OMG: ದೇವಾಲಯ ನಿರ್ಮಾಣ ಕಾರ್ಯದ ವೇಳೆ ಮೊಘಲರ ಕಾಲದ 400 ನಾಣ್ಯಗಳು ಪತ್ತೆ!
Mughal Era`s 400 Coins Found: ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಅರೇಬಿಕ್ ಭಾಷೆಯ ಶಾಸನಗಳನ್ನು ಹೊಂದಿರುವ ನಾಣ್ಯಗಳನ್ನು ಮೊಘಲರ ಕಾಲದಲ್ಲಿ ಬಳಸಲಾಗುತ್ತಿತ್ತು ಎಂದು ಹೇಳಲಾಗಿದೆ.
ಲಕ್ನೋ: ದೇವಸ್ಥಾನ ನಿರ್ಮಾಣದ ಕಾಮಗಾರಿ ವೇಳೆ ಮೊಘಲರ ಕಾಲದ 400 ನಾಣ್ಯಗಳು ಪತ್ತೆಯಾಗಿವೆ. ಉತ್ತರಪ್ರದೇಶದ ಸಹರಾನ್‍ಪುರ್‍ದಲ್ಲಿ ಪುರಾತನ ಕಾಲದ ನಾಣ್ಯಗಳು ಪತ್ತೆಯಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಸಹರಾನ್‍ಪುರದ ಹುಸೈನ್‍ಪುರ ಗ್ರಾಮದ ಸತಿಧಾಮ ದೇವಾಲಯದ ಆವರಣ ಗೋಡೆಯನ್ನು ತೆರವುಗೊಳಿಸಿ ಮಣ್ಣು ಅಗೆಯುತ್ತಿದ್ದ ವೇಳೆ ಈ ನಾಣ್ಯಗಳು ಪತ್ತೆಯಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಾಗರ್ ಜೈನ್ ತಿಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಬಳಿಕ ಸುಮಾರು 400 ನಾಣ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಮೊಘಲರ ಕಾಲದಲ್ಲಿ ಬಳಸುತ್ತಿದ್ದ ಈ ನಾಣ್ಯಗಳಲ್ಲಿ ಅರೆಬಿಕ್ ಭಾಷೆಯ ಲಿಪಿ ಇರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಜೈನ್ ತಿಳಿಸಿದ್ದಾರೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ವಿವಾದಾತ್ಮಕ ಜಿ20 ಸಭೆ: ಬಹಿಷ್ಕರಿಸಿದ ಚೀನಾ ಮತ್ತು ಸೌದಿ ಅರೇಬಿಯಾ!
ಪುರಾತತ್ವ ಶಾಸ್ತ್ರ ಇಲಾಖೆ ಸಹ ನಾಣ್ಯಗಳನ್ನು ಪರಿಶೀಲಿಸುತ್ತಿದ್ದು, ಯಾವ ಲೋಹ ಬಳಸಿ ಈ ನಾಣ್ಯಗಳನ್ನು ತಯಾರಿಸಲಾಗಿದೆ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ನೀಡಬೇಕಿದೆ. ಪತ್ತೆಯಾಗಿರುವ ನಾಣ್ಯಗಳು ಅಂದಾಜು 350 ವರ್ಷಗಳ ಹಿಂದಿನದ್ದಾಗಿದ್ದು, ಪ್ರತಿಯೊಂದು ನಾಣ್ಯವು 11 ಗ್ರಾಂ ತೂಕವಿದೆ.
ಪ್ರತಿ ನಾಣ್ಯದ ಪ್ರಸ್ತುತ ಮಾರುಕಟ್ಟೆ ಬೆಲೆ 3,500 ರೂ. ಎಂದು ತಿಳಿದುಬಂದಿದೆ. ಹುಸೈನ್‍ಪುರ್‍ದಲ್ಲಿ ದೊರೆತ ಈ ನಾಣ್ಯಗಳು ಮೊಘಲ್ ದೊರೆ 2ನೇ ಶಾ ಅಲಾಂ ಕಾಲಘಟ್ಟದ್ದಾಗಿದೆ. ಇವುಗಳಲ್ಲಿರುವ ಪಾರ್ಸಿ ಭಾಷೆಯ ಲಿಪಿಯಾಗಿದೆ ಎಂದು ಇತಿಹಾಸಕಾರ ರಾಜೀವ್ ಉಪಾಧ್ಯಾಯ ತಿಳಿಸಿದ್ದಾರೆ.
ಇದನ್ನೂ ಓದಿ: UPSC ಅಂತಿಮ ಫಲಿತಾಂಶ ಪ್ರಕಟ : ʼಟಾಪ್ 3ʼನಲ್ಲಿ ಮಹಿಳೆಯರದ್ದೇ ಮೇಲುಗೈ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.