NEET UG 2021 ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆ ದಿನಾಂಕ ಸೇರಿದಂತೆ ಇಲ್ಲಿದೆ ಬಹುಮುಖ್ಯ ಮಾಹಿತಿ

NEET UG 2021 admit cards released: NEET UG 2021 ಪ್ರವೇಶ ಪತ್ರಗಳನ್ನು NTA ನಿಂದ neet.nta.nic.in ನಲ್ಲಿ ಬಿಡುಗಡೆ ಮಾಡಲಾಗಿದೆ. ಪರೀಕ್ಷೆಯನ್ನು ಸೆಪ್ಟೆಂಬರ್ 12, 2021 ರಂದು ನಡೆಸಲು ನಿರ್ಧರಿಸಲಾಗಿದೆ.   

Written by - Yashaswini V | Last Updated : Sep 7, 2021, 09:30 AM IST
  • NEET UG 2021 ಗಾಗಿ ಪ್ರವೇಶ ಪತ್ರ ಬಿಡುಗಡೆ
  • NEET 2021 ಪರೀಕ್ಷೆಯು ಸೆಪ್ಟೆಂಬರ್ 12, 2021 ರಂದು ನಡೆಯಲಿದೆ
  • ಪ್ರವೇಶ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಲು neet.nta.nic.in ನಲ್ಲಿನ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು
NEET UG 2021 ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆ ದಿನಾಂಕ ಸೇರಿದಂತೆ ಇಲ್ಲಿದೆ ಬಹುಮುಖ್ಯ ಮಾಹಿತಿ title=
Neet Exam 2021 Admit Card

NEET UG 2021 admit cards released:  ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET UG 2021 ಗಾಗಿ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ. NEET 2021 ಅಭ್ಯರ್ಥಿಗಳು neet.nta.nic.in ನಲ್ಲಿನ ಅಧಿಕೃತ ವೆಬ್ ಸೈಟ್ ಗೆ ಲಾಗಿನ್ ಆಗುವ ಮೂಲಕ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. 

NEET UG 2021 ಅಭ್ಯರ್ಥಿಗಳು ಕೆಲವು ಸರಳ ಹಂತಗಳನ್ನು ಅನುಸರಿಸಿ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು NEET 2021 ಅಡ್ಮಿಟ್ ಕಾರ್ಡ್ (NEET UG 2021 admit cards) ಡೌನ್‌ಲೋಡ್ ಮಾಡಲು ಇಲ್ಲಿದೆ ಸುಲಭ ಹಂತಗಳು:

ಹಂತ 1: NEET 2021 ಅಭ್ಯರ್ಥಿಗಳು ಅಧಿಕೃತ NEET ವೆಬ್‌ಸೈಟ್‌ಗೆ neet.nta.nic.in ಗೆ ಲಾಗಿನ್ ಆಗಬೇಕು

ಹಂತ 2: ಅಭ್ಯರ್ಥಿಗಳು ನಂತರ 'ಡೌನ್‌ಲೋಡ್ ನೀಟ್ ಯುಜಿ 2021 ಪ್ರವೇಶ ಕಾರ್ಡ್' ಲಿಂಕ್‌ಗಳಲ್ಲಿ ಒಂದನ್ನು ಕ್ಲಿಕ್ ಮಾಡಬೇಕು

ಹಂತ 3: ನಂತರ ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಭದ್ರತಾ ಪಿನ್ ನಮೂದಿಸಬೇಕು ಮತ್ತು ಸಲ್ಲಿಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಹಂತ 4: ಪ್ರವೇಶ ಕಾರ್ಡ್‌ಗಳನ್ನು ನಿಮ್ಮ ಮುಂದೆ ಪ್ರದರ್ಶಿಸಲಾಗುತ್ತದೆ

NEET UG 2021 ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿದ ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಅದರ ಪ್ರಿಂಟ್‌ಔಟ್ ತೆಗೆದುಕೊಂಡರೆ ಒಳಿತು.

