ಕಾಶ್ಮೀರದಲ್ಲಿ ವಿವಾದಾತ್ಮಕ ಜಿ20 ಸಭೆ: ಬಹಿಷ್ಕರಿಸಿದ ಚೀನಾ ಮತ್ತು ಸೌದಿ ಅರೇಬಿಯಾ!

ಈ ಸಭೆಗೆ ಆಗಮಿಸುವವರಿಗೆ ಭಾರತ ಕೈಗೊಂಡ ಸುಧಾರಣಾ ಕ್ರಮ ಜಮ್ಮು ಕಾಶ್ಮೀರಕ್ಕೆ ಶಾಂತಿ ಮತ್ತು ಸಮೃದ್ಧಿಯನ್ನು ಮರಳಿ ತಂದಿದೆ ಎಂದು ಸಾಬೀತುಪಡಿಸುವ ಉದ್ದೇಶ ಹೊಂದಿತ್ತು. ಅದರೊಡನೆ, ಪ್ರವಾಸಿಗರಿಗೂ ಕಾಶ್ಮೀರ ಸುರಕ್ಷಿತ ತಾಣ ಎಂಬ ಭಾವನೆ ಮೂಡಿಸುವ ಗುರಿ ಹೊಂದಿತ್ತು.

Written by - Girish Linganna | Edited by - Yashaswini V | Last Updated : May 23, 2023, 11:09 AM IST
  • ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ ತಾನು ಜಿ20 ಸಭೆಯನ್ನು ಯಾವುದೇ ವಿವಾದಿತ ಪ್ರದೇಶದಲ್ಲಿ ಆಯೋಜಿಸುವುದರ ವಿರುದ್ಧವಿದ್ದು, ಕಾಶ್ಮೀರದಲ್ಲಿ ನಡೆಯುವ ಜಿ20 ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದಿದೆ.
  • ಕಾಶ್ಮೀರ ತನ್ನದು ಎಂದು ಹೇಳಿಕೊಳ್ಳುವ ಪಾಕಿಸ್ತಾನ ಜಿ20 ಸದಸ್ಯ ರಾಷ್ಟ್ರವಾಗಿಲ್ಲ. ಆದರೂ ಅದು ಭಾರತದ ನಡೆಯನ್ನು ಎಪ್ರಿಲ್ ತಿಂಗಳಲ್ಲೇ ಬೇಜವಾಬ್ದಾರಿಯ ನಡೆ ಎಂದು ವಿರೋಧಿಸಿತ್ತು.
  • ಇಂಡೋನೇಷ್ಯಾ, ಟರ್ಕಿ, ಈಜಿಪ್ಟ್ ಹಾಗೂ ಸೌದಿ ಅರೇಬಿಯಾಗಳೂ ಸಭೆಯಿಂದ ದೂರ ಉಳಿಯುವ ನಿರೀಕ್ಷೆಗಳಿದ್ದವು.
ಕಾಶ್ಮೀರದಲ್ಲಿ ವಿವಾದಾತ್ಮಕ ಜಿ20 ಸಭೆ: ಬಹಿಷ್ಕರಿಸಿದ ಚೀನಾ ಮತ್ತು ಸೌದಿ ಅರೇಬಿಯಾ! title=
Photo Courtesy: PTI

G20 meeting in Kashmir: ಚೀನಾ ಮತ್ತು ಸೌದಿ ಅರೇಬಿಯಾಗಳು ಕಾಶ್ಮೀರದಲ್ಲಿ ಆಯೋಜಿಸಲಾಗುತ್ತಿರುವ ಸಮಾವೇಶವೊಂದನ್ನು ಬಹಿಷ್ಕರಿಸಿವೆ. ಭಾರತ 2019ರಲ್ಲಿ ಕಾಶ್ಮೀರವನ್ನು ಸಂಪೂರ್ಣವಾಗಿ ತನ್ನ ನೇರ ಆಡಳಿತಕ್ಕೆ ಒಳಪಡಿಸಿದ ಬಳಿಕ ನಡೆದ ಇಂತಹ‌ ಮೊದಲ ಘಟನೆ ಇದಾಗಿದೆ. ಇದರ ಪರಿಣಾಮವಾಗಿ ಭಾರತದ ಜಿ20 ಅಧ್ಯಕ್ಷತೆ ವಿವಾದಗಳಿಗೆ ತುತ್ತಾಗಿದೆ.

