ಮುಂಬೈ : ಬೆಳಗ್ಗೆ ಧಾರಾಕಾರ ಮಳೆಯಿಂದಾಗಿ ಮುಂಬೈನ ಚೆಂಬೂರಿನ ನಾಕಾ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಈ ಅವಘಡದಲ್ಲಿ 11 ಜನ ಪ್ರಾಣ ಕಳೆದುಕೊಂಡಿದ್ದರು. ಆದ್ರೆ ಸದ್ಯೆ ಮೃತರ ಸಂಖ್ಯೆ 23 ರಕ್ಕೆ ಏರಿಕೆ ಆಗಿದೆ. ಅವಶೇಷಗಳ ಅಡಿ ಸಿಲುಕಿರುವ ಜನರ ರಕ್ಷಣೆಗೆ ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.


COMMERCIAL BREAK
SCROLL TO CONTINUE READING

ಎನ್‌ಡಿಆರ್‌ಎಫ್ ತಂಡ(NDRF Team)ದಿಂದ 11 ಶವಗಳನ್ನು ಅವಶೇಷಗಳಿಂದ ಹೊರತೆಗೆದಿದ್ದು. ಇನ್ನೂ 6 ರಿಂದ 8 ಜನ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ : Good News: SSLCಯಲ್ಲಿ ಫೇಲಾಗಿದ್ದೀರಾ? ಚಿಂತೆ ಬಿಟ್ಟು ನೈಯ್ಯಾ ಪೈಸೆ ಕೂಡ ಖರ್ಚು ಮಾಡದೆ ಗಿರಿಧಾಮಗಳಿಗೆ ಭೇಟಿ ನೀಡಿ


ಮುಂಬೈ(Mumbai)ನ ಜಿಯಾನ್ ಪ್ರದೇಶ ಮತ್ತು ಗಾಂಧಿ ಮಾರುಕಟ್ಟೆಯಲ್ಲಿ ಪ್ರವಾಹ ಉಂಟಾಗಿದೆ. ರಸ್ತೆಗಳು ಸಂಪೂರ್ಣವಾಗಿ ಜಲಾವೃತ್ತವಾಗಿವೆ. ನಗರದ ಎಲ್ಲೆಡೆ ಕಾರುಗಳು ನೀರಿನಲ್ಲಿ ಸಿಲುಕಿಕೊಂಡಿವೆ. ಈ ಕಾರಣದಿಂದಾಗಿ ಜನರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಬಿಎಂಸಿ ಉದ್ಯೋಗಿಗಳು ಎಲ್ಲೆಡೆ ಇದ್ದಾರೆ, ಅವರು ಇನ್ನಷ್ಟು ಅಪಾಯ ಎದುರಿಸುವ ಸಂಭವವಿದೆ ಎಂದು ಜನರಿಗೆ ಎಚ್ಚರಿಕೆಯಿಂದ ಇರಲು ಹೇಳಲಾಗಿದೆ.


Heavy Rain)ಯಾಗುತ್ತಿದೆ. ಮುಂಬೈ ಹೊರತುಪಡಿಸಿ, ಥಾಣೆ, ರಾಯಗಡ್, ನವೀ ಮುಂಬೈ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿ ತಡರಾತ್ರಿ ಭಾರೀ ಮಳೆಯಾಗಿದೆ. ಸತತ ಭಾರಿ ಮಳೆಯಿಂದಾಗಿ, ಮುಂಬಯಿಯ ಬಹುತೇಕ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಜಿಯಾನ್, ಚೆಂಬೂರ್, ಕುರ್ಲಾ, ಚುನ್ನಭಟ್ಟಿ, ಭಂಡಪ್, ಕುರ್ಲಾ, ಅಂಧೇರಿ, ಮಲಾಡ್, ಬೊರಿವಾಲಿ ಮತ್ತು ಕಂಡಿವಲಿ ಪ್ರವಾಹಕ್ಕೆ ಸಿಲುಕಿರುವ ಪ್ರಮುಖ ಪ್ರದೇಶಗಳಾಗಿವೆ.


ಇದನ್ನೂ ಓದಿ : ಉತ್ತರ ಪ್ರದೇಶ ವಿಧಾನಸಭೆ ಸಚಿವಾಲಯದಲ್ಲಿ ಜೀನ್ಸ್ ಮತ್ತು ಟೀ ಶರ್ಟ್ ಧರಿಸುವುದಕ್ಕೆ ನಿಷೇಧ


ಮುಂದಿನ 48 ಗಂಟೆ ಮುಂಬೈಗೆ ಸವಾಲು : 


ತಗ್ಗು ಪ್ರದೇಶಗಳ ಜೊತೆಗೆ, ಮುಂಬೈನ ಸ್ಥಳೀಯ ರೈಲ್ವೆ ನಿಲ್ದಾಣಗಳಲ್ಲಿ ನೀರಿನ ಲಾಗಿಂಗ್ ಇದೆ. ಮುಂದಿನ 48 ಗಂಟೆಗಳು ಮಳೆ(Rain) ಮುಂಬೈಗೆ ಸವಾಲಿನ ಸಂಗತಿಯಾಗಿದೆ ಎಂದು ಹವಾಮಾನ ಇಲಾಖೆಯಿಂದ ಈಗಾಗಲೇ ಆತಂಕ ವ್ಯಕ್ತಪಡಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