ನವದೆಹಲಿ: ರಾಷ್ಟ್ರೀಯ ರಾಜಧಾನಿಯಾದ ಸುಮಾರು 68 ಶೇಕಡ ಜನರು ಈ ದೀಪಾವಳಿಯಲ್ಲಿ ಪಟಾಕಿ ಸಿಡಿಸದಿರಲು ನಿರ್ಧರಿಸಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. 


COMMERCIAL BREAK
SCROLL TO CONTINUE READING

ದೇಶಾದ್ಯಂತ ಪಟಾಕಿ ಮಾರಾಟ ನಿಷೇಧಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿ ಮಂಗಳವಾರ ತನ್ನ ತೀರ್ಪು ಪ್ರಕಟಿಸಿದ್ದ ಸುಪ್ರೀಂಕೋರ್ಟ್ ಪಟಾಕಿ ಮಾರಾಟದ ಮೇಲೆ ನಿಷೇಧ ಹೇರಲು ನಿರಾಕರಿಸಿ, ಕಡಿಮೆ ಮಾಲಿನ್ಯಕಾರಕ ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವಂತೆ ತಿಳಿಸಿತ್ತು. ಜೊತೆಗೆ ದೀಪಾವಳಿಯ ದಿನದಂದು ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಅನುವು ಮಾಡಿಕೊಟ್ಟಿದೆ.


ದೆಹಲಿಯ ಸ್ಥಳೀಯ ಮಾಧ್ಯಮ ವೇದಿಕೆಗಳಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ 75 ಸಾವಿರ ಜನರು ಭಾಗವಹಿಸಿದ್ದಾರೆ ಮತ್ತು ಸ್ಥಳೀಯ ವಲಯದಿಂದ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಸಮೀಕ್ಷೆ ನಡೆಸಲಾಯಿತು. ಲೋಕಲ್ ಸ್ಕರ್ಕಿಲ್ಸ್ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಸುಮಾರು 68 ಪ್ರತಿಶತ ನಾಗರಿಕರು ಮಾಲಿನ್ಯ ಮಟ್ಟವನ್ನು ಖಾತ್ರಿಪಡಿಸಿಕೊಳ್ಳಲು ದೀಪಾವಳಿಯಲ್ಲಿ ಪಟಾಕಿಯನ್ನು ಸಿಡಿಸುವುದಿಲ್ಲ ಮತ್ತು ನಗರವನ್ನು ಗ್ಯಾಸ್ ಚೇಂಬರ್ ಆಗಿ ಪರಿವರ್ತಿಸುವುದನ್ನು ತಡೆಗಟ್ಟುತ್ತೇವೆ ಎಂದು ತಿಳಿಸಿದ್ದಾರೆ. 2016 ರಲ್ಲಿ, ದೀಪಾವಳಿ ಸಮಯದಲ್ಲಿ pm ಮಟ್ಟವು ದೆಹಲಿಯ ಕೆಲವು ಪ್ರದೇಶಗಳಲ್ಲಿ 1,238 ವರೆಗೆ ತಲುಪಿತ್ತು. 


ಅಕ್ಟೋಬರ್ 2017 ರಲ್ಲಿ ಸರ್ವೋಚ್ಚ ನ್ಯಾಯಾಲಯವು ದೀಪಾವಳಿಯಲ್ಲಿ ದೆಹಲಿಯಲ್ಲಿ ಪಟಾಕಿ ಮಾರಾಟದ ಮೇಲೆ ನಿಷೇಧ ಹೇರಿತ್ತು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಪ್ರಕಾರ, ಇದರಿಂದಾಗಿ ದೆಹಲಿಯಲ್ಲಿ 2016ರ ದೀಪಾವಳಿಗಿಂತ 2017ರ ದೀಪಾವಳಿಯಲ್ಲಿ ಮಾಲಿನ್ಯದ ಮಟ್ಟ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿತು ಎಂದು ತಿಳಿದುಬಂದಿದೆ.