ನವದೆಹಲಿ: ಕೇರಳದಲ್ಲಿ ಚುನಾವಣಾ ಪ್ರಚಾರದಲ್ಲಿರುವ ರಾಹುಲ್ ಗಾಂಧಿ ಪ್ರಧಾನಿ ಮೋದಿ ದೇಶವನ್ನು ವಿಭಜಿಸಿ ತನ್ನೊಳಗೆ ಕಚ್ಚಾಡುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಬುಧವಾರದಂದು ಸಂಸದೀಯ ಸಮನ್ವಯ ಸಮಿತಿ ಸಭೆಯ ಬಳಿಕ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ " ನರೇಂದ್ರ ಮೋದಿ ದೇಶವನ್ನು ವಿಭಜಿಸಿ ಒಳಗೊಳಗೆ ಕಚ್ಚಾಡುವಂತೆ ಮಾಡಿದ್ದಾರೆ.ಪ್ರಮುಖ ರಾಷ್ಟ್ರ ವಿರೋಧಿ ಕೆಲಸವೆಂದರೆ ಇಂದು ಪ್ರತಿ 24 ಗಂಟೆಯಲ್ಲಿ 27 ಸಾವಿರ ಯುವಕರು ತಮ್ಮ ಕೆಲಸವನ್ನು ಕಳೆದುಕೊಳ್ಳುತ್ತಿದ್ದಾರೆ. ಕೃಷಿ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಸಾವಿರಾರು ರೈತರು ಆತ್ಮ ಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿದ್ದಾರೆ,ಇದು ರಾಷ್ಟ್ರ ವಿರೋಧಿ ಧೋರಣೆ " ಎಂದು ರಾಹುಲ್ ಗಾಂಧಿ ಪ್ರಧಾನಿ ಮೋದಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.


"30,000 ಕೋಟಿ ರೂ.ಗಳನ್ನು ತೆಗೆದುಕೊಂಡು ಅದನ್ನು ಅನಿಲ್ ಅಂಬಾನಿಗೆ ನೀಡುವ ಮೂಲಕ ರಾಷ್ಟ್ರೀಯ ವಿರೋಧಿ ಧೋರಣೆಯನ್ನು ಅನುಸರಿಸಿದ್ದಾರೆ, ಈ ಎಲ್ಲ ಸಂಗತಿಗಳನ್ನು ಅವರು ಏಕೆ ಮಾಡಿದ್ದಾರೆ ಎನ್ನುವುದನ್ನು  ನರೇಂದ್ರ ಮೋದಿ ಉತ್ತರಿಸಬೇಕು" ಎಂದು ಹೇಳಿದರು. ದೇಶದ ಈಗ ಮೂರು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಬೇಕಾಗಿದೆ ಅದರಲ್ಲಿ ಮುಖ್ಯವಾಗಿ ಆರ್ಥಿಕ ಹಿಂದುಳಿದಿರುವಿಕೆ ,ಕೃಷಿ ಬಿಕ್ಕಟ್ಟು ಮತ್ತು ಭ್ರಷ್ಟಾಚಾರ.ಆದರೆ ಮೋದಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಲು ಸಿದ್ಧವಾಗಿಲ್ಲ ಎಂದು ರಾಹುಲ್ ತಿಳಿಸಿದರು.


ಕೇರಳಕ್ಕೆ ಎರಡು ದಿನಗಳ ಭೇಟಿಗೆ ಆಗಮಿಸಿರುವ ರಾಹುಲ್ ಗಾಂಧಿ ಹಲವು ಸರಣಿ ರ್ಯಾಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಾಷಣ ಮಾಡಿದರು.ರಾಹುಲ್ ಗಾಂಧಿ ಇದೆ ಮೊದಲ ಬಾರಿಗೆ ಕೇರಳದ ವಯನಾಡ್ ಮತ್ತು ಉತ್ತರ ಪ್ರದೇಶದ ಅಮೇಥಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.