ಕಾಣೆಯಾದ ಹಸಿರು ಗಿಳಿ... ಹುಡುಕಿಕೊಟ್ಟವರಿಗೆ ₹5,000 ಬಹುಮಾನ!

Missing green parrot : ಮೀರತ್‌ನ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ತನ್ನ ಗಿಳಿ ನಾಪತ್ತೆಯಾದಾಗ ತುಂಬಾ ನೊಂದಿದ್ದರು. ಗಿಳಿಯನ್ನು ಹುಡುಕಿ ತಂದು ಕೊಡುವವರಿಗೆ ಐದು ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದರು.

Written by - Chetana Devarmani | Last Updated : Aug 31, 2023, 10:33 PM IST
  • ಕಾಣೆಯಾದ ಹಸಿರು ಗಿಳಿಗಾಗಿ ಹುಡುಕಾಟ
  • ಮೀರತ್‌ನ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಸಾಕಿದ ಗಿಳಿ
  • ಗಿಳಿ ಹುಡುಕಿಕೊಟ್ಟವರಿಗೆ ₹5,000 ಬಹುಮಾನ
ಕಾಣೆಯಾದ ಹಸಿರು ಗಿಳಿ... ಹುಡುಕಿಕೊಟ್ಟವರಿಗೆ ₹5,000 ಬಹುಮಾನ! title=
parrot

ಮೀರತ್: ಮೂಕ ಪ್ರಾಣಿಗಳು ಮತ್ತು ಪಕ್ಷಿಗಳ ಬಗ್ಗೆ ಮಾನವನ ಅಪಾರ ಪ್ರೀತಿಯ ಬಗ್ಗೆ ನಾವು ಅನೇಕ ಕಥೆಗಳನ್ನು ಕೇಳಿದ್ದೇವೆ. ಅದರಲ್ಲಿ ಇದೂ ಒಂದು. ಇದರಲ್ಲಿ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ತನ್ನ ಮುದ್ದಿನ ಪಕ್ಷಿಯನ್ನು ಕಳೆದುಕೊಂಡು ತೀವ್ರವಾಗಿ ನೊಂದಿದ್ದಾರೆ. ಅದರ ಕಣ್ಮರೆ ಬಗ್ಗೆ ಅವರು ವಿವಿಧ ಜಾಹೀರಾತುಗಳನ್ನು ಮುದ್ರಿಸಿದ್ದಾರೆ. 

ಬಹುಮಾನ ಘೋಷಿಸಿರುವುದರಿಂದ ಕಳೆದು ಹೋದ ಹಕ್ಕಿ ಮತ್ತೆ ಸಿಗುತ್ತದೆ ಎಂಬ ವಿಶ್ವಾಸ ಇನ್ಸ್ ಪೆಕ್ಟರ್ ಗೆ ಇದೆ. ಮೀರತ್‌ನ ಮೋಹನ್‌ಪುರಿಯಲ್ಲಿ ಉತ್ತರ ಪ್ರದೇಶ ಪೊಲೀಸ್‌ ಎಲ್‌ಐಯುನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ಇನ್ಸ್‌ಪೆಕ್ಟರ್ ಶ್ವೇತಾ ಯಾದವ್ ಅವರ ಮನೆಯಿಂದ ಸಾಕು ಗಿಳಿ ಹಾರಿಹೋಗಿದೆ. ಆ ಗಿಳಿಯನ್ನು ಹುಡುಕಿಕೊಟ್ಟವರಿಗೆ 5000 ರೂಪಾಯಿ ಬಹುಮಾನ ನೀಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ : ಆದಿತ್ಯ ಎಲ್1: ಸೌರ ಶಕ್ತಿಗಳ ಸಮನ್ವಯ - ಸಿಎಂಇಗಳು ಹಾಗೂ ಸೌರ ಮಾರುತಗಳ ಅನಾವರಣ 

ಗಿಳಿ ಮನೆಯ ಸದಸ್ಯರಂತೆ ಇದೆ ಎಂದು ಇನ್ಸ್‌ಪೆಕ್ಟರ್ ಶ್ವೇತಾ ಯಾದವ್ ಹೇಳಿದ್ದಾರೆ. ಮನೆಗೆ ಬಂದಾಗ ಗಿಳಿ ಕಾಲಿಗೆ ಗಾಯ ಮಾಡಿಕೊಂಡಿತ್ತು. ಅದಕ್ಕೆ ಚಿಕಿತ್ಸೆ ನೀಡಲಾಯಿತು. ಆ ಹಕ್ಕಿಗೆ ತುಂಬಾ ಭಯವಾಗಿತ್ತು. ಹಾಗಾಗಿ ಗಿಳಿಯ ಚಿಂತೆ ಕಾಡುತ್ತಿದೆ ಎಂದು ಇನ್ಸ್ ಪೆಕ್ಟರ್ ಹೇಳಿದರು. ಅವರ ಗಿಳಿಯನ್ನು ಯಾರಾದರೂ ಪತ್ತೆ ಮಾಡಿ ಕೊಟ್ಟರೆ 5000 ರೂಪಾಯಿ ಬಹುಮಾನ ನೀಡುವುದಾಗಿ ಹೇಳಿದರು.

ಈ ಸುದ್ದಿ ವೈರಲ್ ಆಗುತ್ತಿದೆ. ಇದನ್ನು ಓದಿದ ಅನೇಕ ಜನರು ಅನೇಕ ರೀತಿಯ ಗಿಳಿಗಳೊಂದಿಗೆ ಅವರ ಮನೆಯನ್ನು ತಲುಪುತ್ತಿದ್ದಾರೆ. ಇದು ಅವರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಯಾಕೆಂದರೆ ಆಕೆಗೆ ಬೇಕಾಗಿರುವುದು ತಾನು ಸಾಕಿದ ಗಿಳಿ. 

ಇದನ್ನೂ ಓದಿ : ಮದರಸಾಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್  ಶಿಕ್ಷಣಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News