New Social Media Rules:ಸಾಮಾಜಿಕ ಮಾಧ್ಯಮ ಹಾಗೂ OTT ವೇದಿಕೆಗಳಿಗೆ ಕೇಂದ್ರ ಸರ್ಕಾರದಿಂದ ಮೂಗುದಾರ
New Social Media Online OTT Rules: ಸಾಮಾಜಿಕ ಮಾಧ್ಯಮ ಕಂಪನಿಗಳ ನಿಯಮಗಳಲ್ಲಿ ಬದಲಾವಣೆ ಮಾಡಿ ಹಾಗೂ ಮಧ್ಯವರ್ತಿ ಹೊಣೆಗಾರಿಕೆಯ ಕುರಿತು ಕೇಂದ್ರದ ಮೋದಿ ನೇತೃತ್ವದ ಸರ್ಕಾರ ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇದಲ್ಲದೆ ಸರ್ಕಾರ ಓವರ್ ದಿ ಟಾಪ್ (OTT) ವೇದಿಕೆಗಳಿಗೂ ಕೂಡ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.
ನವದೆಹಲಿ: Guidelines For Social Media And OTT - ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಮಧ್ಯವರ್ತಿ ಹೊಣೆಗಾರಿಕೆಯನ್ನು ಗೊತ್ತುಪಡಿಸಿ, ನಿಯಮಗಳಲ್ಲಿ ಬದಲಾವಣೆ ತಂದು ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇದಲ್ಲದೆ OTT ಪ್ಲಾಟ್ ಫಾರ್ಮ್ ಗಳಿಗಾಗಿ ಕೂಡ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಹಾಗೂ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೆಕರ್ (Prakash Javadekar) ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ (Ravishankar Prasad) ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಭಾಷೆಗಳ ಬಳಕೆಯಾಗುತ್ತಿದ್ದು, ಸರ್ಕಾರ ಸಾಮಾಜಿಕ ಮಾಧ್ಯಮ (Social Media) ಅಥವಾ ವೇದಿಕೆಗಳ ಮೇಲೆ ಆಕ್ಷೇಪಾರ್ಹ ವಿಷಯವನ್ನು ಅನುಮೊದಿಸುವುದಿಲ್ಲ ಎಂದಿದ್ದಾರೆ.
ಹಿಂಸೆ ಪಸರಿಸಲು ಸಾಮಾಜಿಕ ಮಾಧ್ಯಮಗಳ ಬಳಕೆಯಾಗುತ್ತಿದೆ
ಹಿಂಸಾತ್ಮಕ ಚಟುವಟಿಕೆಗಳನ್ನು ಪ್ರಚೋದಿಸಲು ಜನರು ಇಂದು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿರುವುದನ್ನು ನಾವು ನೋಡಿದ್ದೇವೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮವನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ, ಒಂದು ಇಂಟರ್ ಮಿಡಿಯೇಟರಿ ಹಾಗೂ ಇನ್ನೊಂದು ಸಿಗ್ನಿಫಿಕಂಟ್ ಸೋಸಿಯಲ್ ಮೀಡಿಯಾ ಇಂಟರ್ ಮಿಡರಿ. ಗಮನಾರ್ಹ ಸಿಗ್ನಿಫಿಕಂಟ್ ಸೋಸಿಯಲ್ ಮೀಡಿಯಾ ಇಂಟರ್ ಮಿಡರಿ ಹೆಚ್ಚುವರಿ ಕರ್ತವ್ಯಗಳನ್ನು ಹೊಂದಿದೆ. ಇದಕ್ಕಾಗಿ ನಾವು ಶೀಘ್ರದಲ್ಲೇ ಬಳಕೆದಾರರ ಸಂಖ್ಯೆಯ ಅಧಿಸೂಚನೆಯನ್ನು ಹೊರಡಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಮಹಿಳೆಯರ ವಿರುದ್ಧದ ಆಕ್ಷೇಪಾರ್ಹ ಪೋಸ್ಟ್ ಗಳನ್ನು 24 ಗಳನ್ನು ತೆಗೆದುಹಾಕಲು ಸೂಚನೆ
