವು ಶಾಂಘೈನ ಕರಾವಳಿ ನಗರ ನಿಂಗೊವನ್ನು ದ್ವೀಪಸಮೂಹದ ಪೂರ್ವ ತೀರಕ್ಕೆ ಸಂಪರ್ಕಿಸುತ್ತದೆ.

ಈ ಪ್ರಸ್ತಾವಿತ ಅಂಡರ್ ವಾಟರ್ ಸುರಂಗವು ಪ್ರವಾಸೋದ್ಯಮ ಉತ್ತೇಜಿಸುವ ಗುರಿ ಹೊಂದಿರುವ 77 ಕಿಲೋಮೀಟರ್ ಯಾಂಗ್-ಝು ರೈಲ್ವೇ ಯೋಜನೆಯ ಭಾಗವಾಗಿದೆ.
ಈ ಯೋಜನೆಯು ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ ಪ್ರಾಂತ್ಯದೊಳಗೆ ಎರಡು-ಗಂಟೆಗಳ ಪ್ರಯಾಣದ ವಲಯವನ್ನು ರಚಿಸುವುದು.

ಈ ಯೋಜನೆಯನ್ನು 2005 ರಲ್ಲಿ ಮೊದಲಿಗೆ ಪ್ರಸ್ತಾಪಿಸಲಾಗಿತ್ತು. ಯಾಂಗ್-ಝು ರೈಲ್ವೇ ಯೋಜನೆಯನ್ನು ನವೆಂಬರ್ನಲ್ಲಿ ಬೀಜಿಂಗ್ ಅಂಗೀಕರಿಸಿತು. 77 ಕಿ.ಮೀ ರೈಲ್ವೆ ಮಾರ್ಗದಲ್ಲಿ ಸುಮಾರು 70.92 ಕಿ.ಮೀ. ಟ್ರ್ಯಾಕ್ಗಳನ್ನು ನಿರ್ಮಿಸಲಾಗುವುದು, ಇದರಲ್ಲಿ ನೀರಿನೊಳಗೆ 16.2 ಕಿ.ಮೀ. ಸುರಂಗವೂ ಸೇರಿದೆ.

ಈ ಹೊಸ ಮಾರ್ಗದ ಮೂಲಕ, ಪ್ರಯಾಣಿಕರು ಝೆಜಿಯಾಂಗ್ ರಾಜಧಾನಿ ಹಾಂಗ್ಝೌ ನಗರದಿಂದ ಝುಷಾನ್ಗೆ 80 ನಿಮಿಷಗಳಲ್ಲಿ ತಲುಪಲು ಸಾಧ್ಯವಾಗುತ್ತದೆ. ಇದೇ ಮಾರ್ಗವನ್ನು ತಲುಪಲು ಬಸ್ ನಲ್ಲಿ ತೆರಳಿದರೆ 4.5 ಗಂಟೆಗಳು ಬೇಕಾಗುತ್ತದೆ ಮತ್ತು ಖಾಸಗಿ ವಾಹನದಿಂದ ತೆರಳಿದರೆ 2.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

Trending News