1,600 ಕೋಟಿ ರೂ. ವೆಚ್ಚದ ಹೆದ್ದಾರಿ ಯೋಜನೆಗೆ ಒಪ್ಪಿಗೆ: ಗಡ್ಕರಿಗೆ ಸಂಸದ ಪ್ರತಾಪ್ ಸಿಂಹ ಧನ್ಯವಾದ

ಈ ರಸ್ತೆ ಅಭಿವೃದ್ಧಿಯಿಂದ ಮಡಿಕೇರಿ-ಕೇರಳದ ನಡುವಿನ ರಸ್ತೆ ಸಂಪರ್ಕ ಉತ್ತಮಗೊಳ್ಳುತ್ತದೆ. ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಉತ್ತಮ ಸಂಪರ್ಕ ಸಿಗಲಿದೆ ಎಂದು ಸಂಸದ್ ಪ್ರತಾಪ್ ಸಿಂಹ ತಿಳಿಸಿದ್ದರು.

Written by - Zee Kannada News Desk | Last Updated : Dec 15, 2021, 10:37 PM IST
  • ಚನ್ನರಾಯಪಟ್ಟಣ-ಮಾಕುಟ್ಟ ರಸ್ತೆ ಎನ್‌ಎಚ್‌ ಆಗಿ ಮೇಲ್ದರ್ಜೆಗೆರಿಸಲು ಕ್ರಮ
  • 183KM ಉದ್ದದ 1,600 ಕೋಟಿ ವೆಚ್ಚದ ಹೆದ್ದಾರಿ ನಿರ್ಮಾಣ ಯೋಜನೆಗೆ ಕೇಂದ್ರದ ಒಪ್ಪಿಗೆ
  • ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಧನ್ಯವಾದ ತಿಳಿಸಿದ ಸಂಸದ ಪ್ರತಾಪ್ ಸಿಂಹ
1,600 ಕೋಟಿ ರೂ. ವೆಚ್ಚದ ಹೆದ್ದಾರಿ ಯೋಜನೆಗೆ ಒಪ್ಪಿಗೆ: ಗಡ್ಕರಿಗೆ ಸಂಸದ ಪ್ರತಾಪ್ ಸಿಂಹ ಧನ್ಯವಾದ title=
ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪ್ರತಾಪ್ ಸಿಂಹ ಧನ್ಯವಾದ

ನವದೆಹಲಿ: ಚನ್ನರಾಯಪಟ್ಟಣ, ಅರಕಲಗೂಡು, ಶನಿವಾರಸಂತೆ, ಸೋಮವಾರಪೇಟೆ, ಮಡಿಕೇರಿ, ವಿರಾಜಪೇಟೆ ಮೂಲಕ ಮಾಕುಟ್ಟ ಬಳಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ 183 ಕಿ.ಮೀ. ಉದ್ದದ 1,600 ಕೋಟಿ ರೂ. ವೆಚ್ಚದ ಹೆದ್ದಾರಿ ನಿರ್ಮಾಣ ಯೋಜನೆ(Channarayapatna-Makutta)ಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಈ ಬಗ್ಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಯೋಜನೆಗೆ ಸಮ್ಮತಿ ನೀಡಿರುವ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari)ಯವರಿಗೆ ಧನ್ಯವಾದ ತಿಳಿಸಿದ್ದಾರೆ.