ಈ ಕುರಿತು ಹೇಳಿಕೆ ನೀಡಿರುವ ರವಿಶಂಕರ್ ಪ್ರಸಾದ್, ಇನ್ಮುಂದೆ ಸಾಮಾಜಿಕ ಮಾಧ್ಯಮಗಳ ಮೇಲೆ ಒಟ್ಟು ಮೂರು ಹಂತಗಳಲ್ಲಿ ನಿಗಾವಹಿಸಲಾಗುವುದು ಎಂದು ಹೇಳಿದ್ದಾರೆ. ಇದಕ್ಕಾಗಿ ದೂರು ನಿರ್ವಹಣಾ ವ್ಯವಸ್ಥೆಯನ್ನು ರಚಿಸಲಾಗುವುದು ಹಾಗೂ ದೂರುಗಳನ್ನು ನಿವಾರಣೆಗೆ ಆಧಿಕಾರಿಗಳನ್ನು ನೇಮಿಸುವ ಅವಶ್ಯಕತೆ ಇದೆ. ಈ ಅಧಿಕಾರಿಗಳು 24 ಗಂಟೆಗಳಲ್ಲಿ ದೂರನ್ನು ನೋಂದಾಯಿಸಿ 15 ದಿನಗಳಲ್ಲಿ ಪರಿಹರಿಸಲಿದ್ದಾರೆ. ಕಂಪನಿಗಳು 24 ಗಂಟೆಗಳ ಒಳಗೆ ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಗಳನ್ನು ತೆಗೆದುಹಾಕಬೇಕು. ಕಂಪನಿಗಳು ನಿಯಮಗಳನ್ನು ಅನುಸರಿಸಿ ಪ್ರತಿ ತಿಂಗಳು ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಆಕ್ಷೇಪಾರ್ಹ ಪೋಸ್ಟ್ ಮಾಡಿದ ಮೊದಲ ವ್ಯಕ್ತಿ, ಈ ಬಗ್ಗೆ ಅವರು ಸರ್ಕಾರಕ್ಕೆ ಮಾಹಿತಿ ನೀಡಬೇಕು ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಅಷ್ಟೇ ಅಲ್ಲ ಬರುವ ಮೂರು ತಿಂಗಳೊಳಗೆ ನಿಯಮಗಳನ್ನು ಪಾಲನೆ ಆರಂಭಿಸಬೇಕು ಎಂದು ಅವರು ಹೇಳಿದ್ದಾರೆ.
OTT ಪ್ಲಾಟ್ ಫಾರ್ಮ್ ಗಳಿಗೂ ಕೂಡ ಮಾರ್ಗಸೂಚಿಗಳು ಜಾರಿ
ಎಲ್ಲಾ ಮಾಧ್ಯಮ ವೇದಿಕೆಗಳಿಗೆ ಇನ್ಮುಂದೆ ನಿಯಮ ಇರಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಒಟಿಟಿ (Over The Top)ಪ್ಲಾಟ್‌ಫಾರ್ಮ್ ಗಳ ನಿಯಂತ್ರಣಕ್ಕಾಗಿ ನಿಯಮ ಮಾಡಲು ನಾವು ಪ್ರತಿದಿನ ನೂರಾರು ದೂರುಗಳನ್ನು ಪಡೆಯುತ್ತಿದ್ದೇವೆ. ಒಟಿಟಿ ಮತ್ತು ಡಿಜಿಟಲ್ ಮಾಧ್ಯಮಕ್ಕಾಗಿ ಮೂರು ಹಂತದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಾವಡೆಕರ್.
ಇದನ್ನೂ ಓದಿ-'Tandav' ವಿವಾದದ ಬಳಿಕ ಎಚ್ಚೆತ್ತುಕೊಂಡ ಕೇಂದ್ರ, OTTಗಾಗಿ ನೂತನ ಮಾರ್ಗಸೂಚಿಗಳ ಬಿಡುಗಡೆಗೆ ಸಿದ್ಧತೆ
ಸಾಮಾಜಿಕ ಮಾಧ್ಯಮಗಳಿಗಾಗಿ ಹೊಸ ನಿಯಮಗಳು ಇಲ್ಲಿವೆ
1. ಹೊಸ ಮಾರ್ಗಸೂಚಿಗಳ ಪ್ರಕಾರ, ಸೋಶಿಯಲ್ ಮೀಡಿಯಾ ಸೆಲ್ ರಚಿಸಬೇಕು.
2. ಯಾವುದೇ ವಿಷಯವನ್ನು ತೆಗೆದುಹಾಕುವ ಮೊದಲು, ಅದರ ಕಾರಣವನ್ನು ಹೇಳುವುದು ಅವಶ್ಯಕ
3. ದೂರಿನ ಮೇರೆಗೆ ಆಕ್ಷೇಪಾರ್ಹ ಪೋಸ್ಟ್ 24 ಗಂಟೆಗಳೊಳಗೆ ತೆಗೆದುಹಾಕಬೇಕು.
