ಸೇಲಂ: ನೀಟ್ ಪರೀಕ್ಷೆ(NEET Exam) ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ 19 ವರ್ಷದ ವೈದ್ಯಕೀಯ ಆಕಾಂಕ್ಷಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಎಸ್.ಧನುಷ್ ಎಂದು ಗುರುತಿಸಲಾಗಿದ್ದು, ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಸೇಲಂನ ಮೆಟ್ಟೂರು ಸಮೀಪದ ಕೂಝೈಯೂರ್(Koozhiyoor) ನಿವಾಸಿ ಧನುಷ್ ಈಗಾಗಲೇ 2 ಬಾರಿ ಪರೀಕ್ಷೆ ಬರೆದಿದ್ದರೂ ಉತ್ತೀರ್ಣರಾಗಿರಲಿಲ್ಲ. ಮತ್ತೆ ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿ ತನ್ನ 3ನೇ ಪ್ರಯತ್ನಕ್ಕೆ ದೃಢವಾಗಿ ತಯಾರಿ ನಡೆಸಿದ್ದರು ಎನ್ನಲಾಗಿದೆ. ಧನುಷ್ ಮೇಚೇರಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು(ಸೆಪ್ಟೆಂಬರ್ 12)ಪರೀಕ್ಷೆ ಬರೆಯಬೇಕಾಗಿತ್ತು. ಆದರೆ ಮತ್ತೆ ತಾನು ಎಲ್ಲಿ ಫೇಲ್ ಆಗಿಬಿಡುತ್ತೇನೋ ಎಂಬ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.


ಇದನ್ನೂ ಓದಿ: Indian Railways: ರೈಲು ಯಾತ್ರಿಗಳಿಗೊಂದು ಮಹತ್ವದ ಮಾಹಿತಿ, ಇನ್ಮುಂದೆ ಪ್ರಯಾಣ ಮತ್ತಷ್ಟು ಸುಲಭವಾಗಲಿದೆ


ಕಳೆದ ಕೆಲವು ದಿನಗಳಿಂದ ನೀಟ್ ಪರೀಕ್ಷೆಗೆ ಹಾಜರಾಗುವ ಬಗ್ಗೆ ಧನುಷ್(NEET Aspirant) ವಿಚಲಿತನಾಗಿದ್ದ. ಈಗಾಗಲೇ ಎರಡು ಪ್ರಯತ್ನಗಳಲ್ಲಿ ವಿಫಲನಾಗಿದ್ದರಿಂದ ಈ ಬಾರಿಯೂ ತಾನು ಪರೀಕ್ಷೆಯಲ್ಲಿ ಪಾಸ್ ಆಗುತ್ತೇನೋ ಇಲ್ಲವೋ ಎಂಬ ಗೊಂದಲ ಅವರಲ್ಲಿ ಮೂಡಿತ್ತು. ಕಳೆದ ಕೆಲವು ತಿಂಗಳುಗಳಿಂದ ಧನುಷ್ ಗಂಭೀರವಾಗಿ ಮತ್ತು ಧೈರ್ಯದಿಂದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಎಂದು ಮೃತರ ಸಹೋದರ ನಿಶಾಂತ್ ಹೇಳಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಪರೀಕ್ಷಾ ಆತಂಕ ಮೂಡಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆಂದು ಅವರು ತಿಳಿಸಿದ್ದಾರೆ.


‘ಇತ್ತೀಚಿನ ದಿನಗಳಲ್ಲಿ ಧನುಷ್ ಗೆ ಪರೀಕ್ಷೆ(NEET Exam)ಯ ಬಗ್ಗೆ ಭಯವಿತ್ತು. ಈ ಬಾರಿಯೂ ತಾನು ಯಶಸ್ವಿಯಾಗುತ್ತೇನೋ ಇಲ್ಲವೋ ಎಂದು ಕೊರಗಲು ಶುರುಮಾಡಿದ್ದ. ನಿನ್ನೆ ರಾತ್ರಿ(ಸೆ.11)ಯೂ ಕೂಡ ನಾವು ಪರೀಕ್ಷೆಯನ್ನು ಚೆನ್ನಾಗಿ ಬರೆಯುವಂತೆ ಆತನಿಗೆ ಪ್ರೋತ್ಸಾಹಿಸಿದ್ದೆವು’ ಅಂತಾ ಸಹೋದರ ತಿಳಿಸಿದ್ದಾನೆ.


ಇದನ್ನೂ ಓದಿ: ಅಪ್ರಾಪ್ತೆಯನ್ನು ಎಳೆದಾಡಿ ಮುಖಕ್ಕೆ ಕೇಕ್ ಹಚ್ಚಿದ ಶಿಕ್ಷಕ: ಮುಂದೇನಾಯ್ತು ನೋಡಿ..!


ಧನುಷ್ ತನ್ನ ತಂದೆಯೊಂದಿಗೆ ರಾತ್ರಿ 1 ಗಂಟೆಯವರೆಗೆ ಮಾತನಾಡುತ್ತಿದ್ದ ಎಂದು ತಿಳಿದುಬಂದಿದೆ. ಭಾನುವಾರ ಬೆಳಗ್ಗೆ ಧನುಷ್ ತನ್ನ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಬಳಿಕ ಸಂಬಂಧಿಕರು ಮತ್ತು ನೆರೆಹೊರೆಯವರು ಜಮಾಯಿಸಿದ್ದರು. ಕರುಮಲೈಕೂಡಲ್ ಪೊಲೀಸರು ಧನುಷ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.