ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ನೈಟ್ ಕರ್ಫ್ಯೂ ವಿಧಿಸುವ ಪ್ರಸ್ತಾಪವನ್ನು ಸಲ್ಲಿಸಿದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ನೈಟ್ ಕರ್ಫ್ಯೂ ವಿಧಿಸುವ ಪ್ರಸ್ತಾವನೆ ಪರಿಗಣಿಸಿದ್ದೆ ಆದ್ರೆ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ(Night Curfew) ಜಾರಿ ಮಾಡಲಾಗುತ್ತದೆ. ಅಲ್ಲದೆ, ವಿವಿಧ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲಾಗುತ್ತಿದೆ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ : Assembly elections 2021: ಇಂದು ಪಂಚರಾಜ್ಯಗಳಲ್ಲಿ ಮತದಾನ! ಎಲ್ಲಿ ಹೇಗಿದೆ ವ್ಯವಸ್ಥೆ?


 ನಾಲ್ಕನೇ ಅಲೆಯ ಕೋವಿಡ್ -19 ದೆಹಲಿಯಲ್ಲಿ ಹರಡುತ್ತಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್(Arvind Kejriwal) ಶುಕ್ರವಾರ ಹೇಳಿದ್ದಾರೆ. ದೆಹಲಿಯಲ್ಲಿ ಲಾಕ್ ಡೌನ್ ಕುರಿತು ಯಾವುದೇ ನಿರ್ಧಾರಕ್ಕೆ ಇನ್ನೂ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 


ಇದನ್ನೂ ಓದಿ : Assembly Elections 2021: ಅಸ್ಸಾಂ-ಬಂಗಾಳದಲ್ಲಿ ಇಂದು ಮೂರನೇ ಹಂತದ ಮತದಾನ, ಕೇರಳ-ತಮಿಳುನಾಡು, ಪುದುಚೇರಿಯಲ್ಲಿ ಮತದಾನಕ್ಕೆ ಭಾರೀ ಬಿಗಿ ಭದ್ರತೆ


ದೆಹಲಿ ಸರ್ಕಾರ ಬಿಡುಗಡೆ ಮಾಡಿದ್ದ ಹೆಲ್ತ್ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಒಟ್ಟು 3,548 ಕೋವಿಡ್ -19(COVID-19) ಪ್ರಕರಣಗಳು ಪತ್ತೆಯಾಗಿವೆ, ಮತ್ತು 15 ಸಾವುಗಳು ವರದಿಯಾಗಿವೆ.


ಇದನ್ನೂ ಓದಿ : ಕೊರೊನಾ ಪ್ರಕರಣ ಹೆಚ್ಚಳ: ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಎಪ್ರಿಲ್ 8 ಕ್ಕೆ ಸಭೆ


ರಾಷ್ಟ್ರ ರಾಜಧಾನಿ(National Capital)ಯಲ್ಲಿ ಇಲ್ಲಿಯವರೆಗೆ ಒಟ್ಟು ಮೊತ್ತ 6,79,962 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.  ಸತತ ನಾಲ್ಕನೇ ದಿನಗಳಲ್ಲಿ 3,500 ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. ಭಾನುವಾರ 4,033 ಹೊಸ ಪ್ರಕರಣಗಳನ್ನು ವರದಿಯಾಗಿವೆ, ಇದು 2021 ರಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾದ ದಿನವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.