ಡಿಸೆಂಬರ್ 1 ರಿಂದಾಗಲಿವೆ ಈ 5 ಪ್ರಮುಖ ಬದಲಾವಣೆ, ಜನಸಾಮಾನ್ಯರ ಮೇಲೆ ನೇರ ಪ್ರಭಾವ
ಡಿಸೆಂಬರ್ 1, 2021ಕ್ಕೆ 5 ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿದ್ದು, ಜನಸಾಮಾನ್ಯರ ಜೀವನದ ಜೊತೆಗೆ ಇವು ನೇರ ಸಂಬಂಧ ಹೊಂದಿವೆ ಎನ್ನಲಾಗಿದೆ.
ನವದೆಹಲಿ: 2020 ರ ಡಿಸೆಂಬರ್ 1 ರಿಂದ ದೇಶದಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಜಾರಿಗೆ ಬರುತ್ತಿವೆ, ಅವು ಸಾಮಾನ್ಯ ಜನರ ಜೀವನಕ್ಕೆ ನೇರವಾಗಿ ಸಂಬಂಧಿಸಿವೆ. ಕರೋನಾ ತಡೆಗಟ್ಟಲು ನಿಗಾವಹಿಸುವಿಕೆ ಮತ್ತು ಜಾಗರೂಕತೆಗಾಗಿ ಹೊಸ ಮಾರ್ಗಸೂಚಿಗಳು ಜಾರಿಗೆ ಬರುತ್ತಿವೆ ಮತ್ತು ಬ್ಯಾಂಕಿಂಗ್ ನಿಯಮಗಳಲ್ಲಿನ ಕೆಲ ಬದಲಾವಣೆಗಳಾಗುತ್ತಿವೆ. ಡಿಸೆಂಬರ್ 1 ರಿಂದ ದೇಶದಲ್ಲಿ ಯಾವ ಯಾವ ಬದಲಾವಣೆಗಳಾಗುತ್ತಿವೆ ಎಂಬುದನ್ನೊಮ್ಮೆ ತಿಳಿಯೋಣ ಬನ್ನಿ.
ಇದನ್ನು ಓದಿ- ಗ್ಯಾರಂಟಿ ರಹಿತ Business Loan ಬೇಕೇ? ಈ ಸಿಂಪಲ್ ಷರತ್ತು ಪೂರ್ಣಗೊಳಿಸಿ
ಕೊವಿಡ್-19 ನೂತನ ಮಾರ್ಗ ಸೂಚಿಗಳು
ರಾಜ್ಯ ಮಾತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾ ಹರಡುವಿಕೆಯನ್ನು ತಡೆಯಲು ಕ್ರಮ, SOPs ಹಾಗೂ ಸೂಕ್ತ ವ್ಯವಹಾರ, ಎಚ್ಚರಿಕೆ ಹಾಗೂ ಜನಸಂದಣಿ ನಿಯಂತ್ರಣ ಇವೆಲ್ಲವೂಗಳನ್ನೂ ಕಠಿಣವಾಗಿ ಜಾರಿಗೊಳಿಸಲಾಗುತ್ತಿದೆ. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾಡಳಿತಗಳ ಮೂಲಕ ಮೈಕ್ರೋ ಲೆವೆಲ್ ನಲ್ಲಿ ಕಂಟೇನ್ಮೆಂಟ್ ಜೋನ್ ಗಳ ಸುನಿಸ್ಚಿತಗೊಳಿಸಲಾಗುತ್ತಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಈ ಕಂಟೇನ್ಮೆಂಟ್ ಜೋನ್ ಗಳಲ್ಲಿ ಕೆಲಸಗಳಿಗೆ ಅನುಮತಿ ನೀಡಲಾಗುವುದು. ಜೊತೆಗೆ ಮೆಡಿಕಲ್ ಎಮೆರ್ಜೆನ್ಸಿ ಹಾಗೂ ಅತ್ಯಾವಶ್ಯಕ ವಸ್ತುಗಳು ಹಾಗೂ ಸೇವೆಗಳು