ನವದೆಹಲಿ: New Road Saftey Norms Soon - ಚಾಲಕರ ಸುರಕ್ಷತೆಗಾಗಿ ಮಹತ್ವದ ಕ್ರಮಗಳನ್ನು ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಸರಕಾರದ ಈ ನಿರ್ಧಾರದಿಂದ ವಾಹನ ಅಪಘಾತದಲ್ಲಿ ಜನರ ಸಾವು ಕಡಿಮೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.


COMMERCIAL BREAK
SCROLL TO CONTINUE READING

ಎಲ್ಲಾ 8 ಆಸನಗಳ ಕಾರುಗಳಲ್ಲಿ ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗುವುದು
8 ಜನರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿರುವ ಮೋಟಾರು ವಾಹನಗಳಲ್ಲಿ, ಆರು ಆಸನಗಳಿಗೆ ಏರ್ ಬ್ಯಾಗ್ ಗಳನ್ನು ಕಡ್ಡಾಯವಾಗಿ ಅಳವಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ (Union Road Transport Minister) ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ. ಈ ಸಂಬಂಧ ಕರಡು ಅಧಿಸೂಚನೆಗೆ ಇದೀಗ ಅನುಮೋದನೆ ನೀಡಲಾಗಿದೆ.


ಕರಡು ಅನುಮೋದಿಸಿದ ಸರ್ಕಾರ
ಇವುಗಳಲ್ಲಿ 2 ಟೋರ್ಸೋ ಏರ್‌ಬ್ಯಾಗ್‌ಗಳಾಗಿದ್ದರೆ, ಎರಡು ಟ್ಯೂಬ್ ಏರ್ ಬಗಳು ಇರಲಿವೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.ಈ ನಿರ್ಧಾರದ ನಂತರ ಭಾರತದಲ್ಲಿ ಮೋಟಾರು ವಾಹನ ಸುರಕ್ಷತೆಯಲ್ಲಿ ದೊಡ್ಡ ಸುಧಾರಣೆಯಾಗಲಿದೆ ಮತ್ತು ಅಪಘಾತಗಳಲ್ಲಿ ಜನರು ಮರಣಹೊಂದುವ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ. 


ಇದನ್ನೂ ಓದಿ-ಫೆಬ್ರುವರಿ 1 ಕ್ಕೆ ಕೇಂದ್ರ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್


ಏರ್‌ಬ್ಯಾಗ್‌ಗಳು ಪ್ರಸ್ತುತ ದುಬಾರಿ ವಾಹನಗಳಲ್ಲಿ ಮಾತ್ರ ಲಭ್ಯ
ಪ್ರಸ್ತುತ, ಏರ್‌ಬ್ಯಾಗ್‌ಗಳ ಸೌಲಭ್ಯವು ದುಬಾರಿ ವಾಹನಗಳಲ್ಲಿ ಮಾತ್ರ ಲಭ್ಯವಿದೆ ಎಂಬುದು ಇಲ್ಲಿ ಗಮಹಾರ್ಹ. ಮತ್ತೊಂದೆಡೆ, ಕಂಪನಿಗಳು ಸಾಮಾನ್ಯ ಕಾರುಗಳಲ್ಲಿ ಈ ಸೌಲಭ್ಯವನ್ನು ಒದಗಿಸುವುದಿಲ್ಲ. ಬಜೆಟ್ ಕಾರುಗಳಲ್ಲಿ ಏರ್‌ಬ್ಯಾಗ್‌ಗಳನ್ನು ಸ್ಥಾಪಿಸುವುದರಿಂದ ಅವುಗಳ ಬೆಲೆ ಹೆಚ್ಚಾಗುತ್ತದೆ ಮತ್ತು  ಅದು ಅವುಗಳ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂದು ಕಂಪನಿಗಳು ವಾದಿಸಿವೆ. ಇನ್ನೊಂದೆಡೆ ಐಷಾರಾಮಿ ವಾಹನಗಳಲ್ಲಿ ಈ ಬೆಲೆ ಹೆಚ್ಚಳವು ಅಷ್ಟೊಂದು ಪರಿಣಾಮ ಬೀರುವುದಿಲ್ಲ ಮತ್ತು ಅಲ್ಲಿ ಜನರು ಬಹಿರಂಗವಾಗಿ ಹಣ ಪಾವತಿಸುತ್ತಾರೆ.


ಇದನ್ನೂ ಓದಿ-EPF ನಲ್ಲಿ 25 ವರ್ಷದಿಂದ ಹೂಡಿಕೆ ಆರಂಭಿಸಿ ನಿವೃತ್ತಿಗೆ ಮಿಲಿಯನೇರ್ ಆಗಿ : ಹೇಗೆ ಇಲ್ಲಿದೆ ಲೆಕ್ಕಾಚಾರ


ಜನರ ಜೀವಕ್ಕೆ ರಕ್ಷಣೆ ನೀಡಲಾಗುವುದು
ಈ ಏರ್‌ಬ್ಯಾಗ್‌ಗಳು ಎಲ್ಲಾ ಬ್ರಾಂಡ್‌ಗಳ ಕಾರುಗಳಲ್ಲಿ ಲಭ್ಯವಿರಲಿವೆ ಎಂದು ನಿತೀನ್ ಗಡ್ಕರಿ ಹೇಳಿದ್ದಾರೆ. ಕಾರಿನ ಬೆಲೆ, ರೂಪಾಂತರ ಅಥವಾ ವಿಭಾಗದ ಆಧಾರದ ಮೇಲೆ ಯಾವುದೇ ಕಂಪನಿಯು ಅವುಗಳಲ್ಲಿ ಯಾವುದೇ ರೀತಿಯ ಕಾಂಪ್ರಮೈಸ್ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ ಫಾರ್ಚುನರ್ ಕಾರಿನಲ್ಲಿ 6 ಏರ್ ಬ್ಯಾಗ್ ಗಳು, ಫ್ಯಾಮಿಲಿ ಕಾರ್ ಎಂದು ಕರೆಯಲಾಗುವ ಮಾರುತಿಯ 8 ಸೀಟರ್ ಕಾರುಗಳಲ್ಲಿ ಅಷ್ಟೇ ಸಂಖ್ಯೆಯ ಏರ್ ಬ್ಯಾಗ್ ಗಳು ಇರಲಿವೆ. ಈ ಏರ್ ಬ್ಯಾಗ್ ಗಳ ಕಾರಣ ರಸ್ತೆ ಅವಘಡ ಸಂಭವಿಸಿದ ಸಂದರ್ಭಗಳಲ್ಲಿ  ಜನರಿಗೆ ಹೆಚ್ಚಿನ ಪೆಟ್ಟು ಬೀಳುವುದಿಲ್ಲ ಮತ್ತು ಅವರ ಜೀವದ ಅಪಾಯವು ಕಡಿಮೆಯಾಗಲಿದೆ.


ಇದನ್ನೂ ಓದಿ-ಕೋರೋನಾ ಪರಿಣಾಮ: ಮಧ್ಯಪ್ರದೇಶದಲ್ಲಿ ಜನವರಿ 31ರ ವರೆಗೆ ಶಾಲೆಗಳು ಬಂದ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.