ಇದನ್ನೂ ಓದಿ- ಸೆ.9 ರಂದು ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷ ವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ

ನೀಟ್ ಪರೀಕ್ಷೆಯ ದಿನಾಂಕ: 
NEET 2021 ಪರೀಕ್ಷೆಯು ಸೆಪ್ಟೆಂಬರ್ 12, 2021 ರಂದು ಪೆನ್ ಮತ್ತು ಪೇಪರ್ ಮೋಡ್‌ನಲ್ಲಿ ನಡೆಯಲಿದೆ. ಎನ್‌ಟಿಎ ನೀಟ್ ಯುಜಿ 2021 ಅಭ್ಯರ್ಥಿಗಳ ಪರೀಕ್ಷಾ ನಗರ ಕೇಂದ್ರಗಳನ್ನು ಬಿಡುಗಡೆ ಮಾಡಿದೆ ಎಂಬುದನ್ನು ಗಮನಿಸಬೇಕು. NTA NEET UG 2021 ಪರೀಕ್ಷೆಯನ್ನು 202 ನಗರಗಳಲ್ಲಿರುವ ವಿವಿಧ ಕೇಂದ್ರಗಳಲ್ಲಿ ಸೆಪ್ಟೆಂಬರ್ 12, 2021 ರಂದು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಪರೀಕ್ಷೆಯನ್ನು ನಡೆಸುತ್ತದೆ. NTA ಈ ಹಿಂದೆ ನಗರ ಕೇಂದ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಮತ್ತು NEET 2021 ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ಬಳಸಿಕೊಂಡು ಪರೀಕ್ಷಾ ನಗರ ಸೂಚನಾ ಪತ್ರವನ್ನು ಪರಿಶೀಲಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ನೀಟ್ ಪರೀಕ್ಷೆಯ ಮೂಲಕ, ವಿದ್ಯಾರ್ಥಿಗಳು ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಲ್ಲಿ MBBS, BAMS, BSMS, BUMS ಮತ್ತು BHMS ಸೇರಿದಂತೆ ವಿವಿಧ ಕೋರ್ಸ್‌ಗಳಲ್ಲಿ ಪ್ರವೇಶ ಪಡೆಯಬಹುದು. ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯಿದೆ 2019 ರಲ್ಲಿ ತಿದ್ದುಪಡಿಯ ನಂತರ, ಕಳೆದ ವರ್ಷ, 13 ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಪುದುಚೇರಿಯಲ್ಲಿರುವ ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ ಎಂಬಿಬಿಎಸ್ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆಗಳನ್ನು ನೀಟ್ ಮೂಲಕ ನಡೆಸಿದೆ. ನೀಟ್ ಪರೀಕ್ಷೆಯನ್ನು 13 ಭಾಷೆಗಳಲ್ಲಿ ನಡೆಸಲಾಗುತ್ತದೆ- ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು.

ಇದನ್ನೂ ಓದಿ- NEET 2021 ಪ್ರವೇಶ ಪರೀಕ್ಷೆ ಮುಂದೂಡಿಕೆ ವಿಚಾರ: ಸುಪ್ರೀಂನಿಂದ ಮಹತ್ವದ ಆದೇಶ ಇಲ್ಲಿದೆ..!

ನೀಟ್ ಪರೀಕ್ಷೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ ನಿರಾಕರಣೆ:
ಸುಪ್ರೀಂ ಕೋರ್ಟ್ ಸೋಮವಾರ ನೀಟ್ ಮುಂದೂಡಲು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ. ವೈದ್ಯಕೀಯ ಕಾಲೇಜುಗಳಿಗೆ (ಪದವಿಪೂರ್ವ ಕೋರ್ಸ್‌ಗಳು) ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) 12 ಸೆಪ್ಟೆಂಬರ್ 2021 ರಂದು ಮಾತ್ರ ನಡೆಯಲಿದೆ. ಸಿಬಿಎಸ್‌ಇ ಮಂಡಳಿಯ ವಿಭಾಗ/ಖಾಸಗಿ/ಪತ್ರವ್ಯವಹಾರದ ಪರೀಕ್ಷೆಯಲ್ಲಿ ಹಾಜರಾದ ವಿದ್ಯಾರ್ಥಿಗಳ ಗುಂಪಿನಿಂದ ನೀಟ್ ಪರೀಕ್ಷೆಯನ್ನು ಮುಂದೂಡುವಂತೆ ಬೇಡಿಕೆ ಇತ್ತು.

ಇದೀಗ NEET 2021 ಕ್ಕಾಗಿ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗಿದ್ದು ಅಭ್ಯರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ಪ್ರವೇಶ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಲು neet.nta.nic.in ನಲ್ಲಿನ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು. ಇದಲ್ಲದೆ ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ನೀವು nta.nic.in ನಲ್ಲಿ ಅಧಿಕೃತ NTA ವೆಬ್‌ಸೈಟ್‌ಗೆ ಲಾಗಿನ್ ಆಗುವ ಮೂಲಕ ನಿಮ್ಮ ಸಂದೇಹಗಳಿಗೆ ಪರಿಹಾರ ಪಡೆಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News