ಮಾತ್ರ ಲಭ್ಯವಿರಲಿವೆ. ಜೋನ್ ಗಳಿಂದ ಜನರ ಹೊರಬರುವಿಕೆ ಹಾಗೂ ಒಳ ಹೋಗಲು ನಿರ್ಬಂಧ ವಿಧಿಸಲಾಗುತ್ತಿದೆ. ಫೇಸ್ ಮಾಸ್ಕ್ ಕಡ್ಡಾಯಗೊಳಿಸಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತ ಮಂಡಳಿ ಕ್ರಮಜರುಗಿಸುವ ಸಾಧ್ಯತೆ ಇದೆ ಹಾಗೂ ಕಾರ್ಯ ಕ್ಷೇತ್ರದಲ್ಲಿ ಮಾಸ್ಕ್ ಧರಿಸದೆ ಹೋದಲ್ಲಿ ದಂಡ ಕೂಡ ಬೀಳುವ ಸಾಧ್ಯತೆ ಇದೆ.
ಇದನ್ನು ಓದಿ- 15 ಸೆಕೆಂಡ್ ಗಳಿಗಿಂತಲೂ ಕಮ್ಮಿ ಅವಧಿಯಲ್ಲಿ No Cost EMI ಮೇಲೆ ವಸ್ತುಗಳನ್ನು ಖರೀದಿಸಿ
PNB ATMನಿಂದ ಹಣ ಹಿಂಪಡೆಯುವ ನಿಯಮದಲ್ಲಿ ಬದಲಾವಣೆ
ಡಿಸೆಂಬರ್ 1 ರಿಂದ PNB 2.0 OTP ಆಧಾರಿತ ಹಣ ಹಿಂಪಡೆಯುವಿಕೆಯ ನಿಯಮ ಜಾರಿಗೆ ಬರಲಿದೆ. ಅಂದರೆ ಈ ಬ್ಯಾಂಕ್ ಏಟಿಎಂಗಳಿಂದ ರಾತ್ರಿ 8 ರಿಂದ ಬೆಳಗ್ಗೆ 8 ಗಂಟೆಯವರೆಗೆ ಏಕಕಾಲಕ್ಕೆ 10 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಹಣ ಹಿಂಪಡೆಯಳು OTP ಅನಿವಾರ್ಯವಾಗಲಿದೆ. ಹೀಗಾಗಿ ಗ್ರಾಹಕರು ತಮ್ಮ ಅಧಿಕೃತ ಮೊಬೈಲ್ ATMಗೆ ತೆಗೆದುಕೊಂಡು ಹೋಗಬೇಕಾಗಲಿದೆ.
ಇದನ್ನು ಓದಿ- Gold-Silver ಬೆಲೆಯಲ್ಲಿ ಭಾರಿ ಕುಸಿತ... ಮದುವೆ ಸೀಜನ್ ನಲ್ಲಿ ಖರೀದಿಗೆ ಉತ್ತಮ ಅವಕಾಶ
24X7 RTGS ಸೌಕರ್ಯ
ಡಿಸೆಂಬರ್ 1 ರಿಂದ ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ (RTGS) ಸೌಲಭ್ಯವು 24 ಗಂಟೆ ಏಳು ದಿನಗಳು ಲಭ್ಯವಿರುತ್ತದೆ. ಅಂದರೆ, ಗ್ರಾಹಕರು ವರ್ಷದ 365 ದಿನಗಳು ಆರ್‌ಟಿಜಿಎಸ್ ಮೂಲಕ ಯಾವುದೇ ಸಮಯದಲ್ಲಿ ಹಣವನ್ನು ವಹಿವಾಟು ಮಾಡಲು ಸಾಧ್ಯವಾಗುತ್ತದೆ. ಪ್ರಸ್ತುತ ಈ ವ್ಯವಸ್ಥೆಯು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಹೊರತುಪಡಿಸಿ ವಾರದ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಲಭ್ಯವಿದೆ.