ಇದೇ ಯೋಜನೆಗಾಗಿ ಪ್ರತಾಪ್ ಸಿಂಹ(Prathap Simha) ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ, 'ರಸ್ತೆ ಸಂಪರ್ಕದ ಕೊರತೆಯಿಂದ ಕೊಡಗು ಪ್ರವಾಸೋದ್ಯಮ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲ. ಈಗಿನ ರಸ್ತೆಯು ದಟ್ಟವಾಗಿ ನಗರ ಪ್ರದೇಶಗಳು ಬೆಳೆದಿರುವ ಚನ್ನರಾಯಪಟ್ಟಣ, ಹೊಳೆನರಸಿಪುರ, ಅರಕಲಗೂಡು ಹಾಗೂ ವಿರಾಜಪೇಟೆ ಮೂಲಕ ಹಾದುಹೋಗುತ್ತದೆ. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಲಿದ್ದು, ಈ ರಸ್ತೆ ಕಾರಿಡಾರ್ ಯೋಜನೆಗೆ ಒಪ್ಪಿಗೆ ಸಿಗುವುದು ಕೊಡಗು ಜಿಲ್ಲೆಯ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಅತ್ಯಗತ್ಯ'ವೆಂದು ಹೇಳಿದ್ದರು.

ಇದನ್ನೂ ಓದಿ: PM Kisan ಯೋಜನೆಯ 10ನೇ ಕಂತು ನಾಳೆ : ರೈತರನ್ನು ಉದ್ದೇಶಿಸಿ ಪಿಎಂ ಮೋದಿ ಮಾತು

'ಈ ರಸ್ತೆ ಅಭಿವೃದ್ಧಿಯಿಂದ ಮಡಿಕೇರಿ-ಕೇರಳದ ನಡುವಿನ ರಸ್ತೆ ಸಂಪರ್ಕ ಉತ್ತಮಗೊಳ್ಳುತ್ತದೆ. ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಉತ್ತಮ ಸಂಪರ್ಕ ಸಿಗಲಿದೆ' ಎಂದು ಸಂಸದ ಪ್ರತಾಪ್ ಸಿಂಹ(Prathap Simha) ತಿಳಿಸಿದ್ದರು.

ತಮ್ಮ ಮತ್ತೊಂದು ಪೋಸ್ಟ್ ನಲ್ಲಿ, ‘ಮೈಸೂರು-ಬೆಂಗಳೂರು ದಶಪಥ ರಸ್ತೆಯುದ್ದಕ್ಕೂ ಬರುವ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣ ನಗರಗಳಿಗೆ ಪ್ರವೇಶ ಮತ್ತು ನಿರ್ಗಮನ (Entry-Exit) ಕಲ್ಪಿಸಲು ಪ್ರತ್ಯೇಕ ಯೋಜನೆಯಡಿ ಟೆಂಡರ್ ಕರೆಯಲು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಸೂಚನೆ ನೀಡಿದ್ದಾರೆಂದು’ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Aadhaar Card Update: ಕೇವಲ ಒಂದು ಲಿಂಕ್‌ನಲ್ಲಿ ನಿಮ್ಮ DOB ಬದಲಾಯಿಸಿ, ಇಲ್ಲಿದೆ ಸುಲಭ ಮಾರ್ಗ

‘ಅನಗತ್ಯ ಪ್ರಭಾವದಿಂದಾಗಿ ಬೇಲೂರಿನಿಂದ ಬಿಳಿಕೆರೆವರೆಗಿನ ಹೆದ್ದಾರಿಯಲ್ಲಿ ಕೇವಲ ಹಾಸನದಿಂದ ಹೊಳೆನರಸೀಪುರದವರೆಗೆ (ಯಡೆಗೌಡನಹಳ್ಳಿ) ಮಾತ್ರ 4 ಪಥದ ರಸ್ತೆ ನಿರ್ಮಾಣವಾಗಿದ್ದು, ಬಾಕಿಯಿರುವ ಬೇಲೂರು-ಹಾಸನ, ಹೊಳೆನರಸೀಪುರ-ಬಿಳಿಕೆರೆ ಮಾರ್ಗವನ್ನೂ 4 ಪಥವಾಗಿಸಿ ಟೆಂಡರ್ ಕರೆಯಲು ಒಪ್ಪಿಗೆ ನೀಡಿದ ನಿತಿನ್ ಗಡ್ಕರಿಯವರಿಗೆ ಅನಂತ ಧನ್ಯವಾದಗಳು’ ಎಂದು ಅವರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News