ಜಿ20 ರಾಷ್ಟ್ರಗಳ 60ರಷ್ಟು ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಸೋಮವಾರದಿಂದ ಬುಧವಾರದ ತನಕ ನಡೆಯುವ ಈ ಸಭೆಗೆ ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಭಾರೀ ಭದ್ರತೆ ಒದಗಿಸಲಾಗಿತ್ತು.

ವಿವಾದಿತ, ಮುಸ್ಲಿಂ ಬಾಹುಳ್ಯದ ಈ ರಾಜ್ಯವನ್ನು ಸಂಪೂರ್ಣವಾಗಿ ತನ್ನ ನೇರ ಆಡಳಿತದ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ‌ದ ಭಾಗವಾಗಿ ಭಾರತ 2019ರಲ್ಲಿ ಜಮ್ಮು - ಕಾಶ್ಮೀರದ ಅರೆ ಸ್ವಾಯತ್ತತೆಯನ್ನು ಕಳಚಿ, ಜಮ್ಮು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಿಸಿತು.

ಇದನ್ನೂ ಓದಿ- ಪೈಲಟ್ ಸೀಟಿನಡಿ ಕೇಪ್ ಕೋಬ್ರಾ ಹಾವು?! ಹೈಟೆಕ್ ಸ್ಪರ್ಶ ಪಡೆಯುತ್ತಿದೆ ಕಾಕ್‌ಪಿಟ್ ಆಸನ

ಈ ಸಭೆಗೆ ಆಗಮಿಸುವವರಿಗೆ ಭಾರತ ಕೈಗೊಂಡ ಸುಧಾರಣಾ ಕ್ರಮ ಜಮ್ಮು ಕಾಶ್ಮೀರಕ್ಕೆ ಶಾಂತಿ ಮತ್ತು ಸಮೃದ್ಧಿಯನ್ನು ಮರಳಿ ತಂದಿದೆ ಎಂದು ಸಾಬೀತುಪಡಿಸುವ ಉದ್ದೇಶ ಹೊಂದಿತ್ತು. ಅದರೊಡನೆ, ಪ್ರವಾಸಿಗರಿಗೂ ಕಾಶ್ಮೀರ ಸುರಕ್ಷಿತ ತಾಣ ಎಂಬ ಭಾವನೆ ಮೂಡಿಸುವ ಗುರಿ ಹೊಂದಿತ್ತು.

