'Tandav' ವಿವಾದದ ಬಳಿಕ ಎಚ್ಚೆತ್ತುಕೊಂಡ ಕೇಂದ್ರ, OTTಗಾಗಿ ನೂತನ ಮಾರ್ಗಸೂಚಿಗಳ ಬಿಡುಗಡೆಗೆ ಸಿದ್ಧತೆ

Centre On Tandav Controversy - ವಿವಾದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಕಾಶ ಜಾವಡೆಕರ್, "OTT Platform ಗಳ ಮೇಲೆ ಲಭ್ಯವಿರುವ ಕೆಲ ವೆಬ್ ಸಿರೀಜ್ ಗಳ ವಿರುದ್ಧ ನಮ್ಮ ಬಳಿ ದೂರುಗಳು ಬಂದಿವೆ. OTT ಪ್ಲಾಟ್ಫಾರ್ಮ್ ಗಳ ಮೇಲೆ ಬಿಡುಗಡೆಯಾಗುವ ಚಿತ್ರಗಳು, ಸಿರಿಯಲ್ಸ್ ಗಳು, ಡಿಜಿಟಲ್ ಸಮಾಚಾರ ಪತ್ರಗಳು, ಕೇಬಲ ಟೆಲಿವಿಶನ್ ನೆಟ್ವರ್ಕ್ ಆಕ್ಟ್ ಅಥವಾ ಸೆನ್ಸರ್ ಬೋರ್ಡ್ ಆಧಿನಕ್ಕೆ ಒಳಪಡುವುದಿಲ್ಲ. ಹೀಗಾಗಿ ಶೀಘ್ರದಲ್ಲಿಯೇ ಇವುಗಳಿಗೆ ನಿಯಂತ್ರಣಕ್ಕೆ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುವುದು" ಎಂದು ಹೇಳಿದ್ದಾರೆ.

Written by - Nitin Tabib | Last Updated : Jan 31, 2021, 09:57 PM IST
  • ವೆಬ್ ಸೀರೀಜ್ ಗಳ ನಿಯಂತ್ರಣಕ್ಕೆ ಶೀಘ್ರವೇ ಮಾರ್ಗಸೂಚಿಗಳ ಬಿಡುಗಡೆ.
  • ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೆಕರ್.
  • Tandav ಹಾಗೂ ಮಿರ್ಜಾಪುರ್ ವೆಬ್ ಸರಣಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳ ಹಿನ್ನೆಲೆ ಕೇಂದ್ರ ಸರ್ಕಾರ ಈ ನಿರ್ಣಯ ಕೈಗೊಂಡಿದೆ.
'Tandav' ವಿವಾದದ ಬಳಿಕ ಎಚ್ಚೆತ್ತುಕೊಂಡ ಕೇಂದ್ರ, OTTಗಾಗಿ ನೂತನ ಮಾರ್ಗಸೂಚಿಗಳ ಬಿಡುಗಡೆಗೆ ಸಿದ್ಧತೆ title=
Centre On Tandav Controversy (File Photo)

Centre On Tandav Controversy -  ನವದೆಹಲಿ: ಅಮೆಜಾನ್ ಪ್ರೈಮ್ (Amazon Prime) ನಲ್ಲಿ ಮೂಡಿಬಂದ ವೆಬ್ ಸಿರೀಸ್ 'Tandav'ಮೇಲೆ ವಿವಾದ ಹೆಚ್ಚಾಗುತ್ತಿದ್ದಂತೆ, ಸರ್ಕಾರ ಈ ರೀತಿಯ ಕಂಟೆಂಟ್ ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಶೀಘ್ರದಲ್ಲಿಯೇ ಸರ್ಕಾರ ಓಟಿಟಿ ಪ್ಲಾಟ್ಫಾರ್ಮ್ ಹಾಗೂ ಆನ್ಲೈನ್ ಸ್ಟ್ರೀಮಿಂಗ್ ಕಂಟೆಂಟ್ ಅನ್ನು ನಿಯಂತ್ರಿಸಲು ವ್ಯವಸ್ಥೆಯೊಂದನ್ನು ಜಾರಿಗೆ ತರಲಿದೆ. ಶೀಘ್ರದಲ್ಲಿಯೇ ಇವುಗಳಿಗೆ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುವುದು ಎಂದು ಸರ್ಕಾರ ಹೇಳಿದೆ. ಈ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೆಕರ್ ಮಾಹಿತಿ ನೀಡಿದ್ದಾರೆ. ಭಾನುವಾರ ಜನವರಿ 31 ರಂದು ಸುದ್ದಿಗೋಷ್ಠಿ ನಡೆಸಿರುವ ಅವರು ಈ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ- ಇನ್ಮುಂದೆ Netflix,Hotstar ಹಾಗೂ ಇತರೆ OTT ಕಂಟೆಂಟ್ ಗಳ ಮೇಲೆ ಕೇಂದ್ರ ಸರ್ಕಾರದ ನಿಗಾ

