New strain of coronavirus in India: ಭಾರತದಲ್ಲಿ ಇದುವರೆಗೆ 38 ಜನರಿಗೆ ಹೈಸ್ಪೀಡ್ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ  ಮಾಹಿತಿಯನ್ನು ನೀಡಿದೆ. ಕರೋನಾ ವೈರಸ್ನ ಹೊಸ ಸ್ಟ್ರೆನ್  ಬ್ರಿಟನ್ನಲ್ಲಿ ಮೊದಲು ಪತ್ತೆಯಾಗಿತ್ತು. ಈ ಹೊಸ ಪ್ರಕಾರದ ಕರೋನಾ ಶೇಕಡಾ 70 ರಷ್ಟು ಹೆಚ್ಚು ವೇಗವಾಗಿ ಹರಡುತ್ತದೆ ಎನ್ನಲಾಗುತ್ತಿದೆ.


COMMERCIAL BREAK
SCROLL TO CONTINUE READING

ಈ 38 ಜನರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬ್ರಿಟನ್ ನಿಂದ ಬಂದಿದ್ದಾರ ಅಥವಾ ಬ್ರಿಟನ್ ನಿಂದ ಬಂದ ಜನರ ಸಂಪರ್ಕದಲ್ಲಿ ಬಂದಿದ್ದಾರೆ ಎಂದು ಇಲಾಖೆ ಹೇಳಿದೆ.


ಇದನ್ನು ಓದಿ- Corona Strain: ಬೆಂಗಳೂರಿನ ಬಳಿಕ ಶಿವಮೊಗ್ಗಕ್ಕೂ ಶಾಕ್


ಈ ಕುರಿತು ಈಗಾಗಲೇ ಮುಂಜಾಗ್ರತೆಯನ್ನು ಕೈಗೊಂಡಿರುವ ಸರ್ಕಾರ ಬ್ರಿಟನ್ ಹಾಗೂ ಭಾರತದ ನಡುವಿನ ನಾಗರಿಕ ವಿಮಾನಯಾನ ಸೇವೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದೆ. ಅಂದರೆ ಜನವರಿ 7 ರವರೆಗೆ ಒಂದು ವಾರದವರೆಗೆ ಈ ತಡೆಯನ್ನು ವಿಸ್ತರಿಸಿದೆ. ಇದಾದ ಬಳಿಕ ಭಾರಿ ಕಠಿಣ ನಿಯಮಗಳ ಅನುಸರಿಸುವ ಮೂಲಕ ಈ ಸೇವೆಯನ್ನು ಮತ್ತೆ ಆರಂಭಿಸಲಾಗುವುದು ಎಂದು ಸರ್ಕಾರ ಹೇಳಿದೆ.


ಇದನ್ನು ಓದಿ- Corona new strain: ಈ ದೇಶದಲ್ಲಿ ಪ್ರಯಾಣ ಇತಿಹಾಸ ಹೊಂದಿರದ ಯುವಕನಲ್ಲೂ ಸೋಂಕು ಪತ್ತೆ


ನವೆಂಬರ್ 25 ರಿಂದ ಡಿಸೆಂಬರ್ 23ರ ನಡುವೆ ಮಧ್ಯರಾತ್ರಿಯವರೆಗೆ ಭಾರತಕ್ಕೆ ಬಂದಿರುವ ಸುಮಾರು 33 ಸಾವಿರ ಯಾತ್ರಿಗಳು ಹಾಗೂ ಅವರ ಸಂಪರ್ಕಕ್ಕೆ ಬಂದ ಜನರನ್ನು ಪತ್ತೆಹಚ್ಚಿ ಅವರ RT-PCR ಟೆಸ್ಟ್ ನಡೆಸಿ, ಸೋಂಕಿತರ ಬೆರಳಿನ ಉಗುರುಗಳನ್ನು ಜಿನೋಮ್ ಸಿಕ್ವೆನ್ಸಿಂಗ್ ಗಾಗಿ ಕಳುಹಿಸಲು ಕೇಂದ್ರ ಸರ್ಕಾರ ನಿರ್ದೇಶನಗಳನ್ನು ನೀಡಿದೆ.


ಇದನ್ನು ಓದಿ- Corona Strain: ವಿದೇಶದಿಂದ ಹಿಂದಿರುಗಿದ 6 ಪ್ರಯಾಣಿಕರಲ್ಲಿ 'ಬ್ರಿಟನ್' ಕರೋನಾ, ಹೆಚ್ಚಿದ ಆತಂಕ


ಹೊಸ ಸ್ಟ್ರೆನ್ ಕಾಯಿಲೆಯ ಗಂಭೀರತೆಯನ್ನು ಎಷ್ಟು ಹೆಚ್ಚಿಸುತ್ತದೆ ಎಂಬುದ ಇನ್ನೂ ಪತ್ತೆಯಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ. ಅದರೂ ಕೂಡ ಪ್ರಸ್ತುತ ಇರುವ ವೈರಸ್ ಗಿಂತ ಇದು ತುಂಬಾ ವೇಗದಲ್ಲಿ ಹರಡುತ್ತದೆ ಎಂದು ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.