ಜಾಮೀನು ಪಡೆಯಲು ಸಾಕು ನಾಯಿಗೆ ಮೊರೆಹೋಗಿದ್ದ ನೀರವ್ ಮೋದಿ..!
ವಜ್ರದ ವ್ಯಾಪಾರಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಜಾಮೀನು ಪಡೆದುಕೊಳ್ಳಲು ಸತತ ಎರಡನೇ ಬಾರಿಗೆ ವಿಫಲರಾಗಿದ್ದಾರೆ. ಅಚ್ಚರಿಯೆಂದರೆ ಅವರ ರಕ್ಷಣಾ ತಂಡ ಈ ಬಾರಿ ಅವರಿಗೆ ಜಾಮೀನು ಪಡೆಯಲು ಸಾಕುನಾಯಿಯ ಪ್ರಯೋಗಕ್ಕೆ ಮುಂದಾಗಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ.
ನವದೆಹಲಿ: ವಜ್ರದ ವ್ಯಾಪಾರಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಜಾಮೀನು ಪಡೆದುಕೊಳ್ಳಲು ಸತತ ಎರಡನೇ ಬಾರಿಗೆ ವಿಫಲರಾಗಿದ್ದಾರೆ. ಅಚ್ಚರಿಯೆಂದರೆ ಅವರ ರಕ್ಷಣಾ ತಂಡ ಈ ಬಾರಿ ಅವರಿಗೆ ಜಾಮೀನು ಪಡೆಯಲು ಸಾಕುನಾಯಿಯ ಪ್ರಯೋಗಕ್ಕೆ ಮುಂದಾಗಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ.
ಮುಖ್ಯ ನ್ಯಾಯಾಧೀಶ ಎಮ್ಮಾ ಅರ್ಬುತ್ನಾಟ್ ಅವರು ಶುಕ್ರವಾರದಂದು ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ನೀರವ್ ಮೋದಿಗೆ ಜಾಮೀನು ಅರ್ಜಿಯನ್ನು ನಿರಾಕರಿಸಿದರು ಎನ್ನಲಾಗಿದೆ.ಮೋದಿ ಅವರ ವಕೀಲ ಕ್ಲೇರ್ ಮೊಂಟ್ಗೊಮೆರಿ ಅವರಿಗೆ ಜಾಮೀನು ಒದಗಿಸಲು ಹಲವು ರೀತಿಯ ಪ್ರಯತ್ನ ಮಾಡಿದರೂ ಕೂಡ ನ್ಯಾಯಾದೀಶರ ಮನವೊಲಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
" ಚಾರ್ಟರ್ಹೌಸ್ (ಲಂಡನ್ನ ಶಾಲೆ) ನಲ್ಲಿ ಮಗ ಇದ್ದಾನೆ, ವಯಸ್ಸಾದ ಪೋಷಕರ ಸಂಕೇತವಾಗಿ ಮೋದಿ ಸಾಕು ನಾಯಿಯನ್ನು ಹೊಂದಿದ್ದಾರೆ" ಎಂದು ಅವರ ವಕೀಲ ಮೊಂಟ್ಗೊಮೆರಿ ತಿಳಿಸಿದ್ದಾರೆ. ಬ್ರಿಟನ್ ನಲ್ಲಿ ಸಾಕು ಪ್ರಾಣಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಅವರ ವಕೀಲರು ನೀರವ್ ಮೋದಿ ಎರಡನೇ ಪ್ರಯತ್ನವಾಗಿ ಸಾಕು ನಾಯಿಯನ್ನು ಬಳಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಭಾರತೀಯ ಅಧಿಕಾರಿಗಳ ಪರವಾಗಿ ವಾದಿಸಿರುವ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ (ಸಿಪಿಎಸ್), ನೀರವ್ ಮೋದಿಯನ್ನು ಒಂದು ವೇಳೆ ಬಿಡುಗಡೆ ಮಾಡಿದಲ್ಲಿ ಬೇರೆ ದೇಶಕ್ಕೆ ಹೋಗುವ ಸಾಧ್ಯತೆ ಇದೆ. ಅಲ್ಲದೆ ಸಾಕ್ಷಿಗಳನ್ನು ಮತ್ತು ಸಂಬಂಧಪಟ್ಟ ದಾಖಲೆಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ವಾದಿಸಿದರು.ಇದನ್ನು ಆಲಿಸಿದ ಅರ್ಬುತ್ನಾಟ್ ಜಾಮೀನು ನೀಡುವುದಕ್ಕೆ ತಡೆವೊಡ್ಡಿದ್ದಾರೆ ಎನ್ನಲಾಗಿದೆ.