4. ದೂರಿನ ಮೇರೆಗೆ ಪ್ರತಿ ತಿಂಗಳು ಕ್ರಮ ಕೈಗೊಳ್ಳಬೇಕು.
5. ಸಾಮಾಜಿಕ ಮಾಧ್ಯಮದ ಈ ನಿಯಮಗಳು ಮೂರು ತಿಂಗಳಲ್ಲಿ ಜಾರಿಗೆ ಬರಬೇಕು.
6. ಚೀಫ್ ಕಂಪ್ಲೈನ್ಸ್ ಅಧಿಕಾರಿ ನೇಮಕ ಮಾಡಬೇಕು ಮತ್ತು ಅವರು ಮೇಲೆ ನಿಯಮಗಳ ಪಾಲನೆ ಮಾಡಿಸಬೇಕಾದ ಜವಾಬ್ದಾರಿ ಇರಲಿದೆ.
7. ಇದರ ಜೊತೆಗೆ ನೋಡಲ್ ಕಾಂಟಾಕ್ಟ್ಸ್ ಅಧಿಕಾರಿಗಳನ್ನು ಕೂಡ ನೇಮಿಸಬೇಕು. ಇವರು 24x7 ಕಾನೂನು ಪಾಲನಾ ಸಂಸ್ಥೆಗಳ ಜೊತೆ ಸೇರಿ ಕಾರ್ಯ ನಿರ್ವಹಿಸಬೇಕು.
8. ಈ ಇಬ್ಬರು ನೇಮಕಗೊಂಡ ಅಧಿಕಾರಿಗಳು ಭಾರತದ ರಹವಾಸಿಗಳಾಗಬೇಕು.
9. ರೆಸಿಡೆಂಟ್ ಗ್ರಿವನ್ಸ್ ಅಧಿಕಾರಿಯನ್ನೂ ಕೂಡ ನೇಮಿಸಬೇಕಾಗಲಿದೆ.
10. ಎಲ್ಲಕ್ಕಿಂತ ಮೊದಲು ಆಕ್ಷೇಪಾರ್ಹ ಪೋಸ್ಟ್ ಹಾಕುವವರ ಬಗ್ಗೆ ಮಾಹಿತಿಯನ್ನು ನೀಡಬೇಕು.
ಇದನ್ನೂ ಓದಿ- ಚಿತ್ರ ವೀಕ್ಷಣೆಗೆ ಈ OTT Platform ಗಳು ಹಣ ನೀಡುತ್ತವಂತೆ ! ಕೇವಲ ಈ ಕೆಲಸ ಮಾಡಿ
OTT Platform ಗಳಿಗೆ ಮಾರ್ಗಸೂಚಿಗಳು
1. ಪ್ರೇಕ್ಷಕರ ವಯಸ್ಸಿಗೆ ಅನುಗುಣವಾಗಿ ಕಂಟೆಂಟ್ ಕೆಟಗರಿಗಳನ್ನು ನಿರ್ಮಿಸಬೇಕು.
2. OTT ಕಂಟೆಂಟ್ ಗಳಿಗೆ ಒಟ್ಟು 5 ಕೆಟಗರಿ ರಚಿಸಬೇಕು.
3. U, U/A 7+, U/A 13+, U/A 16+ ಹಾಗೂ A ಕೆಟಗರಿಗಳಿರಬೇಕು.
4. ಡಿಜಿಟಲ್ ಪ್ಲಾಟ್ ಫಾರ್ಮ್ ಮೇಲೆ ಪೋಷಕರ ಲಾಕ್ ಸೌಕರ್ಯ ಒದಗಿಸಬೇಕು.
5. ಎಥಿಕ್ಸ್ ಕೋಡ್ ಟಿವಿ ಹಾಗೂ ಸಿನೆಮಾ ಮಾದರಿಯಲ್ಲಿಯೇ ಇರಲಿದೆ.
6.OTT ಪ್ಲಾಟ್ ಫಾರ್ಮ್ ಗಳು ಸೆಲ್ಫ್ ರೆಗ್ಯುಲೆಶನ್ ಬಾಡಿ ನಿರ್ಮಿಸಬೇಕು.
7. ನಕಲಿ ಕಂಟೆಂಟ್ ಹಾಕುವವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು.
ಇದನ್ನೂ ಓದಿ- ನ್ಯೂಸ್ ಪೋರ್ಟಲ್ಸ್, ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮೂಗುದಾರಕ್ಕೆ ಕೇಂದ್ರದ ಚಿಂತನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.