ಸಮಾರಂಭದ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಕಾಯ್ದುಕೊಳ್ಳಲು ಕೌಂಟರ್ - ಡ್ರೋನ್ ಸ್ಕ್ವಾಡ್ ಹಾಗೂ ಭಾರತದ ಮಹತ್ವದ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (ಎನ್ಎಸ್‌ಜಿ) ಮರೀನ್ ಕಮಾಂಡೋಗಳು ಪೊಲೀಸರು ಮತ್ತು ಅರೆಸೇನಾ ಪಡೆಗಳೊಡನೆ ಕಾರ್ಯ ನಿರ್ವಹಿಸುತ್ತಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ ತಾನು ಜಿ20 ಸಭೆಯನ್ನು ಯಾವುದೇ ವಿವಾದಿತ ಪ್ರದೇಶದಲ್ಲಿ ಆಯೋಜಿಸುವುದರ ವಿರುದ್ಧವಿದ್ದು, ಕಾಶ್ಮೀರದಲ್ಲಿ ನಡೆಯುವ ಜಿ20 ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದಿದೆ. ಕಾಶ್ಮೀರ ತನ್ನದು ಎಂದು ಹೇಳಿಕೊಳ್ಳುವ ಪಾಕಿಸ್ತಾನ ಜಿ20 ಸದಸ್ಯ ರಾಷ್ಟ್ರವಾಗಿಲ್ಲ. ಆದರೂ ಅದು ಭಾರತದ ನಡೆಯನ್ನು ಎಪ್ರಿಲ್ ತಿಂಗಳಲ್ಲೇ ಬೇಜವಾಬ್ದಾರಿಯ ನಡೆ ಎಂದು ವಿರೋಧಿಸಿತ್ತು. ಇಂಡೋನೇಷ್ಯಾ, ಟರ್ಕಿ, ಈಜಿಪ್ಟ್ ಹಾಗೂ ಸೌದಿ ಅರೇಬಿಯಾಗಳೂ ಸಭೆಯಿಂದ ದೂರ ಉಳಿಯುವ ನಿರೀಕ್ಷೆಗಳಿದ್ದವು.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಭಾರತ ಪ್ರವಾಸೋದ್ಯಮದ ಕುರಿತು ಸಭೆ ಆಯೋಜಿಸುವ ಸಲುವಾಗಿ ಕಾಶ್ಮೀರವನ್ನು ಗ್ವಾಂಟಾನಮೋ ಬೇ ಜೈಲಿನ ಪ್ರತಿರೂಪದಂತೆ ಮಾಡಿದೆ ಎಂದು ಆರೋಪಿಸಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಭಾರತೀಯ ಜನತಾ ಪಾರ್ಟಿ ಜಿ20 ಸಭೆಯನ್ನು ವ್ಯಾಪಾರದ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ- ಯುದ್ಧ ವಿಮಾನದಿಂದ ಜಿಗಿದ ಬಳಿಕ ಯಾಕೆ ಪೈಲಟ್ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ?

ವಿಶ್ವಸಂಸ್ಥೆಯ ಅಲ್ಪಸಂಖ್ಯಾತರ ವಿಭಾಗದ ವರದಿಗಾರ ಫರ್ನಾಂಡ್ ಡಿ ವಾರೆನ್ನೆಸ್ ಅವರು ಕಳೆದ ವಾರ ಈ ಕುರಿತು ಹೇಳಿಕೆ ನೀಡಿ, ಕಾಶ್ಮೀರದಲ್ಲಿ ಸಹಜತೆ ಇದೆ ಎಂದು ಸುಳ್ಳು ಸುಳ್ಳಾಗಿ ಹೇಳಲಾಗುತ್ತಿದ್ದು, ಮಾನವ ಹಕ್ಕುಗಳ ದಮನ, ರಾಜಕೀಯ ಕಿರುಕುಳ ಹಾಗೂ ಅಕ್ರಮ ಬಂಧನಗಳು ಕಾಶ್ಮೀರದಲ್ಲಿ ಹೆಚ್ಚುತ್ತಿವೆ ಎಂದು ಆರೋಪಿಸಿದ್ದರು.

ಈ ಸಭೆಯನ್ನು ಆಯೋಜಿಸುವ ಮೂಲಕ, ಕಾಶ್ಮೀರದಲ್ಲಿ ಮಿಲಿಟರಿ ಆಡಳಿತ ಎಂದು ಹಲವರು ಮಾಡುತ್ತಿರುವ ಆರೋಪವನ್ನು ಸಹಜ ಎಂಬಂತೆ ಬಿಂಬಿಸುವ ಸಾಧ್ಯತೆಗಳಿವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಜಿನೀವಾದಲ್ಲಿರುವ ಭಾರತದ ವಿಶ್ವಸಂಸ್ಥೆಯ ನಿಯೋಗ ಈ ಹೇಳಿಕೆಯನ್ನು ಆಧಾರ ರಹಿತ ಎಂದು ತಳ್ಳಿ ಹಾಕಿದ್ದು, ಭಾರತ ತನ್ನ ದೇಶದೊಳಗೆ ಎಲ್ಲಿ ಬೇಕಾದರೂ ಸಭೆ ನಡೆಸುವ ಹಕ್ಕು ಹೊಂದಿದೆ ಎಂದು ಪ್ರತಿಪಾದಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News