ಇದನ್ನು ಓದಿ- Google Sites: Freeಯಾಗಿ ವೆಬ್ ಸೈಟ್ ರಚಿಸಿ ನಿಮ್ಮ ಬಿಸಿನೆಸ್ ಹಾಗೂ ಸ್ಟಾರ್ಟ್ ಅಪ್ ಗೆ ಹೊಸ ಮೆರಗು ನೀಡಿ
ಹೊಸ ಟ್ರೈನ್
ಮುಂಬೈ-ಹೌರಾ ಡೈಲಿ ಸೂಪರ್‌ಫಾಸ್ಟ್ ರೈಲು ಡಿಸೆಂಬರ್ 1 ರಿಂದ ಮತ್ತೆ ತನ್ನ ಓಡಾಟ ಆರಂಭಿಸಲಿದೆ. ಮುಂಬೈ-ಹೌರಾ ರೈಲು ತನ್ನ ಹಳೆ ಟೈಮ್ ಟೇಬಲ್ ನಂತೆಯೇ ಚಲಿಸಲಿದೆ. ಜಬಲ್ಪುರ-ನಾಗ್ಪುರ ವಿಶೇಷ ರೈಲು ಕೂಡ ಡಿಸೆಂಬರ್ 1 ರಿಂದ ಪ್ರಾರಂಭವಾಗುತ್ತಿದೆ. ಲಾಕ್ ಡೌನ್ ನಂತರ ಅದರ ಸೇವೆಯನ್ನು ನಿಲ್ಲಿಸಲಾಗಿತ್ತು. ರೇವಾ ವಿಶೇಷ ಮತ್ತು ಸಿಂಗ್ರೌಲಿ ವಿಶೇಷ ರೈಲು ಕೂಡ ಡಿಸೆಂಬರ್ 1 ರಿಂದ ತನ್ನ ಓಡಾಟ ಆರಂಭಿಸಲಿವೆ. ಇದಲ್ಲದೆ, ಝೇಲಮ್ ಎಕ್ಸ್‌ಪ್ರೆಸ್ ಮತ್ತು ಪಂಜಾಬ್ ಮೇಲ್ ಸಹ ಮತ್ತೆ ರೈಲು ಹಳಿವೆ ಮರಳಲಿವೆ.
ಇದನ್ನು ಓದಿ- Google Payನಿಂದ ಹಣ ವರ್ಗಾವಣೆಗೆ ಶುಲ್ಕ ವಿಧಿಸಲಾಗುತ್ತದೆಯೇ? ಇದು ಎಷ್ಟು ಸತ್ಯ..!
LPG ದರ ಪರಿಷ್ಕರಣೆ
ಪ್ರತಿ ತಿಂಗಳ 1ನೇ ತಾರೀಖಿಗೆ LPG ಸಿಲಿಂಡರ್ ಬೆಲೆ ಪರಿಷ್ಕರಿಸಲಾಗುತ್ತದೆ ಆದರೆ, ಕಳೆದ ಆರು ತಿಂಗಳಿಂದ ಇದರಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಎಲ್‌ಪಿಜಿಯ ಬೆಲೆಗಳು ಡಿಸೆಂಬರ್ ತಿಂಗಳಲ್ಲಿ ಹೆಚ್ಚಾಗುತ್ತವೆಯೇ ಅಥವಾ ಕಡಿಮೆಯಾಗುತ್ತವೆಯೇ ಅಥವಾ ಅಥವಾ ಪ್ರಸ್ತುತ ಬೆಲೆಯೇ ಮುಂದುವರೆಯಲಿದೆ ಎಂಬುದು ಕಾದುನೋಡಬೇಕು.