ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕನಲ್ಲಿ 2 ಬಿಲಿಯನ್ ಡಾಲರ್ ವಂಚನೆ ಪ್ರಕರಣದ ಆರೋಪವನ್ನು ಎದುರಿಸುತ್ತಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತು ಅವರ ಕಂಪನಿಗೆ ಸೇರಿದ 11 ಪ್ರಾಪರ್ಟಿಯನ್ನು ದುಬೈನಲ್ಲಿ ಇಡಿ ವಶಪಡಿಸಿಕೊಂಡಿದೆ.


COMMERCIAL BREAK
SCROLL TO CONTINUE READING

ಈಗ ಈ ಆಸ್ತಿಯನ್ನು ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್ಎ) ನಿಯಂತ್ರಣ ಕಾಯ್ದೆ ಅಡಿಯಲ್ಲಿ ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.ಈಗ ಒಟ್ಟು ವಶ ಪಡಿಸಿಕೊಂಡಿರುವ ಆಸ್ತಿ 56.8 ಕೋಟಿ ಎಂದು ಹೇಳಲಾಗುತ್ತಿದೆ.


ಕಳೆದ ವಾರ ಹಾಂಗ್ ಕಾಂಗ್ ನಲ್ಲಿ ಇದೆ ಕಾಯ್ದೆ ಅಡಿಯಲ್ಲಿ ನಿರಾವ್ ಮೋದಿಯವರ 255 ಕೋಟಿ ರೂ.ಬೆಲೆ ಬಾಳುವ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿತ್ತು. ಬ್ಯಾಂಕ್ ವಂಚನೆಯ ಆರೋಪ ಬಂದಾಗಿನಿಂದ ನಿರಾವ್ ಮೋದಿ ತಲೆ ಮೆರೆಸಿಕೊಂಡಿದ್ದಾರೆ. ಈ ವರ್ಷದ ಪ್ರಾರಂಭದಲ್ಲಿ ಮತ್ತು ಇಂಟರ್ಪೋಲ್ ಬಂಧನ ವಾರಂಟ್ ಕೂಡ ಅವರಿಗೆ ಜಾರಿ ಆಗಿತ್ತು. 


ನೀರವ್ ಮೋದಿ ವಿರುದ್ದ ತಮ್ಮ ಹಾಗೂ ಕುಟುಂಬದ  ನಿಯಂತ್ರಣದಲ್ಲಿದ್ದ ನಕಲಿ ಕಂಪೆನಿಗಳಿಗೆ ವಿದೇಶದಲ್ಲಿರುವ 6,400 ಕೋಟಿ ಬ್ಯಾಂಕ್ ಹಣವನ್ನು ಸಾಗಿಸಿದ್ದಾರೆ ಎಂದು ಇಡಿ ಅವರ ವಿರುದ್ದ ಆರೋಪ ಪಟ್ಟಿಯನ್ನು ಸಲ್ಲಿಸಿತ್ತು. ಈ ವಿಚಾರವಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ದೂರು ನೀಡಿದ ಬಳಿಕ ಈ ಪ್ರಕರಣದ ಕುರಿತಾಗಿ ವಿಚಾರಣೆ ನಡೆಸಲಾಗುತ್ತಿದೆ.