ಕೇಂದ್ರ ಸಚಿವರ ನಿವಾಸದಲ್ಲಿಯೇ ಕೊಲೆ ! ಗುಂಡು ಹಾರಿಸಿ ವ್ಯಕ್ತಿಯ ಹತ್ಯೆ
Vinay Srivastav Murder Case:ಕೇಂದ್ರ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರ ನಿವಾಸದಲ್ಲಿ ವಿನಯ್ ಶ್ರೀವಾಸ್ತವ್ ಅವರನ್ನು ಪಿಸ್ತೂಲ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಹತ್ಯೆ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಸ್ಥಳಕ್ಕೆ ಆಗಮಿಸಿರುವ ಪೊಲೀಸರು, ಪ್ರಕರಣದ ತನಿಖೆ ಆರಂಭಿಸಿದ್ದಾರೆ.
Vinay Srivastav Murder Case : ಕೇಂದ್ರ ಸಚಿವ ಕೌಶಲ್ ಕಿಶೋರ್ ಮನೆಯಲ್ಲಿ ಹತ್ಯೆ ನಡೆದಿರುವ ಬಗ್ಗೆ ವರದಿಯಾಗಿದೆ. ಪೊಲೀಸರ ಪ್ರಕಾರ, ವಿನಯ್ ಶ್ರೀವಾಸ್ತವ್ ಎಂಬ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಲಕ್ನೋದ ಠಾಕುರ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬೆಗಾರಿಯಾ ಗ್ರಾಮದಲ್ಲಿರುವ ಕೇಂದ್ರ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರ ನಿವಾಸದಲ್ಲಿ ವಿನಯ್ ಶ್ರೀವಾಸ್ತವ್ ಅವರನ್ನು ಪಿಸ್ತೂಲ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಹತ್ಯೆ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಸ್ಥಳಕ್ಕೆ ಆಗಮಿಸಿರುವ ಪೊಲೀಸರು, ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ಕೇಂದ್ರ ಸಚಿವರ ನಿವಾಸದಲ್ಲೇ ನಡೆಯಿತು ಕೊಲೆ :
ಹತ್ಯೆಯ ಬಗ್ಗೆ ಮಾಹಿತಿ ಪಡೆದ ಪಶ್ಚಿಮ ಡಿಸಿಪಿ ರಾಹುಲ್ ರಾಜ್, ಎಡಿಸಿಪಿ ಚಿರಂಜೀವಿ ನಾಥ್ ಸಿನ್ಹಾ ಸೇರಿದಂತೆ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿದೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಿನಯ್ ಶ್ರೀವಾಸ್ತವ್ ಅವರ ಕುಟುಂಬಸ್ಥರು ಕೊಲೆ ಆರೋಪದಡಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : ಕಾಣೆಯಾದ ಹಸಿರು ಗಿಳಿ... ಹುಡುಕಿಕೊಟ್ಟವರಿಗೆ ₹5,000 ಬಹುಮಾನ!
3 ವರ್ಷಗಳ ಹಿಂದೆ ಮೃತಪಟ್ಟಿರುವ ಮಗ :
2020 ರ ಆರಂಭದಲ್ಲಿ, ಕೌಶಲ್ ಕಿಶೋರ್ ಅವರ ಮಗ ಆಕಾಶ್ ಕಿಶೋರ್ ನಿಧನರಾಗಿದ್ದಾರೆ. ಮಗನ ಸಾವಿನಿಂದ ಕೌಶಲ್ ಕಿಶೋರ್ ಕುಸಿದು ಹೋಗಿದ್ದರು. ಕೌಶಲ್ ಕಿಶೋರ್ ಪುತ್ರ ಆಕಾಶ್ ಕಿಶೋರ್ ಮಾದಕ ವಸ್ತುವಿನ ವ್ಯಸನಿಯಾಗಿದ್ದರು ಎನ್ನಲಾಗಿದೆ. ಇದಾದ ಬಳಿಕ ಕೌಶಲ್ ಕಿಶೋರ್ ಅವರು ಇಡೀ ಯುಪಿ ಮತ್ತು ದೇಶವನ್ನು ಡ್ರಗ್ಸ್ ನಿಂದ ಮುಕ್ತಗೊಳಿಸಬೇಕು ಎಂದು ಪ್ರತಿಜ್ಞೆ ಮಾಡಿದ್ದರು. ಕೌಶಲ್ ಕಿಶೋರ್ ಡ್ರಗ್ಸ್ ವಿರುದ್ಧ ಅಭಿಯಾನ ಕೂಡಾ ಆರಂಭಿಸಿದ್ದರು. ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಸಚಿವ ಕೌಶಲ್ ಕಿಶೋರ್ ಟ್ವೀಟ್ :
ಇದಕ್ಕೆ ಸಂಬಂಧಿಸಿದಂತೆ ಕೌಶಲ್ ಕಿಶೋರ್ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ನಾನು ತಪ್ಪು ಮಾಡಿದ್ದೇನೆ ಮತ್ತು ನನ್ನ ಮಾದಕ ವ್ಯಸನಿ ಪುತ್ರನ ಮದುವೆ ಮಾಡಿಸಿದ್ದೇನೆ. ಈ ರೀತಿ ಬೇರೆ ಯಾವ ಹುಡುಗಿಯೂ ವಿಧವೆಯಾಗಬಾರದು. ಆದ್ದರಿಂದ ನಿಮ್ಮ ಮನೆಯ ಹುಡುಗಿಯರನ್ನು ಯಾವುದೇ ಮಾದಕ ವ್ಯಸನಿಗಳಿಗೆ ಮದುವೆ ಮಾಡಿ ಕೊಡಬೇಡಿ ಎಂದು ಬರೆಡು ಕೊಂಡಿದ್ದರು.
ಇದನ್ನೂ ಓದಿ : ಆದಿತ್ಯ ಎಲ್1 ಯೋಜನೆ: ಸೂರ್ಯನ ಉರಿಯಿಂದ ಭೂಮಿಯ ರಕ್ಷಣೆ
ಮಾಹಿತಿಯ ಪ್ರಕಾರ, ಪೊಲೀಸರು ವಿನಯ್ ಶ್ರೀವಾಸ್ತವ್ ಹತ್ಯೆಯ ತನಿಖೆ ನಡೆಸುತ್ತಿದ್ದಾರೆ. ವಿನಯ್ ಶ್ರೀವಾಸ್ತವ ಕೇಂದ್ರ ಸಚಿವ ಕೌಶಲ್ ಕಿಶೋರ್ ಪುತ್ರನ ಸ್ನೇಹಿತ ಎಂದು ಹೇಳಲಾಗುತ್ತಿದೆ. ಸಾವಿನ ನಿಗೂಢತೆಯನ್ನು ಶೀಘ್ರವೇ ಭೇದಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.