ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಸಚಿವಾಲಯದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕಚೇರಿ ಸಮಯದಲ್ಲಿ ಜೀನ್ಸ್ ಮತ್ತು ಟೀ ಶರ್ಟ್ ಧರಿಸುವುದನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ:ನೂತನವಾಗಿ ರಚಿಸಿರುವ ಸಹಕಾರ ಸಚಿವಾಲಯದ ಬಗ್ಗೆ ಶರದ್ ಪವಾರ್ ಕಳವಳ
ಈ ಆದೇಶವನ್ನು ವಿಧಾನಸಭಾ ಸಚಿವಾಲಯದ ಜಂಟಿ ಕಾರ್ಯದರ್ಶಿ ನರೇಂದ್ರ ಕುಮಾರ್ ಮಿಶ್ರಾ ಹೊರಡಿಸಿದ್ದಾರೆ.ಈಗ ಸಚಿವಾಲಯದ ಎಲ್ಲಾ ನೌಕರರು ಅದರ ಘನತೆಗೆ ಅನುಗುಣವಾಗಿ ಬಟ್ಟೆಗಳನ್ನು ಧರಿಸುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಈ ಸೂಚನೆಯನ್ನು ಸಚಿವಾಲಯದ ಎಲ್ಲಾ ಅಧಿಕಾರಿಗಳು ಮತ್ತು ನೌಕರರಿಗೆ ನೀಡಲಾಗಿದೆ.
ಇದನ್ನೂ ಓದಿ: COVID-19: ಕೇಂದ್ರದಿಂದ 66 ಕೋಟಿ ಡೋಸ್‌ಗಳಷ್ಟು ಲಸಿಕೆ ಖರೀದಿಗೆ ಆರ್ಡರ್..!
ಈಗ ಜೀನ್ಸ್ ಮತ್ತು ಟೀ ಶರ್ಟ್ ಅಥವಾ ಇತರ ಕ್ಯಾಶುಯಲ್ ಉಡುಗೆ ಧರಿಸಿ ಸಚಿವಾಲಯಕ್ಕೆ ಪ್ರವೇಶಿಸಲು ಯಾರಿಗೂ ಅವಕಾಶವಿಲ್ಲ. ಸಚಿವಾಲಯದ ಘನತೆಗೆ ಅನುಗುಣವಾಗಿ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಕಚೇರಿ ಸಮಯದಲ್ಲಿ ಔಪಚಾರಿಕ ಉಡುಗೆ ಮಾತ್ರ ಧರಿಸಲು ಆದೇಶದಲ್ಲಿ ಸೂಚಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.