ಈ ಪ್ಲಾಟ್ಫಾರ್ಮ್ ಗಳ ಮೇಲೆ ಲಭ್ಯವಿರುವ ಕೆಲವು ಸರಣಿಗಳ ವಿರುದ್ಧ ಸಾಕಷ್ಟು ದೂರುಗಳು ಬಂದಿರುವುದರಿಂದ ಮಾಹಿತಿ ಪ್ರಸಾರ ಸಚಿವಾಲಯವು  Over the Top (OTT) ಪ್ಲಾಟ್‌ಫಾರ್ಮ್‌ಗಳಿಗೆ ಶೀಘ್ರದಲ್ಲೇ ಮಾರ್ಗಸೂಚಿಗಳನ್ನು ಜಾರಿಗೊಳಿಸಲಿದೆ  ಎಂದು ಪ್ರಕಾಶ್ ಜಾವಡೇಕರ್ (Prakash Javadekar)ಹೇಳಿದ್ದಾರೆ. ಇತ್ತೀಚೆಗೆ, 'ತಾಂಡವ' ವೆಬ್ ಸರಣಿ, ಮಿರ್ಜಾಪುರ (Mirzapur) ವೆಬ್ ಸರಣಿ ಮತ್ತು ಒಟಿಟಿಯಲ್ಲಿ ಬಿಡುಗಡೆಯಾದ ಚಿತ್ರಗಳ ವಿರುದ್ಧ ಜನರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ, ಆದ್ದರಿಂದ ಈಗ ಸರ್ಕಾರವು ಇಂತಹ ಚಿತ್ರಗೊಳಿಸಲು ಕೆಲವು ಮಾರ್ಗಸೂಚಿಗಳನ್ನು (Regulations) ಸಿದ್ಧಪಡಿಸಿದೆ ಮತ್ತು ಅವುಗಳನ್ನು ಶೀಘ್ರದಲ್ಲಿಯೇ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನು ಓದಿ-ಸ್ಯಾಂಡಲ್ ವುಡ್ ನಲ್ಲಿ ನೂತನ ದಾಖಲೆ ಸೃಷ್ಟಿಸಿದ ಪುನೀತ್ ರಾಜ್ ಕುಮಾರ್ ಬ್ಯಾನರ್ ನ ಈ ಸಿನಿಮಾ

ದೂರುಗಳು ಬಂದ ಹಿನ್ನೆಲೆ ಕೇಂದ್ರ ಸರ್ಕಾರದ ಗಂಭೀರ ಹೆಜ್ಜೆ
ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿರುವ ಪ್ರಕಾಶ್ ಜಾವಡೆಕರ್, "OTT Platform ಗಳ ಮೇಲೆ ಲಭ್ಯವಿರುವ ಕೆಲ ವೆಬ್ ಸಿರೀಜ್ ಗಳ ವಿರುದ್ಧ ನಮ್ಮ ಬಳಿ ದೂರುಗಳು ಬಂದಿವೆ. OTT ಪ್ಲಾಟ್ಫಾರ್ಮ್ ಗಳ ಮೇಲೆ ಬಿಡುಗಡೆಯಾಗುವ ಚಿತ್ರಗಳು, ಸಿರಿಯಲ್ಸ್ ಗಳು, ಡಿಜಿಟಲ್ ಸಮಾಚಾರ ಪತ್ರಗಳು, ಕೇಬಲ ಟೆಲಿವಿಶನ್ ನೆಟ್ವರ್ಕ್ ಆಕ್ಟ್ ಅಥವಾ ಸೆನ್ಸರ್ ಬೋರ್ಡ್ ಆಧಿನಕ್ಕೆ ಒಳಪಡುವುದಿಲ್ಲ. ಹೀಗಾಗಿ ಶೀಘ್ರದಲ್ಲಿಯೇ ಇವುಗಳಿಗೆ ನಿಯಂತ್ರಣಕ್ಕೆ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುವುದು" ಎಂದು ಹೇಳಿದ್ದಾರೆ. Tandav ಚಿತ್ರದ ವಿರುದ್ಧ ಉತ್ತರ ಪ್ರದೇಶದ ಲಖನೌ, ಗ್ರೇಟರ್ ನೋಯಡಾ, ಚಂಡಿಗಡ್, ಶಾಹಜನಾನ್ ಪುರ್, ಕರ್ನಾಟಕ್, ಮಧ್ಯಪ್ರದೇಶ್,  ರಾಜಸ್ಥಾನದ ಹಲವು ನಗರಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂಬುದು ಇಲ್ಲಿ ಗಮನಾರ್ಹ. ಹೀಗಾಗಿ ಸರ್ಕಾರ ಇನ್ಮುಂದೆ ವೆಬ್ ಸೀರೀಸ್ ನಿರ್ಮಾಪಕರಿಗೆ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ನಿರ್ಣಯ ಕೈಗೊಂಡಿದೆ.

ಇದನ್ನು ಓದಿ-ನ್ಯೂಸ್ ಪೋರ್ಟಲ್ಸ್, ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮೂಗುದಾರಕ್ಕೆ ಕೇಂದ್ರದ ಚಿಂತನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News