ನವದೆಹಲಿ: ಕಾಶ್ಮೀರದ ಪುಲ್ವಾಮಾದಲ್ಲಿ ಶಾಂತಿಯ ಸಂದೇಶ ಸಾರಲು ಮುಸ್ಲಿಮರು ಮಹಾ ಶಿವರಾತ್ರಿ ಹಿನ್ನಲೆಯಲ್ಲಿ 80 ವರ್ಷದ ಹಳೆಯ ದೇವಾಲಯವನ್ನು ನವೀಕರಿಸಲು ಪಂಡಿತರ ಜೊತೆ ಕೈ ಜೋಡಿಸಿ ಸೌಹಾರ್ಧತೆ ಮೆರೆದಿದ್ದಾರೆ. ಈ ದೇವಾಲಯವು ಅಚನ್ ಗ್ರಾಮದಲ್ಲಿದ್ದು, ಫೆಬ್ರವರಿ 14 ರಂದು ಕನಿಷ್ಠ 40 ಸಿಆರ್ಪಿಎಫ್ ಸೈನಿಕರ ಮೇಲೆ ನಡೆದ ಭಯೋತ್ಪಾದನಾ ದಾಳಿಯಿಂದ ಕೇವಲ 15 ಕಿ.ಮೀ ದೂರದಲ್ಲಿದೆ.


COMMERCIAL BREAK
SCROLL TO CONTINUE READING

ಪುಲ್ವಾಮಾ ದಾಳಿಯ ನಂತರ ದೇವಸ್ಥಾನದ ನವೀಕರಣ ಕಾರ್ಯ ಸ್ಥಗಿತಗೊಂಡಿತ್ತು. ಈಗ ಶಿವರಾತ್ರಿಯ ನಿಮಿತ್ತ ಈ ಕಾರ್ಯಕ್ಕೆ ಮತ್ತೆ ಚಾಲನೆ ನೀಡಲಾಗಿದೆ. ಈ ನವೀಕರಣದ ಸಂದರ್ಭದಲ್ಲಿ ದೇವಸ್ಥಾನದ ಎಲ್ಲರಿಗೂ ಮುಸ್ಲಿಮರು ಸಾಂಪ್ರದಾಯಿಕ ಕಾಶ್ಮೀರಿ ಕಹ್ವಾ ಚಹಾವನ್ನು ಹಂಚಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ದೇವಸ್ಥಾನದ ಬಳಿ ಇರುವ ಹಲವು ಸ್ಥಳೀಯರು ಆಜಾನ್ ಜೊತೆಗೆ ದೇವಾಲಯದ ಗಂಟೆ ನಾಧವನ್ನು ಸಹಿತ ಕೇಳಲು ಬಯಸುತ್ತಾರೆ ಎನ್ನಲಾಗಿದೆ. 


ಈ ಗ್ರಾಮದಲ್ಲಿ 1990 ರಲ್ಲಿ ಕಾಶ್ಮೀರದಲ್ಲಿನ ದಂಗೆಕೋರ ಹಗರಣದ ನಂತರ, ಕೇವಲ ಒಂದು ಕಾಶ್ಮೀರಿ ಪಂಡಿತ್ ಕುಟುಂಬವನ್ನು ವಾಸಿಸುತ್ತಿದೆ.ಈ ದೇವಾಲಯ ಶಿಥಿಲಾವಸ್ಥೆಯಲ್ಲಿದ್ದಿದ್ದರಿಂದ ಪಂಡಿತ ಕುಟುಂಬ ಮಸೀದಿ ಔಕಾಫ್ ಕಮಿಟಿಯನ್ನು ಸಂಪರ್ಕಿಸಿದೆ.ಇದಾದ ನಂತರ ದೇವಾಲಯದ ನವೀಕರಣ ಕಾರ್ಯ ಪ್ರಾರಂಭವಾಗಿದೆ.


ಇಲ್ಲಿನ ಸ್ಥಳೀಯ ಭುಶನ್ ಲಾಲ್ ಹೇಳುವಂತೆ " ನಮ್ಮ ನೆರೆ ಹೊರೆಯವರಾಗಿರುವ ಮುಸ್ಲಿಮರು ಈ ದೇವಸ್ಥಾನವನ್ನು ಗೌರವಿಸಿ ಈ ಕಾರ್ಯವನ್ನು ಮಾಡುತ್ತಿದ್ದಾರೆ. ಇನ್ನೊಬ್ಬ ನಿವಾಸಿ ಸಂಜಯ್ ಕುಮಾರ್ ತಮಗೆ ತಮ್ಮ ಸಂಬಂಧಿಕರಿಗಿಂತಲೂ ನಮ್ಮ ನೆರೆಹೊರೆಯ ಮುಸ್ಲಿಂ ಸಹೋದರು ಮುಖ್ಯ "ಅವರು ಎಲ್ಲ ಕಷ್ಟ ಕಾಲದಲ್ಲಿಯೂ ಸಹಿತ ನನ್ನ ಜೊತೆ ನಿಂತಿದ್ದಾರೆ.ನಾವು ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದೇವೆ. ಔಕಾಫ್ ಕಮಿಟಿಯು ಈ ನವೀಕರಣದ ಕಾರ್ಯದಲ್ಲಿ ನಮಗೆ ಸಹಾಯ ಮಾಡುತ್ತಿದೆ" ಎಂದು ಹೇಳಿದರು.